Advertisement

ಗೆಲುವಿಗಾಗಿ ಚೆನ್ನೈ, ಪಂಜಾಬ್‌ ಸೆಣಸಾಟ

12:03 PM May 20, 2018 | |

ಚೆನ್ನೈ: ಅಂಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ರವಿವಾರ ನಡೆಯುವ ಐಪಿಎಲ್‌ ಕೂಟದ ಅಂತಿಮ ಲೀಗ್‌ ಪಂದ್ಯದಲ್ಲಿ ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ತಂಡವನ್ನು ಎದುರಿಸಲಿದೆ. ಚೆನ್ನೈ ಈಗಾಗಲೇ ಪ್ಲೇ ಆಫ್ಗೆ ತೇರ್ಗಡೆಯಾಗಿದ್ದರೆ ಪಂಜಾಬ್‌ ಈ ಪಂದ್ಯದಲ್ಲಿ ಗೆದ್ದರೆ ಮುನ್ನಡೆಯುವ ಅವಕಾಶವಿದೆ. ಆದರೆ ಭಾರೀ ಅಂತರದಿಂದ ಗೆಲ್ಲಬೇಕಾದ ಒತ್ತಡವಿದೆ.

Advertisement

ಶುಕ್ರವಾರ ನಡೆದ ಪಂದ್ಯದಲ್ಲಿ ಡೆಲ್ಲಿ ತಂಡಕ್ಕೆ 34 ರನ್ನುಗಳಿಂದ ಸೋತಿರುವ ಚೆನ್ನೈ ತಂಡವು ಅಂತಿಮ ಲೀಗ್‌ ಪಂದ್ಯದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ. ಈ ಮೂಲಕ ನಾಕೌಟ್‌ ಹಂತಕ್ಕೆ ಗೆಲುವಿನ ಉತ್ಸಾಹದಿಂದ ತಲುಪುವುದು ಚೆನ್ನೈಯ ಯೋಜನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next