Advertisement

ಚೆನ್ನೈ ಓಪನ್‌ ಟೆನಿಸ್‌: ಅಂಕಿತಾ ರೈನಾಗೆ ವೈಲ್ಡ್‌ಕಾರ್ಡ್‌

11:47 PM Aug 23, 2022 | Team Udayavani |

ಚೆನ್ನೈ: ಭಾರತದ ನಂ. 1 ಆಟಗಾರ್ತಿ ಅಂಕಿತಾ ರೈನಾ “ಚೆನ್ನೈ ಓಪನ್‌ ಟೆನಿಸ್‌’ಗೆ ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆಯಲಿದ್ದಾರೆ. ಸೆ. 12ರಿಂದ 18ರ ತನಕ ಈ ಡಬ್ಲ್ಯುಟಿಎ-250 ಪಂದ್ಯಾವಳಿ ನಡೆಯಲಿದೆ.

Advertisement

2014ರ ವಿಂಬಲ್ಡನ್‌ ಫೈನಲಿಸ್ಟ್‌, ಕೆನಡಾದ ಯುಗಿನಿ ಬೌಷಾರ್ಡ್‌ ಅವರಿಗೂ ವೈಲ್ಡ್‌ಕಾರ್ಡ್‌ ಲಭಿಸಿದೆ. ಸಿಂಗಲ್‌ ನಲ್ಲಿ ಇನ್ನೂ ಇಬ್ಬರಿಗೆ ವೈಲ್ಡ್‌ಕಾರ್ಡ್‌ ಅವಕಾಶವಿದ್ದು, ಅಗ್ರ 20ರೊಳಗಿನ ರ್‍ಯಾಂಕಿಂಗ್‌ ಆಟಗಾರ್ತಿಯರು ಆಡುವುದಿದ್ದರೆ ಅವರಿಗೆ ಲಭಿಸಲಿದೆ ಎಂದು ಟಿಎನ್‌ಟಿಎ ಅಧ್ಯಕ್ಷ, ಮಾಜಿ ಟೆನಿಸಿಗ ವಿಜಯ್‌ ಅಮೃತ್‌ರಾಜ್‌ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಡಬಲ್ಸ್‌ನಲ್ಲಿ ಭಾರತದ ಶರ್ಮದಾ ಬಾಲು-ರಿಯಾ ಭಾಟಿಯಾ ಜೋಡಿಗೂ ವೈಲ್ಡ್‌ಕಾರ್ಡ್‌ ನೀಡಲಾಗಿದೆ. ಸಿಂಗಲ್ಸ್‌ ನಲ್ಲಿ ಫ್ರಾನ್ಸ್‌ನ ಕ್ಯಾರೋಲಿನ್‌ ಗಾರ್ಸಿಯಾ ಅವರಿಗೆ ಅಗ್ರ ಶ್ರೇಯಾಂಕ ಲಭಿಸುವ ಸಾಧ್ಯತೆ ಇದೆ.

ಕೂಟದಲ್ಲಿ ಸಾನಿಯಾ ಮಿರ್ಜಾ ಆಡುವುದು ಇನ್ನೂ ಖಾತ್ರಿಯಾಗಿಲ್ಲ; ಅಕಸ್ಮಾತ್‌ ಆಡದೇ ಹೋದರೆ, ಭಾರತೀಯ ಟೆನಿಸ್‌ಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ, ಅವರನ್ನು ಕೂಟಕ್ಕೆ ಆಹ್ವಾನಿಸಿ ಗೌರವಿಸಲಾಗುವುದು ಎಂದು ವಿಜಯ್‌ ಅಮೃತ್‌ರಾಜ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next