Advertisement

ಚೆಂಬೂರು ಶ್ರೀ ಸುಬ್ರಹ್ಮಣ್ಯ ಮಠ:ವಿಜೃಂಭಣೆಯ ಪಲ್ಲಕಿ ಉತ್ಸವ

10:57 AM Nov 28, 2017 | |

ಮುಂಬಯಿ: ಚೆಂಬೂರು ಛೆಡ್ಡಾ ನಗರದ ಶ್ರೀ ನಾಗಸುಬ್ರಹ್ಮಣ್ಯ ಮಠದಲ್ಲಿ ಶ್ರೀ ಸ್ಕಂದ ಷಷ್ಟಿ ಮಹೋತ್ಸವದ ಅಂಗವಾಗಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವು ನ. 24 ರಂದು ಜರಗಿತು.

Advertisement

ಸಂಜೆ ರಾಜಬೀದಿಯಲ್ಲಿ ಪಲ್ಲಕ್ಕಿ ಉತ್ಸವ, ತೊಟ್ಟಿಲು ಪೂಜೆ, ಮಂಗಳಾರತಿ, ಪ್ರಸಾದ ವಿತರಣೆ ನಡೆಯಿತು. ಭಜನಾ ವೃಂದ, ಪಂಚವಾದ್ಯ, ಚೆಂಡೆ, ನಾಗಸ್ವರ, ವೇದಘೋಷಗಳೊಂದಿಗೆ ಪಲ್ಲಕಿ ಉತ್ಸವವನ್ನು ಆಯೋಜಿಸಲಾಗಿತ್ತು. ನಾಡಿನ ಸಂಸ್ಕೃತಿ-ಸಂಸ್ಕಾರ, ಆಚಾರ-ವಿಚಾರಗಳನ್ನು ಬಿಂಬಿಸುವ ಪ್ರಾತ್ಯಕ್ಷಿಕೆಗಳು, ನೃತ್ಯಗಳು ಮೆರವಣಿಗೆಯ ಆಕರ್ಷಣೆಯಾಗಿತ್ತು. ನೂರಾರು ಭಕ್ತಾದಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರ ಆಶೀರ್ವಾದ ಹಾಗೂ ಮಾರ್ಗದರ್ಶನದೊಂದಿಗೆ ಷಷ್ಠಿ ಉತ್ಸವವನ್ನು ಪ್ರತೀ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಆಚರಿಸಲಾಯಿತು. ಕೃಷ್ಣರಾಜ ಉಪಾಧ್ಯಾಯ ಹಾಗೂ ಶ್ರೀಪ್ರಸಾದ್‌ ಭಟ್‌ ಅವರ ಪೌರೋಹಿತ್ಯದಲ್ಲಿ ವಿವಿಧ ಪೂಜೆಗಳು ನಡೆಯಿತು. ಮಾಟುಂಗ ಗುರುವಾಚಾರ್ಯ ದಂಪತಿ, ಕಲಾವಿದೆ ಕೃತಿ ದಿನೇಶ್‌ ಚಡಗ ಅವರನ್ನು ಶಾಲು ಹೊದೆಸಿ, ಮಹಾಪ್ರಸಾದವನ್ನಿತ್ತು ಗೌರವಿಸಲಾಯಿತು.

ಮಠದ ವ್ಯವಸ್ಥಾಪಕರಾದ ವಿಷ್ಣು ಕಾರಂತ್‌, ಶ್ರೀಧರ್‌ ಭಟ್‌ ಅವರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಶನಿವಾರ ಬೆಳಗ್ಗೆ ಪಂಚಾಮೃತ ಅಭಿಷೇಕ, ಪಂಚ ವಿಂಶತಿ, ಕಲಶ ಪೂರ್ವಕ ಸಂಪ್ರೋಕ್ಷಣೆ, ಮಹಾಪೂಜೆ, ಸಂಜೆ 6 ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಲಿತು. ರಾತ್ರಿ ರಂಗಪೂಜೆ, ಪ್ರಸಾದ ವಿತರಣೆ ನಡೆಯಿತು. ತುಳು-ಕನ್ನಡಿಗರು ಸೇರಿದಂತೆ ನೂರಾರು ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಸ್ವೀಕರಿಸಿದರು.

 ಚಿತ್ರ-ವರದಿ : ಸುಭಾಷ್‌ ಶಿರಿಯಾ

Advertisement
Advertisement

Udayavani is now on Telegram. Click here to join our channel and stay updated with the latest news.

Next