Advertisement
ಚೆನ್ನೈ ಈವರೆಗೆ 11 ಪಂದ್ಯಗಳಲ್ಲಿ ಆರನ್ನು ಗೆದ್ದು 13 ಅಂಕ ಹೊಂದಿದೆ. ಇನ್ನೊಂದೆಡೆ ಡೆಲ್ಲಿ 10 ಪಂದ್ಯಗಳಲ್ಲಿ ನಾಲ್ಕನ್ನಷ್ಟೇ ಜಯಿಸಿದೆ. 8 ಅಂಕದೊಂದಿಗೆ ಅಂಕಪಟ್ಟಿಯ ತಳವನ್ನು ಗಟ್ಟಿ ಮಾಡಿಕೊಂಡಿದೆ. ಸನ್‌ರೈಸರ್ ಹೈದರಾಬಾದ್ ಕೂಡ ಇದೇ ಸ್ಥಿತಿಯಲ್ಲಿದ್ದರೂ ರನ್‌ರೇಟ್‌ನಲ್ಲಿ ತುಸು ಮುಂದಿದೆ.
Related Articles
ಚೆನ್ನೈ ಬ್ಯಾಟಿಂಗ್, ಅದರಲ್ಲೂ ಟಾಪ್-ಆರ್ಡರ್ ಬ್ಯಾಟರ್ ಪ್ರಚಂಡ ಫಾರ್ಮ್ನಲ್ಲಿದ್ದಾರೆ. ನ್ಯೂಜಿಲ್ಯಾಂಡ್‌ನ ಡೇವನ್ ಕಾನ್ವೇ ಅರ್ಧ ಶತಕ ಬಾರಿಸುವುದನ್ನು ಹವ್ಯಾಸವಾಗಿ ಮಾಡಿಕೊಂಡಿದ್ದಾರೆ. ಈಗಾಗಲೇ 457 ರನ್ ಇವರ ಖಾತೆಗೆ ಸೇರಿದೆ. ರುತುರಾಜ್ ಗಾಯಕ್ವಾಡ್ 292, ಅಜಿಂಕ್ಯ ರಹಾನೆ 245 ರನ್ ಮಾಡಿ ಚೆನ್ನೈ ಬ್ಯಾಟಿಂಗ್ ಸರದಿಗೆ ಬಲ ತುಂಬಿದ್ದಾರೆ. ಬಿಗ್ ಹಿಟ್ಟರ್ ಶಿವಂ ದುಬೆ ಇದೇ ಮೊದಲ ಸಲ ಐಪಿಎಲ್‌ನಲ್ಲಿ ಮಿಂಚು ಹರಿಸಲಾರಂಭಿಸಿದ್ದು ಚೆನ್ನೈ ಪಾಲಿಗೊಂದು ಪ್ಲಸ್ ಪಾಯಿಂಟ್. ಅವರು 9 ಪಂದ್ಯಗಳಿಂದ 290 ರನ್ ರಾಶಿ ಹಾಕಿದ್ದಾರೆ.
Advertisement
ಆದರೆ ಚೆನ್ನೈ ಕೆಳ ಸರದಿಯ ಬ್ಯಾಟಿಂಗ್ ನಿರೀಕ್ಷಿತ ಯಶಸ್ಸು ಕಾಣುತ್ತಿಲ್ಲ. ಅನುಭವಿ ಅಂಬಾಟಿ ರಾಯುಡು (11 ಪಂದ್ಯ 95 ರನ್), ರವೀಂದ್ರ ಜಡೇಜ (11 ಪಂದ್ಯ, 92 ರನ್) ಸಂಪೂರ್ಣ ವಿಫಲರಾಗಿದ್ದಾರೆ. ಧೋನಿ ಕ್ರೀಸ್ ಇಳಿಯುವಾಗ ಇನ್ನಿಂಗ್ಸ್ ಮುಗಿದಿರುತ್ತದೆ. ಆದರೆ ಈ ಕೊರತೆಯನ್ನು ಅಗ್ರ ಕ್ರಮಾಂಕದ ಬ್ಯಾಟರ್ ಯಶಸ್ವಿಯಾಗಿ ನಿಭಾಯಿಸುತ್ತಿರುವುದು ಚೆನ್ನೈ ತಂಡದ ಹೆಚ್ಚುಗಾರಿಕೆ.
ಅಪರೂಪದ ಯಶಸ್ಸುಕೂಟದಲ್ಲೇ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡುತ್ತ ಬಂದ ಡೆಲ್ಲಿ ಕ್ಯಾಪಿಟಲ್ಸ್, ತನ್ನ ಹಿಂದಿನ ಪಂದ್ಯದಲ್ಲಿ ಆರ್‌ಸಿಬಿ ವಿರುದ್ಧ ಅಪರೂಪದ ಯಶಸ್ಸು ಕಂಡಿತ್ತು. ಆರಂಭಕಾರ ಫಿಲಿಪ್ ಸಾಲ್ಟ್ ಸಿಡಿದು ನಿಂತಿದ್ದರು. ತನ್ನ ಸ್ಫೋಟಕ ಶೈಲಿಗೆ ವಿರುದ್ಧವಾಗಿ ಆಡುತ್ತಿದ್ದ ಡೇವಿಡ್ ವಾರ್ನರ್ ಕೂಡ ಬಿರುಸು ಪಡೆದಿದ್ದರು. ಮಿಚೆಲ್ ಮಾರ್ಷ್, ರಿಲೀ ರೋಸ್ಯೂ ಅವರ ಬ್ಯಾಟಿಂಗ್ ಕೂಡ ಆಕರ್ಷಕವಾಗಿತ್ತು. ಹೀಗೆ ವಿದೇಶಿ ಕ್ರಿಕೆಟಿಗರ ಕೋಟಾವನ್ನು ಅಗ್ರ ಕ್ರಮಾಂಕದಲ್ಲೇ ಮುಗಿಸಿರುವ ಡೆಲ್ಲಿ ಇದರಲ್ಲಿ ಧಾರಾಳ ಯಶಸ್ಸು ಕಂಡಿತ್ತು. ಚೆನ್ನೈ ವಿರುದ್ಧವೂ ಇದೇ ಮಟ್ಟದ ಪ್ರದರ್ಶನ ನೀಡಿದರಷ್ಟೇ ಡೆಲ್ಲಿಯ 5ನೇ ಗೆಲುವನ್ನು ನಿರೀಕ್ಷಿಸಬಹುದು. ಡೆಲ್ಲಿಯ ಬೌಲಿಂಗ್ ವಿಭಾಗ ಚೆನ್ನೈಗೆ ಹೋಲಿಸಿದರೆ ತೀರಾ ಸಾಮಾನ್ಯ. ಇಶಾಂತ್ ಶರ್ಮ, ಖಲೀಲ್ ಅಹ್ಮದ್, ಮುಕೇಶ್ ಕುಮಾರ್, ಮಿಚೆಲ್ ಮಾರ್ಷ, ಅಕ್ಷರ್ ಪಟೇಲ್, ಕುಲದೀಪ್ ಯಾದವ್ ಅವರೆಲ್ಲ ಹೆಚ್ಚು ಘಾತಕವಾಗಿ ಪರಿಣಮಿಸಬೇಕಿದೆ. ಆರ್‌ಸಿಬಿ ವಿರುದ್ಧ ಇವರಿಗೆ ಉರುಳಿಸಲು ಸಾಧ್ಯವಾದದ್ದು 4 ವಿಕೆಟ್ ಮಾತ್ರ ಎಂಬುದನ್ನು ಗಮನಿಸಬೇಕು.