Advertisement
ಮಾರುಕಟ್ಟೆಯ ಲ್ಲಿ ನಾನಾ ಬಣ್ಣಗಳ ಮಾರಾಟ ಜೋರಾಗಿ ನಡೆಯುತ್ತದೆ. ಕೆಂಪು, ಹಳದಿ, ಹಸಿರು,ನೀಲಿ, ಗುಲಾಬಿ, ಸಿಲ್ವರ್, ಗೋಲ್ಡ್ ಸೇರಿದಂತೆಬಗೆಬಗೆಯ ಬಣ್ಣಗಳು ಲಭ್ಯವಿದ್ದರು ಇವುಗಳನ್ನುನೀರಿನಲ್ಲಿ ಕಲಸಿ ಎರಚುವ ಮೊದಲು ಆಲೋಚನೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಕೋವಿಡ್ ಎರಡನೇ ಅಲೆ ಈಗಾಗಲೇ ಹಲವು ರಾಜ್ಯದ ಮಹಾನಗರದಲ್ಲಿ ತನ್ನ ನರ್ತನ ತೋರುತ್ತಿದೆ. ಈ ವೇಳೆ ನಾವು ರಾಸಾಯನಿಕ ಯುಕ್ತ ಬಣ್ಣದಿಂದ ಹೋಳಿಯಾಡಿ ಚರ್ಮದ ಕಾಯಿಲೆ ತಂದುಕೊಳ್ಳುವುದ ತರವಲ್ಲ.
Related Articles
Advertisement
ಪತ್ತೆ ಹಚ್ಚುವುದು ಹೇಗೆ: ಅಕ್ಕಿ ಹಿಟ್ಟು, ಬೇವು, ತುಳಸಿ ಎಲೆಗಳು, ಅರಿಶಿನ ಕೊಂಬು, ಹೂವಿನ ದಳವನ್ನುಬಳಸಿ ಪರಿಸರ ಸ್ನೇಹಿ ಬಣ್ಣವನ್ನುತಯಾರಿಸಲಾಗುತ್ತದೆ. ಇವುಗಳನ್ನು ಗುರುತಿಸುವುದುಸುಲಭ, ರಾಸಾಯನಿಕಯುಕ್ತ ಬಣ್ಣಗಳು ಮುಟ್ಟಿದರೆಕೈಗೆ ಅಂಟಿಕೊಳ್ಳುತ್ತದೆ ಹಾಗೂ ತೊಳೆದರೆ ಬಣ್ಣಒಮ್ಮೆಗೆ ಹೋಗದೆ ಎರಡುರಿಂದ ಮೂರು ದಿನಉಳಿಯುತ್ತದೆ. ಆದರೆ ನೈಸರ್ಗಿಕ ಬಣ್ಣ ಸ್ವಲ್ಪ ತರಿತರಿಯಾಗಿರುತ್ತದೆ. ನೀರಿನಲ್ಲಿ ಕಲಸಿದರೆ ಬಣ್ಣನೀರಲ್ಲಿ ಬೆರತು ಅಕ್ಕಿ ಹಿಟ್ಟು ತಳ ಸೇರುತ್ತದೆ.
ಹೋಳಿ ಹಬ್ಬವನ್ನು ಪರಿಸರಸ್ನೇಹಿಯಾಗಿ ಆಚರಿಸುವುದರ ಜತೆಗೆ ನೀರು ಬಳಸದೆ ಕೇವಲಬಣ್ಣಗಳಿಂದ ಆಚರಣೆ ಮಾಡುವುದು ಉಳಿತು. ನಮ್ಮಆರೋಗ್ಯಕ್ಕಿಂತ ಒಂದು ದಿವಸದ ಸಂತೋಷ ಮುಖ್ಯವಲ್ಲಹಾಗಾಗಿ ಕೊರೊನಾ ಎರಡನೇ ಅಲೆ ರಾಜ್ಯವ್ಯಾಪ್ತಿ ಪಸರಿಸುವ ಮೂಲಕ ನಾವು ಎಚ್ಚರಿಕೆಯಿಂದ ಇರುವುದು ಸೂಕ್ತ. ● ಡಾ. ವಿ.ಮಹೇಶ್, ಸಾರ್ವಜನಿಕ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ
ಶಾಮಸುಂದರ್ ಕೆ.ಅಣ್ಣೇನಹಳ್ಳಿ