Advertisement

ರಾಸಾಯನಿಕ ಮುಕ್ತ, ಪರಿಸರ ಸ್ನೇಹಿ ಗೋಮಯ ಗಣಪತಿ ಮೂರ್ತಿ

03:32 PM Sep 09, 2021 | Team Udayavani |

ಉಡುಪಿ: ಈ ಬಾರಿ ಕೋವಿಡ್ ಮಾರ್ಗಸೂಚಿ ನಡುವೆ ಸೆಪ್ಟೆಂಬರ್ 10ರಂದು ನಡೆಯಲಿರುವ ಗಣೇಶೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಏತನ್ಮಧ್ಯೆ ರಾಸಾಯನಿಕ ಬಳಸದೇ, ಬಣ್ಣ ಹಚ್ಚದೇ ಕೇವಲ ಹಸುವಿನ ಸಗಣಿಯಲ್ಲಿ ತಯಾರಿಸಿದ ಪರಿಸರ ಸ್ನೇಹಿ ಗಣಪತಿ ಮೂರ್ತಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ.

Advertisement

ಗೋಮಯ ಮೂರ್ತಿಗೆ ಬೇಡಿಕೆ ಹೆಚ್ಚಾಯ್ತು.  ಗಣಪನ ಮೂರ್ತಿ ನೀರಿನಲ್ಲಿ ಕರಗಿದ ಮೇಲೂ ಇದರಿಂದ ಮತ್ತಷ್ಟು ಹೆಚ್ಚಿನ ಪ್ರಯೋಜನ ಪಡೆಯಬಹುದಾಗಿದ್ದು, ಕುಂಡದ ಗಿಡಗಳು, ಟೆರೇಸ್ ಗಾರ್ಡನಿಂಗ್ ಗಿಡಗಳಿಗೆ ಈ ನೀರು ಹೆಚ್ಚು ಪ್ರಯೋಜನಕಾರಿ.  ಇದು ಉತ್ತಮ ಗೊಬ್ಬರವಾಗಿ ಗಿಡಗಳು ಹಚ್ಚಹಸುರಾಗಿ ಬೆಳೆಯಲು ಸಹಕಾರಿ.

ಗೋಮಯ ಗಣಪ ಪುಟ್ಟ ಮೂರ್ತಿಯಾಗಿದ್ದು, ಮನೆಯಲ್ಲಿ ಇಟ್ಟು ಪೂಜಿಸಲು ತುಂಬಾ ಪ್ರಸಕ್ತವಾಗಿದೆ. ಅಲ್ಲದೇ ಇದು ಪರಿಸರ ಸ್ನೇಹಿಯಾಗಿದ್ದರಿಂದ ಮೂರ್ತಿ ವಿಸರ್ಜನೆಗೂ

ಗೋ ಗಣೇಶ ಮೂರ್ತಿಯ ವಿಶೇಷತೆ ಏನು?

ಸಂಪೂರ್ಣ ಪರಿಸರ ಸ್ನೇಹಿ, ಅಭಯ ಮೂರ್ತಿ

Advertisement

ಯಾವುದೇ ಬಣ್ಣ, ರಾಸಾಯನಿಕ ಬಳಕೆ ಇಲ್ಲ

ದೇಸಿ ಗೋಮಯ, ಆವೆ ಮಣ್ಣಿನಿಂದ ತಯಾರಿಸಿದ ಮೂರ್ತಿ

ಪೂಜೆಯ ನಂತರ ನೀರಿನ ಪಾತ್ರೆಯಲ್ಲಿ ವಿಸರ್ಜಿಸಿ, ಸಾವಯವ ಗೊಬ್ಬರವಾಗಿ ಉಪಯೋಗಿಸಬಹುದು.

ಈ ಪರಿಸರ ಸ್ನೇಹಿ ಗೋ ಮಯ ಗಣಪತಿ ಮೂರ್ತಿ ಸಾಲಿಗ್ರಾಮದ ಬಸ್ ನಿಲ್ದಾಣ ಸಮೀಪ ಇರುವ ಸತ್ಯ ಸ್ಟೋರ್ ನಲ್ಲಿ ಲಭ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next