Advertisement

ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ

05:41 PM Feb 07, 2017 | Team Udayavani |

ಮುಂಬಯಿ: ಚೆಂಬೂರು ಕರ್ನಾಟಕ ಸಂಘದ ವಾರ್ಷಿಕ “ಸಾಹಿತ್ಯ ಸಹವಾಸ-2017 ಸಂಭ್ರಮ’ವು ಸಂಘದ ಸಂಚಾಲಕತ್ವದ ಚೆಂಬೂರು ಕರ್ನಾಟಕ ಪ್ರೌಢ ಶಾಲೆ ಮತ್ತು ಕಿರಿಯ ಮಹಾ ವಿದ್ಯಾಲಯದ ಸಭಾಂಗಣದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜರಗಿತು.

Advertisement

ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಸುಧಾಕರ್‌ ಅರಾಟೆ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ವಾರ್ಷಿಕವಾಗಿ ಕೊಡಮಾಡುವ “ವೈ. ಜಿ. ಶೆಟ್ಟಿ ಶ್ರೇಷ್ಠ ಶಿಕ್ಷಕಿ ಪ್ರಶಸ್ತಿ’ಯನ್ನು ನಿಷ್ಠಾವಂತ ಶಿಕ್ಷಕಿಯಾಗಿ ಹೆಸರು ಮಾಡಿದ ನಿವೃತ್ತ ಶಿಕ್ಷಕಿ ಶುಭಾಶಿನಿ ಎಸ್‌. ಹೆಗ್ಡೆ ಅವರಿಗೆ, “ಅರಾಟೆ ನಾಗಮ್ಮ ಶೇಷಪ್ಪ ಪೂಜಾರಿ ಸ್ಮರಣಾರ್ಥ ಪ್ರಶಸ್ತಿ’ಯನ್ನು ಕನ್ನಡ ಮತ್ತು ತುಳು ಭಾಷಾ ಸಂಘಟಕ, ಪ್ರಸಿದ್ಧ ಸಾಹಿತಿ, ಪ್ರಕಾಶಕ ವಸಂತ ಶೆಟ್ಟಿ ಬೆಳ್ಳಾರೆ ಅವರಿಗೆ ಹಾಗೂ ಜೋಗೇಶ್ವರಿ ಪೂರ್ವದ ಶ್ರೀ ಜಗದಂಬಾ ಕಾಳಭೆ„ರವ ದೇವಸ್ಥಾನ ಮಾಜಿ ಆಡಳಿತ ಮುಖ್ಯಸ್ಥ ಜಿ. ಟಿ. ಆಚಾರ್ಯ ಅವರಿಗೆ (ಪತ್ನಿ ಉಷಾ ಗೋಪಾಕೃಷ್ಣ ಅವರನ್ನೊಳಗೊಂಡು) “ಸುಬ್ಬಯ್ಯ ಶೆಟ್ಟಿ ದತ್ತಿ’ ಪ್ರಶಸ್ತಿಯನ್ನು ಗಣ್ಯರ ಸಮ್ಮುಖದಲ್ಲಿ ಪ್ರದಾನಿಸಿ ಗೌರವಿಸಿ ಅಭಿನಂದಿಸಲಾಯಿತು.

ಕರ್ನಾಟಕದ ಮಾಜಿ ಲೋಕಾಯುಕ್ತ, ಸರ್ವೋಚ್ಚ ನ್ಯಾಯಲಯದ ನಿವೃತ್ತ ನ್ಯಾಯಮೂರ್ತಿ ಡಾ|   ಜಸ್ಟೀಸ್‌ ಶಿವರಾಜ್‌ ವಿ. ಪಾಟೀಲ್‌, ಸಂಘದ ಉಪಾಧ್ಯಕ್ಷ ಪ್ರಭಾಕರ್‌ ಟಿ. ಬೋಳಾರ್‌, ಮಾಜಿ ಅಧ್ಯಕ್ಷ ಜಯ ಎನ್‌. ಶೆಟ್ಟಿ, ಗೌರವ  ಪ್ರಧಾನ ಕಾರ್ಯದರ್ಶಿ ರಂಜನ್‌ ಕುಮಾರ್‌ ಅಮೀನ್‌, ಸಾಂಸ್ಕೃತಿಕ ಉಪ ಸಮಿತಿಯ ಕಾರ್ಯದರ್ಶಿ ದಯಸಾಗರ್‌ ಚೌಟ, ಕೋಶಾಧಿಕಾರಿ ಟಿ. ಆರ್‌. ಶೆಟ್ಟಿ, ಸಂಘದ ಜತೆ ಕಾರ್ಯದರ್ಶಿ ದೇವದಾಸ್‌ ಕೆ. ಶೆಟ್ಟಿಗಾರ್‌, ಜತೆ ಕೋಶಾಧಿಕಾರಿ ಸುಂದರ್‌ ಎನ್‌. ಕೋಟ್ಯಾನ್‌, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾದ ಅಶೋಕ್‌ ಸಾಲ್ಯಾನ್‌, ವಿಶ್ವನಾಥ ಶೇಣವ, ಗುಣಾಕರ ಎಚ್‌. ಹೆಗ್ಡೆ, ಸುಧೀರ್‌ ಪುತ್ರನ್‌, ಯೋಗೇಶ್‌ ಗುಜರನ್‌, ಮಧುಕರ್‌ ಜಿ. ಬೈಲೂರು, ರಾಮ ಪೂಜಾರಿ, ಸುಧಾಕರ ಅಂಚನ್‌, ಮೋಹನ್‌ ಕೆ. ಕಾಂಚನ್‌, ಚಂದ್ರಶೇಖರ ಎ. ಅಂಚನ್‌, ಜಯ ಎಂ. ಶೆಟ್ಟಿ, ಸುಧೀರ್‌ ಪುತ್ರನ್‌, ಸಂಜೀವ ಎನ್‌. ಶೆಟ್ಟಿ ಹಾಗೂ ತುಳು-ಕನ್ನಡಿಗ ಶಿಕ್ಷಣಾಭಿಮಾನಿಗಳು ಉಪಸ್ಥಿತರಿದ್ದು, ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು. 

  ಚಿತ್ರ-ವರದಿ: ರೋನ್ಸ್‌  ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next