Advertisement
ನಾಟಕ ಶಿಬಿರದ ಸಮಾರೋಪ ಸಮಾರಂಭವು ಶುಕ್ರವಾರ ಸಂಜೆ ಚೆಂಬೂರು ಘಾಟ್ಲಾದ ಸಂಸ್ಥೆಯ ಸಂಕುಲದಲ್ಲಿ ನಡೆಯಿತು. ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯ ವಾದಿ ಎಚ್. ಕೆ. ಸುಧಾಕರ ಅರಾಟೆ ದೀಪ ಬೆಳಗಿಸಿ ಸಮಾರಂಭ ಉದ್ಘಾಟಿಸಿದರು. ಸಂಘದ ಗೌರವ ಕಾರ್ಯದರ್ಶಿ ದೇವದಾಸ್ ಶೆಟ್ಟಿಗಾರ್, ಗೌರವ ಕೋಶಾಧಿಕಾರಿ ಟಿ. ಆರ್ ಶೆಟ್ಟಿ, ಸಹ ಕೋಶಾಧಿಕಾರಿ ಸುಂದರ್ ಎನ್. ಕೋಟ್ಯಾನ್, ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ದಯಾಸಾಗರ್ ಚೌಟ, ಕನ್ನಡ ಕಲಾ ಕೇಂದ್ರ ಮುಂಬಯಿ ಅಧ್ಯಕ್ಷ ಬಿ. ಬಾಲ ಚಂದ್ರ ರಾವ್ ಉಪಸ್ಥಿತರಿದ್ದರು.
Related Articles
Advertisement
ಹಾಡು ಹಕ್ಕಿ ನಾಟಕವನ್ನು ಪ್ರದರ್ಶಿಸಿ ಸಭಿಕರ ಮನ ಗೆದ್ದ ವಿದ್ಯಾರ್ಥಿಗಳ ಬಗ್ಗೆ ಅನೇಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ರಂಗತಜ್ಞ ಡಾ| ಭರತ್ ಕುಮಾರ್ ಪೊಲಿಪು ವಿದ್ಯಾರ್ಥಿಗಳ ಅಭಿನಯಕ್ಕೆ ಬೆರಗಾಗಿ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸುತ್ತಾ, ಮಕ್ಕಳು ತುಂಬಾ ಅಂದವಾಗಿ ತಮ್ಮ ಪಾತ್ರವನ್ನು ತಾವೇ ಅನುಭವಿಸಿ ಮಾಡಿದ್ದಾರೆ. ಚೆಂಬೂರು ಕರ್ನಾಟಕ ಸಂಘದ ಸಾಂಸ್ಕೃತಿಕ ಕಾಳಜಿಯನ್ನು ನಾನು ತುಂಬಾ ಇಷ್ಟ ಪಡುತ್ತೇನೆ, ಇದಕ್ಕೆ ಮಾಡಿದ ಖರ್ಚು ಅದು ಖರ್ಚು ಅಲ್ಲ ಬದುಕಿನ ಬಂಡವಾಳ ಎಂದರು.
