Advertisement
ಸ್ವಾತಂತ್ರ್ಯ ಪೂರ್ವ 1926ರಲ್ಲಿ ಪ್ರಾರಂಭಿಸಲಾಗಿದ್ದ ಈ ಶಾಲೆಯು 2014-15ನೇ ಸಾಲಿನಲ್ಲಿ ಮಕ್ಕಳ ಕೊರತೆಯಿಂದ ಮುಚ್ಚುವ ಸ್ಥಿತಿಗೆತಲುಪಿತ್ತು. ಇಂತಹ ಸಂದರ್ಭದಲ್ಲಿ ಗಡಿಭಾಗದ ಶಾಲೆ ಉಳಿಸಿಕೊಳ್ಳಲೇ ಬೇಕೆಂದು ಸಿಆರ್‌ಪಿ ಆಗಿದ್ದ ಐ.ವಿ. ಕೃಷ್ಣಾರೆಡ್ಡಿ ಅವರನ್ನು ಬಲವಂತ ದಿಂದ ಇಲ್ಲಿಗೆ ವರ್ಗಾವಣೆ ಮಾಡಿತ್ತು. ಇವರು ಬಂದ ನಂತರ ಶಾಲೆಯ ಸ್ವರೂಪವೇ ಬದಲಾಗಿದೆ.
Related Articles
Advertisement
ಗೋಡೆಗಳ”ಚಿತ್ರ’ಣವೇ ಬದಲು: ಶಾಲೆಗೆವರ್ಗಾವಣೆ ಆಗಿ ಬಂದ ಶಿಕ್ಷಕ ಕೃಷ್ಣಾರೆಡ್ಡಿ ಅವರು, ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಶಾಲಾ ಕಾಂಪೌಂಡ್, ಅಡುಗೆ ಕೋಣೆ, ಶೌಚಾಲಯ ಕಟ್ಟಿಸಿ, ಮಳೆ ನೀರಿಂದ ತೇವಗೊಂಡು ಮೂಲ ಸ್ವರೂಪವನ್ನೇ ಕಳೆದುಕೊಂಡಿದ್ದ ಶಾಲಾ ಕೊಠಡಿ ಗಳಿಗೆ ಸುಣ್ಣ ಬಣ್ಣ ಬಳಿಸಿದರು. ಕಚೇರಿ ಗೋಡೆಯ ಮೇಲೆ ವಿಧಾನಸೌಧ, ಶಾಲಾ ಕೊಠಡಿಗಳ ಮೇಲೆ ಕೆಎಸ್‌ಆರ್‌ಟಿಸಿ ಬಸ್, ರೈಲು, ಹೂಗಳು ಮುಂತಾದ ಚಿತ್ರಗಳು ಬಿಡಿಸಿ ಮಕ್ಕಳು, ಪೋಷಕರ ಚಿತ್ತಾಕರ್ಷಣೆ ಮಾಡಿದರು.
ಮುಖ್ಯ ಶಿಕ್ಷಕರ ಸಹಕಾರ: ಶಿಕ್ಷಕ ಕೃಷ್ಣಾರೆಡ್ಡಿ ಅವರ ಕಾರ್ಯಕ್ಕೆ ಮುಖ್ಯ ಶಿಕ್ಷಕ ಟಿ.ವೆಂಕಟರಮಣಪ್ಪ ಬೆನ್ನೆಲುಬಾಗಿದ್ದಾರೆ. ಸಹ ಶಿಕ್ಷಕರು, ಗ್ರಾಮ ಸ್ಥರು ಉತ್ತಮ ಸಹಕಾರ ನೀಡುತ್ತಿದ್ದಾರೆ.ಇದರಿಂದ ಮುಚ್ಚುವ ಹಂತದಲ್ಲಿದ್ದ ಇತಿಹಾಸವುಳ್ಳ ಶಾಲೆಯ ಆವರಣದಲ್ಲಿ ಮತ್ತೆ ಮಕ್ಕಳ ಕಲರವ ಕೇಳಿ ಬಂದಿದೆ. ಶಾಲೆಗೆ ಯಾರೇ ಭೇಟಿ ನೀಡಲಿ ಅವರೊಂದಿಗೆ ಪ್ರೀತಿ ವಿಶ್ವಾಸದಿಂದ ಮಾತನಾಡಿ, ಮಕ್ಕಳ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ.
