Advertisement

ಸೋಶಿಯಲ್‌ ಮೀಡಿಯಾದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹವಾ!

09:38 AM Nov 19, 2020 | keerthan |

ಹೊಸದಿಲ್ಲಿ: ಈ ಸಲವೂ ಮುಂಬೈ ಐಪಿಎಲ್‌ ಚಾಂಪಿಯನ್‌ ಆಗಿರಬಹುದು, ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಬೀಸಿದ್ದು ಚೆನ್ನೈ ಸೂಪರ್‌ ಕಿಂಗ್ಸ್‌ ಹವಾ!

Advertisement

ಹೌದು, 13ನೇ ಐಪಿಎಲ್‌ ವೇಳೆ ಅತ್ಯಧಿಕ ಟ್ವೀಟ್‌ ಮಾಡಿದ ತಂಡವೆಂದರೆ ಧೋನಿ ಸಾರಥ್ಯದ ಚೆನ್ನೈ ಸೂಪರ್‌ ಕಿಂಗ್ಸ್‌. ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಮುಂಬೈ ಇಂಡಿಯುನ್ಸ್ ತಂಡಗಳಿವೆ.

ಮುಂಬೈ-ಚೆನ್ನೈ ನಡುವಿನ ಉದ್ಘಾಟನಾ ಪಂದ್ಯ ಅತ್ಯಧಿಕ ಟ್ವೀಟ್‌ಗಳಿಗೆ ಸಾಕ್ಷಿಯಾದ ಮುಖಾಮುಖಿಯಾಗಿದೆ. ಡಬಲ್‌ ಸೂಪರ್‌ ಓವರ್‌ ಕಂಡ ಮುಂಬೈ-ಪಂಜಾಬ್‌ ಪಂದ್ಯ ಟ್ವೀಟ್‌ ಲೆಕ್ಕಾಚಾರದಲ್ಲಿ 3ನೇ ಸ್ಥಾನದಲ್ಲಿದೆ. ಅತೀ ಹೆಚ್ಚು ಟ್ವೀಟ್‌ ಮಾಡಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾದವರು ವಿರಾಟ್‌ ಕೊಹ್ಲಿ.

ಸಚಿನ್‌ ಗೋಲ್ಡನ್‌ ಟ್ವೀಟ್‌

“ಗೋಲ್ಡನ್‌ ಟ್ವೀಟ್‌’ ಹಿರಿಮೆ ಸಚಿನ್‌ ತೆಂಡುಲ್ಕರ್‌ ಪಾಲಾಗಿದೆ. ಅವರು ನಿಕೋಲಸ್‌ ಪೂರಣ್‌ ಅವರ ಕ್ಷೇತ್ರರಕ್ಷಣೆಯನ್ನು ಮೆಚ್ಚಿ, “ದಿಸ್‌ ಈಸ್‌ ದ ಬೆಸ್ಟ್‌ ಸೇವ್‌ ಐ ಹ್ಯಾವ್‌ ಸೀನ್‌ ಇನ್‌ ಮೈ ಲೈಫ್. ಸಿಂಪ್ಲಿ ಇನ್‌ಕ್ರೆಡಿಬಲ್‌!!’ ಎಂಬ ಟ್ವೀಟ್‌ 23 ಸಾವಿರ ರೀಟ್ವೀಟ್‌ ದಾಖಲೆಗೆ ಪಾತ್ರವಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next