ಪ್ರಸಿದ್ಧ ರಂಗ ನಿರ್ದೇಶಕ ಮೋಹನ್ ಮಾರ್ನಾಡ್ ಮಾತನಾಡಿ, ವಿದ್ಯಾರ್ಥಿಗಳನ್ನು ಕಲಾವಿದರನ್ನಾಗಿ ಮಾಡುವುದು ತುಂಬಾ ಪುಣ್ಯದ ಕೆಲಸ ನಾವು ಮಾನವರಾಗಿ ಒಬ್ಬರನ್ನೊಬ್ಬರು ಪ್ರೀತಿಸಬೇಕು ಎಂದು ನುಡಿದರು. ಕವಿ ಗೋಪಾಲ ತ್ರಾಸಿ ಮಾತನಾಡಿ, ಈ ರಂಗ ವೇದಿಕೆಯಿಂದ 10, 20 ಕಲಾವಿದರು ಮುಂಬಯಿ ರಂಗಭೂಮಿಗೆ ಬರಬೇಕು ಎಂದರು. ಸುಮಾರು ಹದಿನೈದು ದಿನಗಳ ರಂಗ ತರಬೇತಿ ಶಿಬಿರದ ಅನುಭವದ ಬಗ್ಗೆ ವಿದ್ಯಾರ್ಥಿಗಳಾದ ಯಶಸ್ವಿನಿ ಶೆಟ್ಟಿ, ಶಿವರುದ್ರ ರಾಜಕುಮಾರ್, ಪೋಲ್ ಲಕ್ಷಿ ¾ ಮತ್ತು ಪಲ್ಲವಿ ಕಟ್ಟಿಮನಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.ನಾಟಕಕ್ಕೆ ಸಹಕರಿಸಿದ ಕನ್ನಡ ಕಲಾಕೇಂದ್ರ ಮುಂಬಯಿ ಕಾರ್ಯದರ್ಶಿ ಮಧುಸೂದನ್, ಹಳೆ ವಿದ್ಯಾರ್ಥಿ ಗಾಯಕರಾದ ಭರತ್ ಶೆಟ್ಟಿ ಮತ್ತು ಮನೋಜ್ ಗೌಡ, ಆನಂದ್, ಜೀವನ್ ಬೋರ್ಡಿಂಗ್‌ನ ಮಾಲಕ ನರೇಶ್ ಶೆಟ್ಟಿ, ಮೇಕಪ್ ಮ್ಯಾನ್ ರಾಜ್‌ದೀಪ್ ಮತ್ತು ಮನೋಜ್, ಅನ್ನ ಪೂರ್ಣ, ನಾರಾಯಣ ಕರಿ, ಕಲಾ ಶಿಕ್ಷಕ ಪ್ರಮೋದ್ ಕುರ್ನೆ ಇವರನ್ನುಅಭಿನಂದಿಸಲಾಯಿತು. ಶಿಕ್ಷಕಿ ವಿಜೇತಾ ಎಂ. ಸುವರ್ಣ ಅವರು ದಾಕ್ಷಾಯಿಣಿ ಅವರನ್ನು ಪರಿಚಯಿಸಿದರು. ಶಿಕ್ಷಕಿ ಅನಿತಾ ಶೆಟ್ಟಿ ಸಭಾ ಕಾರ್ಯಕ್ರಮ ನಿರೂಪಿಸಿ ದರು. ಶಿಕ್ಷಕ ಶೈಲೇಶ್ ಸಾಲ್ಯಾನ್ ವಂದಿಸಿದರು. ತರಬೇತಿ ಪಡೆದ ಸಂಘದ ಶಾಲಾ ವಿದ್ಯಾರ್ಥಿಗಳು ದಾûಾಯಿಣಿ ಭಟ್ ನಿರ್ದೇಶನದಲ್ಲಿ “ಹಕ್ಕಿ ಹಾಡು’ ಎಂಬ ಕನ್ನಡ ನಾಟಕ ಪ್ರದರ್ಶಿಸಿದರು. ರಂಗ ಭೂಮಿ ನಮಗೆ ಕಲಿಸುವುದು ಕಟ್ಟುವ ಕಲೆಯನ್ನೇ ಹೊರತು ಒಡೆಯುವ ಕಲೆಯನ್ನಲ್ಲ. ವ್ಯಕ್ತಿತ್ವ ವಿಕಸನ ಎಂದರೆ ನಾಟಕವನ್ನು ಮಾಡುವುದು. ಚೆಂಬೂರು ಕರ್ನಾಟಕ ಸಂಘದಲ್ಲಿ ನನಗೆ ಸರಳ ಮನಸ್ಸಿನ ವ್ಯಕ್ತಿಗಳು ಸಿಕ್ಕಿದ್ದಾರೆ. ಸರ್ವ ರೀತಿಯಲ್ಲಿ ಸಹಕಾರ ನೀಡಿದ ಸಂಘದ ಎಲ್ಲ ಸದಸ್ಯರಿಗೆ ನನ್ನ ತುಂಬು ಹೃದಯದ ಕೃತಜ್ಞತೆಗಳು. ಪಾಲಕರು ನಾಟಕ ಅಭಿನಯಕ್ಕೆ ಮಕ್ಕಳಿಗೆ ಬೆಂಬಲ ನೀಡಬೇಕು
– ದಾಕ್ಷಾಯಿಣಿ ಭಟ್ (ನಾಟಕ ನಿರ್ದೇಶಕಿ).