ಕೋವಿಡ್ ಸಮಯದಲ್ಲೂ ಕೆಲಸ: ಕೋವಿಡ್ ಸಂದರ್ಭದಲ್ಲಿ ಸರ್ಕಾರಿ ಶಾಲೆ ಮುಚ್ಚಿದ್ದಾಗಲೂ, ಶಿಕ್ಷಕ ಕೃಷ್ಣಾರೆಡ್ಡಿ ಅವರು ಶಾಲೆಗೆ ಹಾಜರಾಗಿ, ಶಾಲಾ ಕೊಠಡಿಗಳಲ್ಲಿನ ಕಸವನ್ನು ಗುಡಿಸಿ, ಆವರಣದಲ್ಲಿನ ಗಿಡಗಳಿಗೆ ನೀರು ಹಾಕುವುದು, ಗುಂಡಿ ಮಾಡುವುದು, ಇತರೆಸ್ವಚ್ಛತಾ ಕಾರ್ಯ ಮಾಡುತ್ತಿದ್ದರು. ಇಂತಹ ಕಾರ್ಯಗಳಿಂದ 7 ಬಾರಿ ಜನಮೆಚ್ಚಿದ ಶಿಕ್ಷಕರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಯಶಸ್ವಿದಾಖಲಾತಿ ಆಂದೋಲನಾ:ಕೇವಲ ಶಾಲೆಯ ಸೌಂದರ್ಯಕ್ಕೆ ಒತ್ತು ನೀಡದ ಶಿಕ್ಷಕ ಕೃಷ್ಣಾರೆಡ್ಡಿ, ಮುಖ್ಯ ಶಿಕ್ಷಕರು, ಸಿಬ್ಬಂದಿ ಸರ್ಕಾರದ ಆದೇಶದಂತೆ ಪರಿಣಾಮಕಾರಿ ಆಗಿ ದಾಖಲಾತಿ ಆಂದೋಲನ ನಡೆಸಿದರು. ಊರೂರು, ಮನೆಗಳನ್ನು ಸುತ್ತಿ ಎಲ್ ಕೆಜಿಯಿಂದ 7ನೇ ತರಗತಿ ವರೆಗೂ ಒಟ್ಟು172 ಮಕ್ಕಳನ್ನು ಶಾಲೆಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ ಮೂಲಕ ಹೋಬಳಿಯಲ್ಲೇ ಜನಮನ ಮೆಚ್ಚಿದ ಸರ್ಕಾರಿ ಶಾಲೆ ಆಗಿದೆ.
ಶಾಸಕರ ಮೆಚ್ಚುಗೆ:ಈ ಶಾಲೆಗೆ ಇತ್ತೀಚಿಗೆ ಭೇಟಿ ನೀಡಿದ್ದ ಕ್ಷೇತ್ರದ ಶಾಸಕ ಎಸ್.ಎನ್.ಸುಬ್ಟಾರೆಡ್ಡಿ, ಶಿಕ್ಷಕರ ಕಾರ್ಯ ವೈಖರಿಗೆ ಮುಚ್ಚುಗೆ ವ್ಯಕ್ತ ಪಡಿಸಿದ್ದರು. ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆ ತೆರೆದು 172 ಮಕ್ಕಳನ್ನು ದಾಖಲಾತಿ ಮಾಡಿ, ಶಾಲಾ ಕಚೇರಿ, ಕೊಠಡಿಗಳಿಗೆ ಸಣ್ಣ ಬಣ್ಣ ಬಳಿಸಿಸುಂದರವಾಗಿ ಮಾಡಿದ್ದಕ್ಕೆ ಶಿಕ್ಷಕ ವೃಂದವನ್ನು ಅಭಿನಂದಿಸಿದ್ದಾರೆ. ಶಿಕ್ಷಕ ಮನಸ್ಸು ಮಾಡಿದ್ರೆ ಮಕ್ಕಳಿಗೆ ಪಾಠ ಮಾಡುವುದರ ಜೊತೆಗೆ ಶಾಲೆಯನ್ನೂ ಅಭಿವೃದ್ಧಿಪಡಿಸಿ ಮಕ್ಕಳ ದಾಖಲಾತಿಯೂ ಹೆಚ್ಚಿಸಬಲ್ಲ ಎಂಬುದಕ್ಕೆ ಹೋಬಳಿ ಕೇಂದ್ರದಲ್ಲಿನ ಈ ಮಾದರಿ ಪ್ರಾಥಮಿಕ ಸರ್ಕಾರಿ ಶಾಲೆ ಸಾಕ್ಷಿಯಾಗಿದೆ. ಮಕ್ಕಳ ಪೋಷಕರು, ದಾನಿಗಳು ನೆರವಿನ ಜೊತೆಗೆ ಸಹಕಾರವೂ ನೀಡುತ್ತಿದ್ದಾರೆ. ಇದೀಗ ಶಾಲಾ ಮುಂಭಾಗದಲ್ಲಿ ಪಾರ್ಕ್ ನಿರ್ಮಾಣ ಮಾಡ ಬೇಕಾಗಿದೆ. ಶಾಸಕರೂ ಸಹಕಾರಕೊಡುತ್ತಿದ್ದಾರೆ. ಶಾಲೆಗೆ ಸಹಾಯ ಹಸ್ತ ಚಾಚುತ್ತಿರುವ ಎಲ್ಲರಿಗೂ ಕೃತಜ್ಞತೆ ಹೇಳುತ್ತೇನೆ.
– ಟಿ.ವೆಂಕಟರಮಣಪ್ಪ, ಮುಖ್ಯಶಿಕ್ಷಕ, ಸರ್ಕಾರಿ ಮಾದರಿ
ಶಾಲೆ, ಚೇಳೂರು ಚೇಳೂರು ಹೃದಯ ಭಾಗದಲ್ಲಿನ ಸರ್ಕಾರಿ ಶಾಲೆಯಲ್ಲಿ ಸ್ವತ್ಛತೆಕಾಪಾಡುವುದರ ಜೊತೆಗೆ ಮಕ್ಕಳ ದಾಖಲಾತಿ ಹೆಚ್ಚಿಸಿ ಪೋಷಕರೊಂದಿಗೆ
ಪ್ರೀತಿ- ವಿಶ್ವಾಸ ಬೆಳೆಸಿಕೊಂಡಿರುವುದು ಸಂತಸದವಿಷಯ. ಈ ಶಾಲೆಗೆ ಎಲ್ಲಾ ರೀತಿಯ ಸಹಕಾರ ನೀಡಲು ಸದಾ ಸಿದ್ಧನಿದ್ದೇನೆ.
– ಎಸ್.ಎನ್.ಸುಬ್ಟಾರೆಡ್ಡಿ, ಶಾಸಕ, ಬಾಗೇಪಲ್ಲಿ. ಮಕ್ಕಳ ದಾಖಲಾತಿ ಕಳೆದ ವರ್ಷಕ್ಕಿಂತ ಹೆಚ್ಚಿದೆ.ಇಲ್ಲಿನ ಶಿಕ್ಷಕರು ಶಾಲೆ ಉಳಿ ಸಲು ಅವಿರತ ಶ್ರಮಿಸುತ್ತಿದ್ದಾರೆ. ಮುಚ್ಚುವ ಸ್ಥಿತಿಯಲ್ಲಿದ್ದ ಶಾಲೆಗೆ ಮರುಜೀವನ ನೀಡಿದ ಇಲ್ಲಿನ ಶಿಕ್ಷಕರಿಗೆ ಇಲಾಖೆಯು ಅಭಿನಂದಿಸಿ ಪ್ರೋತ್ಸಾಹಿಸಬೇಕಿದೆ.
– ಟೀ ಹೋಟೆಲ್ ರಂಜಾನ್,
ಚಿನ್ನಮಲ್ಲಪ್ಪ, ಪೋಷಕರು, ಚೇಳೂರು. -ಪಿ.ವಿ.ಲೋಕೇಶ್