ದುಬೈ: 14ನೇ ಆವೃತ್ತಿಯ ಐಪಿಎಲ್ ಕೂಟದ ಯುಎಇ ಚರಣಕ್ಕೆ ಇನ್ನೊಂದು ತಿಂಗಳು ಬಾಕಿಯಿದೆ. ಸಪ್ಟೆಂಬರ್ 19ರಿಂದ ದುಬೈನಲ್ಲಿ ಐಪಿಎಲ್ ನ ಮುಂದುವರಿದ ಭಾಗ ಆರಂಭವಾಗಲಿದೆ.
ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಹಲವು ಸದಸ್ಯರು ಈಗಾಗಲೇ ದುಬೈ ತಲುಪಿದ್ದಾರೆ. ಈಗಾಗಲೇ ಅಗತ್ಯ ಕ್ವಾರಂಟೈನ್ ನಿಯಮ ಮುಗಿಸಿರುವ ತಂಡ ಅಭ್ಯಾಸ ಆರಂಭಿಸಿದೆ.
ಸಿಎಸ್ ಕೆ ತಂಡದ ಪ್ರಮುಳ ಸದಸ್ಯರಾದ ಮಹೇಂದ್ರ ಸಿಂಗ್ ಧೋನಿ, ಸುರೇಶ್ ರೈನಾ, ರಾಬಿನ್ ಉತ್ತಪ್ಪ, ದೀಪಕ್ ಚಾಹರ್, ಋತುರಾಜ್ ಗಾಯಕ್ವಾಡ್ ಮುಂತಾದವರು ಗುರುವಾರ ದುಬೈನ ಐಸಿಸಿ ಕ್ರಿಕೆಟ್ ಅಕಾಡಮೆ ಮೈದಾನದಲ್ಲಿ ಅಭ್ಯಾಸದಲ್ಲಿ ತೊಡಗಿದರು.
ಇದನ್ನೂ ಓದಿ:ರಣಜಿ ಟ್ರೋಫಿ, ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ಸಜ್ಜಾದ ಬಿಸಿಸಿಐ: ದಿನಾಂಕ ಪ್ರಕಟ
ಆಗಸ್ಟ್ 13ರಂದು ಸಿಎಸ್ ಕೆ ಆಟಗಾರರು ಚೆನ್ನೈನಿಂದ ದುಬೈಗೆ ತೆರಳಿದ್ದರು. ಹೋಟೆಲ್ ನಲ್ಲಿ ಕ್ವಾರಂಟೈನ್ ಮುಗಿಸಿ ಇದೀಗ ಅಭ್ಯಾಸದಲ್ಲಿ ತೊಡಗಿದ್ದಾರೆ.
ಕೋವಿಡ್ -19 ಕಾರಣದಿಂದ ಹಿನ್ನೆಲೆಯಲ್ಲಿ ಮೇ ತಿಂಗಳಲ್ಲಿ ಮುಂದೂಡಲ್ಪಟ್ಟಿದ್ದ 14ನೇ ಆವೃತ್ತಿಯ ಐಪಿಎಲ್ ಕೂಟ ಸೆಪ್ಟೆಂಬರ್ 19 ರಂದು ದುಬೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದೊಂದಿಗೆ ಪುನರಾರಂಭಗೊಳ್ಳಲಿದೆ.