Advertisement
ಇದು ಮೊದಲೆರಡು ಸ್ಥಾನ ದಲ್ಲಿರುವ ತಂಡಗಳ ನಡುವಿನ ಸ್ಪರ್ಧೆ. ಸದ್ಯ ಎರಡೂ ತಂಡಗಳು 12 ಪಂದ್ಯಗಳಲ್ಲಿ 9 ಜಯ ಸಾಧಿಸಿ 18 ಅಂಕ ಹೊಂದಿವೆ. ಆದರೆ ರನ್‌ರೇಟ್‌ನಲ್ಲಿ ಚೆನ್ನೈ ಮುಂದಿದೆ. ಹೀಗಾಗಿ ಈ ಪಂದ್ಯದಲ್ಲಿ ಯಾರೇ ಗೆದ್ದರೂ ಅಗ್ರಸ್ಥಾನವನ್ನು ಗಟ್ಟಿಗೊಳಿಸಿ ಎಲಿಮಿನೇಟರ್ ಸುತ್ತಿನ ಲಾಭವನ್ನು ಪಡೆಯಲಿದ್ದಾರೆ.
ಗುರು ಶಿಷ್ಯರೆಂದೇ ಗುರುತಿ ಸಲ್ಪಡುವ ಧೋನಿ ಮತ್ತು ಪಂತ್ ತಂಡಗಳ ನಡುವಿನ ಈ ಕಾದಾಟ ಅಭಿಮಾನಿಗಳಲ್ಲಿ ತೀವ್ರ ಕುತೂಹಲ ಮೂಡಿಸಿದೆ. ವಾಂಖೇಡೆಯಲ್ಲಿ ನಡೆದ ಮೊದಲ ಮುಖಾಮುಖೀಯಲ್ಲಿ ಡೆಲ್ಲಿ 7 ವಿಕೆಟ್ ಗೆಲುವು ಸಾಧಿಸಿತ್ತು. ಧೋನಿ ಪಡೆ ಈ ಸೋಲಿನ ಸೇಡು ತೀರಿಸುವ ತವಕದಲ್ಲಿದೆ.