Advertisement

ಚೆಂಬೂರು ಕರ್ನಾಟಕ ಹೈಸ್ಕೂಲ್‌, ಕಾಲೇಜಿನ ವಾರ್ಷಿಕೋತ್ಸವ

03:27 PM Jan 02, 2018 | |

ಮುಂಬಯಿ: ಚೆಂಬೂರು ಕರ್ನಾಟಕ ಸಂಘದ ಸಂಚಾಲಕತ್ವದ ಚೆಂಬೂರು ಕರ್ನಾಟಕ ಹೈಸ್ಕೂಲ್‌ ಮತ್ತು ಜೂನಿಯರ್‌ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭವು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಡಿ. 22ರಂದು ಶಾಲಾ ಸಭಾಂಗಣದಲ್ಲಿ ಜರಗಿತು.

Advertisement

ಮುಖ್ಯ ಅತಿಥಿಯಾಗಿ ಆಗಮಿಸಿದ ಬಾಬಾ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಶ್‌ ಎಸ್‌. ಶೆಟ್ಟಿ ಅವರು ಮಾತನಾಡಿ, ತಾವು ಚೆಂಬೂರು ಕರ್ನಾಟಕ ಶಾಲೆಯ ಕನ್ನಡ ಮಾಧ್ಯಮದ ಹಳೆವಿದ್ಯಾರ್ಥಿ ಎನ್ನಲು ಹೆಮ್ಮೆಯಾಗುತ್ತಿದೆ. ಈ ಶಾಲೆಯಲ್ಲಿ ಕಲಿತ ಹಲವಾರು ವಿದ್ಯಾರ್ಥಿಗಳು ಉನ್ನತ ಮಟ್ಟಕ್ಕೇರಿ, ಸಮಾಜದಲ್ಲಿ ನಾನಾ ಕ್ಷೇತ್ರದಲ್ಲಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಗಳಲ್ಲಿ ಯಾವತ್ತೂ ಕೀಳರಿಮೆ ಇರಬಾರದು. ಜೀವನದಲ್ಲಿ ಬರುವ ಅಡೆತಡೆ ಮತ್ತು ಸಮಸ್ಯೆಗಳು ಶಾಶ್ವತವಲ್ಲ. ನಾವು ನಮ್ಮ ಹೆತ್ತವರಿಗೆ, ಗುರು-ಹಿರಿಯರಿಗೆ ಗೌರವ ನೀಡಬೇಕು. ವಿದ್ಯಾರ್ಥಿಗಳು ತಮ್ಮ ಅಭ್ಯಾಸದ ಕಡೆಗೆ ಗಮನ ಹರಿಸಲು ಹೆಚ್ಚಿನ ಅಂಕ ಗಳಿಸಲು ಪ್ರಯತ್ನಿಸಬೇಕು ಎಂದು ನುಡಿದರು.

ಚೆಂಬೂರು ಕರ್ನಾಟಕ ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್‌. ಕೆ. ಸುಧಾಕರ್‌ ಅರಾಟೆ ಅವರು ಮಾತನಾಡಿ, ಚೆಂಬೂರು ಕರ್ನಾಟಕ ಸಂಘವು ಒಂದು ಉತ್ತಮ ಶೈಕ್ಷಣಿಕ ಸಂಸ್ಥೆಯಾಗಿದೆ. ಈ ಶೈಕ್ಷಣಿಕ ಸಂಸ್ಥೆಯು ನಾಲ್ಕು ಸಾವಿರಕ್ಕಿಂತಲೂ ಅಧಿಕ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಾ ಬಂದಿದೆ. ಪ್ರಸ್ತುತ ಸಂಘವು ಕಾನೂನು ಕಾಲೇಜನ್ನು ಆರಂಭಿಸಿದೆ ಎಂದು ಹೇಳಿದರು.

ಶೀತಲ್‌ ಅಮಿತ್‌ ಅವರು ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಪೂರ್ವ ಪ್ರಾಥಮಿಕ ಶಾಲೆಯ ವರದಿಯನ್ನು ಆರತಿ ಗಾಣಿಗ, ಪ್ರಾಥಮಿಕ ಶಾಲೆಯ ವರದಿಯನ್ನು ಸುಜಯಾ ಅಂಚನ್‌ ಮತ್ತು ಮಾಧ್ಯಮಿಕ ಹಾಗೂ ಜೂನಿಯರ್‌ ಕಾಲೇಜಿನ ವರದಿಯನ್ನು ಶಾಲಾ ಮುಖ್ಯ ಶಿಕ್ಷಕಿ ಮನ್‌ಜಿàತ್‌ ಕೌರ್‌ ಅವರು ವಾಚಿಸಿದರು.

ಮಾಧ್ಯಮಿಕ ಶಾಲೆಯ ಶಿಕ್ಷಕಿ ಅನಿತಾ ಎಂ. ಶೆಟ್ಟಿ ಅವರು ವಂದಿಸಿದರು. ಶಿಕ್ಷಕಿ ಜಾಹ್ನವಿ ಪ್ರಭು ಮತ್ತು ಸಂಗೀತಾ ಮೆಕಲಾರ ಅವರ ಮಾರ್ಗದರ್ಶನದಲ್ಲಿ ಶಾಲಾ ವಿದ್ಯಾರ್ಥಿಗಳಾದ ಬ್ರಿಜೇಶ್‌ ಯಾದವ್‌, ಮಾನಸಿ ಪಟೇಲ್‌ ಮತ್ತು ಶರಣ್‌ ಅವರು ಸಭಾ ಕಾರ್ಯಕ್ರಮವನ್ನು ನಿರ್ವಹಿಸಿದರು.

Advertisement

ವೇದಿಕೆಯಲ್ಲಿ ಅತಿಥಿಗಳಾದ ಮಹೇಶ್‌ ಎಸ್‌. ಶೆಟ್ಟಿ, ಸಂಘದ ಅಧ್ಯಕ್ಷ ನ್ಯಾಯವಾದಿ ಎಚ್‌. ಕೆ. ಸುಧಾಕರ ಅರಾಟೆ, ಮಾಜಿ ಅಧ್ಯಕ್ಷ ಜಯ ಎನ್‌. ಶೆಟ್ಟಿ, ಗೌರವ ಕಾರ್ಯದರ್ಶಿ ರಂಜನ್‌ ಕುಮಾರ್‌ ಆರ್‌. ಅಮೀನ್‌, ಕೋಶಾಧಿಕಾರಿ ಟಿ. ಆರ್‌. ಶೆಟ್ಟಿ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸುಜಯಾ ಅಂಚನ್‌, ಮಾಧ್ಯಮಿಕ ಶಾಲೆಯ ಮುಖ್ಯ ಶಿಕ್ಷಕಿ ಮನ್‌ಜಿàತ್‌ ಕೌರ್‌ ಶೈನಿ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next