Advertisement

ಚನ್ನಗಿರಿ : ಹದಗೆಟ್ಟ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಘಟಕ : ಚಿಕಿತ್ಸೆಗಾಗಿ ರೋಗಿಗಳ ಪರದಾಟ

08:16 PM Jun 23, 2022 | Team Udayavani |

ಚನ್ನಗಿರಿ : ಡಯಾಲಿಸಿಸ್ ಘಟಕ ಹದಗೆಟ್ಟಿದೆ, ರೋಗಿಗಳ ವೈದ್ಯಕೀಯ ಉಪಕರಣಗಳು ಗುಣ್ಣಮಟ್ಟವಿಲ್ಲದೇ ಹಾಳಾಗಿವೆ. ಕಳಪೆ ಗುಣ್ಣಮಟ್ಟದ ಡಯಾಲಿಸಿಸ್ ಯಂತ್ರವನ್ನು ಆಸ್ಪತ್ರೆಗೆ ಸರಬರಾಜು ಮಾಡಲಾಗಿದೆ. ಎಂದು ಆರೋಪಿಸಿ ಡಯಾಲಿಸಿಸ್ ರೋಗಿಗಳೊಂದಿಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಕಾಯಕರ್ತರು ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ ನಂತರ ತಹಶಿಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸಿದರು.

Advertisement

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಬಡವರಿಗಾಗಿ ಕೋಟ್ಯಾಂತರ ರೂಗಳನ್ನು ಖರ್ಚುಮಾಡಿ ಡಯಾಲಿಸಿಸ್ ಘಟಕವನ್ನು ಸ್ಥಾಪನೆ ಮಾಡಲಾಗಿದೆ ಅದ್ರೆ ಇಲ್ಲಿನ ವೈಧ್ಯಾಧಿಕಾರಿಗಳ ಬೇಜವಬ್ದಾರಿಯಿಂದ ಡಯಾಲಿಸಿಸ್ ಯಂತ್ರಗಳು ಹಾಳಾಗಿವೆ ಇದರಿಂದ ಕೈಯಲ್ಲಿ ಹಣವಿಲ್ಲದೆ ಡಯಾಲಿಸಿಸ್ ಮಾಡಿಕೊಳ್ಳದೇ ಬಡ ರೋಗಿಗಳು ಆಸ್ಪತ್ರೆಗೆ ಅಲೆದಾಡುತ್ತಿದ್ದಾರೆ. ಆದರೆ ವೈದ್ಯಾಧಿಕಾರಿಗಳು ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎಂದು ಪ್ರತಿಭಟನಾ ನಿರತ ರೋಗಿಗಳು ಆಸ್ಪತ್ರೆ ಕಾರ್ಯವೈಕರಿಗಳ ಕುರಿತು ದೂರಿದರು.

ಈ ವೇಳೆ ದಲಿತ ಸಂಘರ್ಷ ಸಮಿತಿ ತಾಲೂಕು ಸಂಚಾಲಕ ಚಿತ್ರಲಿಂಗಪ್ಪ ಮಾತನಾಡಿ, ಸರ್ಕಾರಿ ಆಸ್ಪತ್ರೆ ಎನ್ನುವುದು ನೆಪಕ್ಕೆ ಮಾತ್ರವಾಗಿದೆ ಇಲ್ಲಿ ಬಡವರಿಗೆ ಯಾವುದೇ ಸೇವೆ, ಸೌಲಭ್ಯಗಳು ಸಿಗುತ್ತಿಲ್ಲ, ಹೀಗಿರುವಾಗ ಸರ್ಕಾರಿ ಆಸ್ಪತ್ರೆ ಅಂತ ಏಕಿರಬೇಕು. ರೋಗಿಗಳಿಗೆ ಅಗತ್ಯವಾದ ಔಷಧಿಗಳನ್ನು ಖಾಸಗಿ ಮೆಡಿಕಲ್‌ಗಳಲ್ಲಿ ತರಬೇಕಾದ ಪರಿಸ್ಥಿತಿಯಿದೆ ಹಾಗಾದರೆ ಸರ್ಕಾರದಿಂದ ಪೂರೈಕೆಯಾದ ಔಷಧಿಗಳು ಎಲ್ಲಿ ಹೋಗುತ್ತಿವೆ ಈ ಕುರಿತು ಎಷ್ಟೇ ಬಾರಿ ದೂರು ನೀಡಿದರು ಪ್ರಯೋಜನವಾಗುತ್ತಿಲ್ಲ ಎಲ್ಲಿಗೆ ಬಂತು ಸಂಗಯ್ಯ ಎಂದರೇ ಅಲ್ಲಿಗೆ ಬಂತು ನೋಡಯ್ಯ ಅನ್ನುವ ಪರಿಸ್ಥಿತಿಯಿದೆ ಈ ಕೂಡಲೇ ಜನ ಪ್ರತಿನಿಧಿಗಳು ಎಚ್ಚೆತ್ತುಕೊಳ್ಳಬೇಕು ಇಲ್ಲವಾದರೇ ಜನತೆ ನಿಮಗೆ ತಕ್ಕ ಪಾಠವನ್ನು ಕಲಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ :ನೇಕಾರರ ಬೇಡಿಕೆ ಈಡೇರಿಕೆಗಾಗಿ ಜುಲೈ.6 ರಂದು ಜವಳಿ ಸಚಿವರ ನಿವಾಸದ ಎದಿರು ಧರಣಿ

