Advertisement
ಈ ಭಾಗದಲ್ಲಿ ರೈಲು ಸಂಚಾರ ಶುರುವಾದರೆ ಶ್ರೀನಗರ- ಉಧಂಪುರ ನಡುವಿನ 277 ಕಿ.ಮೀ.ದೂರದ ಪೈಕಿ 255 ಕಿ.ಮೀ.ದೂರದ ನಡುವೆ ರೈಲು ಸಂಚಾರ ಶುರುವಾದಂತಾಗಲಿದೆ. ಚೆನಾಬ್ ನದಿ ಮಟ್ಟದಿಂದ 359 ಮೀಟರ್ ಎತ್ತರದಲ್ಲಿ ಈ ಸೇತುವೆ ನಿರ್ಮಾಣಗೊಂಡಿದೆ. ಈ ಮೂಲಕ ಐಫೆಲ್ ಟವರ್‌ಗಿಂತಲೂ 35 ಮೀ. ಎತ್ತರದಲ್ಲಿರುವ ರಚನೆ ಎಂಬ ಖ್ಯಾತಿ ಗೂ ಪಾತ್ರವಾಗಿದೆ. ಕಳೆದ ತಿಂಗಳು ಸೇತುವೆ ಮೇಲೆ ರೈಲಿನ ಪ್ರಾಯೋಗಿಕ ಸಂಚಾರ ನಡೆಸಲಾಗಿತ್ತು.
1.3 ಕಿಮೀ ಉದ್ದದ ಚೆನಾಬ್ ರೈಲ್ವೇ ಸೇತುವೆ
ನದಿ ಮಟ್ಟದಿಂದ 359 ಮೀ. ಎತ್ತರದಲ್ಲಿ ನಿರ್ಮಾಣ
ನಿರ್ಮಾಣಕ್ಕೆ 25,0000 ಟನ್ ಉಕ್ಕು ಬಳಕೆ
ಗಂಟೆಗೆ 260 ಕಿ.ಮೀ. ಗಾಳಿ ತಡೆವ ಸಾಮರ್ಥ್ಯ
ಐಫೆಲ್ ಟವರ್‌ಗಿಂತಲೂ 35 ಮೀಟರ್ ಎತ್ತರ