Advertisement

ರಾಹುಲ್ ತ್ರಿಪಾಠಿ ಬೊಂಬಾಟ್ ಬ್ಯಾಟಿಂಗ್ ; ಚೆನ್ನೈ ಗೆಲುವಿಗೆ 168 ರನ್ ಗುರಿ

09:54 PM Oct 07, 2020 | Hari Prasad |

ಅಬುದಾಭಿ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಕೊಲ್ಕೊತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ ಕ್ರೀಡಾಕೂಟದ 21ನೇ ಪಂದ್ಯದಲ್ಲಿ ಚೆನ್ನೈ ಗೆಲುವಿಗೆ 168 ರನ್ ಗಳ ಸವಾಲು ಲಭಿಸಿದೆ.

Advertisement

ಟಾಸ್ ಗೆದ್ದ ಕೆಕೆಆರ್ ನಾಯಕ ದಿನೇಶ್ ಕಾರ್ತಿಕ್ ಬ್ಯಾಟಿಂಗ್ ಆಯ್ದುಕೊಂಡರು.

ಆರಂಭಿಕ ಆಟಗಾರ ರಾಹುಲ್ ತ್ರಿಪಾಠಿ ಅವರ ಬೊಂಬಾಟ್ ಬ್ಯಾಟಿಂಗ್ ನೆರವಿನಿಂದ ಕೆಕೆಆರ್ ತಂಡ ಧೋನಿ ಪಡೆ ವಿರುದ್ಧ 167 ರನ್ ಪೇರಿಸಿತು.

ಚೆನ್ನೈ ಬೌಲರ್ ಗಳ ವಿರುದ್ಧ ಉತ್ತಮವಾಗಿ ಬ್ಯಾಟ್ ಬೀಸಿದ ತ್ರಿಪಾಠಿ 51 ಎಸೆತಗಳಲ್ಲಿ 8 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 81 ರನ್ ಸಿಡಿಸಿ ಮಿಂಚಿದರು.


ಆದರೆ ಕೆಕೆಆರ್ ಬ್ಯಾಟಿಂಗ್ ಯಾದಿಯಲ್ಲಿ ಉಳಿದ ಬ್ಯಾಟ್ಸ್ ಮನ್ ಗಳು ಮಿಂಚಲು ವಿಫಲರಾದ ಕಾರಣ ಚೆನ್ನೈ ವಿರುದ್ಧ ಬೃಹತ್ ಮೊತ್ತ ಪೇರಿಸುವ ಕೆಕೆಆರ್ ಪ್ರಯತ್ನ ಫಲ ನೀಡಲಿಲ್ಲ. ಅಂತಿಮವಾಗಿ ಕೆಕೆಆರ್ ನಿಗದಿತ 20 ಓವರ್ ಗಳಲ್ಲಿ 167 ರನ್ ಗಳಿಗೆ ಆಲೌಟಾಯಿತು.

Advertisement


ರಾಹುಲ್ ತ್ರಿಪಾಠಿ (81) ಒಬ್ಬರನ್ನು ಹೊರತುಪಡಿಸಿ, ಶುಭಮನ್ ಗಿಲ್ (11), ನಿತೀಶ್ ರಾಣಾ (9), ಸುನಿಲ್ ನರೈನ್ (17), ಇಯಾನ್ ಮೋರ್ಗನ್ (7), ರಸೆಲ್ (2), ಕಪ್ತಾನ ದಿನೇಶ್ ಕಾರ್ತಿಕ್ (12) ಮಿಂಚಲು ವಿಫಲರಾದರು.

ಕೆಕೆಆರ್ ಇನ್ನಿಂಗ್ಸ್ ಕೊನೆಯಲ್ಲಿ ಪ್ಯಾಟ್ ಕಮಿನ್ಸ್ ಅವರು 9 ಎಸೆತಗಳಲ್ಲಿ 17 ರನ್ ಸಿಡಿಸಿ ಮಿಂಚಿದರು.

ಶಿಸ್ತಿನ ಬೌಲಿಂಗ್ ನಡೆಸಿದ ಕೆಕಆರ್ ಪರ ಡ್ವೈನ್ ಬ್ರಾವೋ 3 ವಿಕೆಟ್ ಪಡೆದರು. ಉಳಿದಂತೆ, ಸ್ಯಾಮ್ ಕರನ್, ಶಾರ್ದೂಲ್ ಠಾಕೂರ್ ಮತ್ತು ಕರಣ್ ಶರ್ಮಾ ತಲಾ 2 ವಿಕೆಟ್ ಪಡೆದರು.

Advertisement

Udayavani is now on Telegram. Click here to join our channel and stay updated with the latest news.

Next