ಡಯಾಲೀಸಿಸ್ ರೋಗಿ ಡಿ.ಪಿ ಪ್ರಕಾಶ್ ಮಾತನಾಡಿ, ಇಲ್ಲಿನ ಆಸ್ಪತ್ರೆಯಲ್ಲಿ ರಕ್ತ ಶುದ್ಧೀಕರಣ ಘಟವನ್ನು ಸ್ಥಾಪನೆ ಮಾಡಿದ ದಿನದಿಂದ ಇಲ್ಲಿಯವರೆಗೂ ಅದನ್ನು ಸರ್ವಿಸ್ ಮಾಡಿಲ್ಲ. ಇದರಿಂದ ನಮಗೆ ಡಯಾಲೀಸಿಸ್ ಮಾಡಿದ ನಂತರ ರಕ್ತ ಹೆಪ್ಪುಗಟ್ಟುವಿಕೆ ಪ್ರಾರಂಭವಾಗಿ ಮೈಯಲ್ಲಿ ತುರಿಕೆ ಆಗುತ್ತದೆ. ತುಂಬಾ ಸುಸ್ತು ಆಗುತ್ತದೆ ಕೈಕಾಲು ಜವ್ವೂ ಹಿಡಿಯುತ್ತದೆ. ಇಲ್ಲಿ ನೀಡುವ ಔಷಧಿ, ವೈದ್ಯಕೀಯ ಉಪಕರಣಗಳು, ಡಯಾಲಿಸಿಸ್ ಟುಬಿಕ್ಸ್ ಉಪಕರಣಗಳು ಕಳಪೆ ಮಟ್ಟದಾಗಿವೇ. ಇಂಜೆಕ್ಷನ್ ವೆಪರಿನ್ ೧೦ ಎಂ.ಎಲ್ ನೀಡಬೇಕು ಈಗ ೦.೫ ಎಂಎಲ್.
ನೀಡುತ್ತಿದ್ದಾರೆ ಇದರಿಂದ ರಕ್ತ ಹೆಪ್ಪುಗಟ್ಟುತ್ತದೆ. ನಮ್ಮಗೆ ರಕ್ತ ಉತ್ಪತ್ತಿಯಾಘುವ ಇಂಜೆಕ್ಷನ್ ವೆತ್ತೋ ಪ್ರೋಟಿನ್ ಮತ್ತು ಯರನ್ ಇಂಜೆಕ್ಷನ್ ನೀಡುತ್ತಿಲ್ಲ. ಇದರಿಂದ ರಕ್ತ ಉತ್ಪತ್ತಿ ಪ್ರಮಾಣ ಕುಂಠಿತಗೊಳ್ಳುತ್ತಿದೆ. ಅದ್ದರಿಂದ ತಕ್ಷಣ ನಮ್ಮಗೆ ಗುಣ್ಣಮಟ್ಟದ ಸೌಲಭ್ಯಗಳನ್ನು ಆಸ್ಪತ್ರೆಯಲ್ಲಿ ಒದಗಿಸಬೇಕು ನಮ್ಮ ಜೀವ ರಕ್ಷಿಸಬೇಕು ಎಂದು ಹೇಳಿದರು.

Advertisement

ದಲಿತ ಸಂಘರ್ಷ ಸಮಿತಿ ಸದಸ್ಯ ಬನ್ನಿಹಟ್ಟಿ ಅಂಜಿನಪ್ಪ, ರೋಗಿಗಳಾದ ತಾಜ್‌ಪೀರ್, ಜೋಳದಾಳ್ ಲಾತಾ, ವಾಸುದೇವ್, ಸಾರ್ವಜನಿಕರು ಮತ್ತು ದಲಿತಸಂಘರ್ಷ ಸಮಿತಿ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೂಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next