Advertisement

Chef Chidambara: ಹಾಡಿನಲ್ಲಿ ಶೆಫ್ ಚಿದಂಬರ

12:06 PM May 12, 2024 | Team Udayavani |

ಎಂ.ಆನಂದರಾಜ್‌ ನಿರ್ದೇಶನದ ಹಾಗೂ ಅನಿರುದ್ಧ್ ಜತ್ಕರ್‌ ನಾಯಕರಾಗಿ ನಟಿಸಿರುವ ಶೆಫ್ ಚಿದಂಬರ ಚಿತ್ರದ ಚಿತ್ರೀಕರಣ ಪೂರ್ಣಗೊಂ ಡಿದ್ದು,ಇತ್ತೀಚೆಗೆ ಈ ಚಿತ್ರದ ಟೈಟಲ್‌ ಟ್ರ್ಯಾಕ್‌ ಬಿಡುಗಡೆಯಾಗಿದೆ.

Advertisement

ಇದು ಬಿಡುಗಡೆಯಾಗುತ್ತಿರುವ ಚಿತ್ರದ ಮೊದಲ ಗೀತೆ. ಶ್ರೀಗಣೇಶ್‌ ಪರಶುರಾಮ್‌ ಬರೆದು, ರಿತ್ವಿಕ್‌ ಮುರಳಿಧರ್‌ ಸಂಗೀತ ನೀಡಿರುವ ಈ ಹಾಡನ್ನು ನಾಯಕ ಅನಿರುದ್ಧ್ ಅವರೆ ಹಾಡಿದ್ದಾರೆ. ದಮ್ತಿ ಪಿಕ್ಚರ್ಸ್‌ ಲಾಂಛನದಲ್ಲಿ ರೂಪ ಡಿ.ಎನ್‌ ನಿರ್ಮಿಸಿರುವ ಈ ಚಿತ್ರಕ್ಕೆ ನಿರ್ದೇಶಕರೆ ಕಥೆ ಬರೆದಿದ್ದು, ಚಿತ್ರಕಥೆ ಹಾಗೂ ಸಂಭಾಷಣೆ ಗಣೇಶ್‌ ಪರಶುರಾಮ್‌ ಬರೆದಿದ್ದಾರೆ.

ಉದಯಲೀಲಾ ಛಾಯಾಗ್ರಹಣ, ರಿತ್ವಿಕ್‌ ಮುರಳಿರ್ಧ ಸಂಗೀತ ನಿರ್ದೇಶನ, ವಿಜೇತ್‌ ಚಂದ್ರ ಸಂಕಲನ, ವಿಕ್ರಾಂತ್‌ ರೋಣ ಖ್ಯಾತಿಯ ಆಶಿಕ್‌ ಕುಸುಗೊಳ್ಳಿ ಡಿ.ಐ, ನರಸಿಂಹಮೂರ್ತಿ ಸಾಹಸ ನಿರ್ದೇಶನ ಹಾಗೂ ಮಾಧುರಿ ಪರಶುರಾಮ್‌ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.

ಅನಿರುದ್ಧ್ ಅವರಿಗೆ ನಾಯಕಿಯರಾಗಿ ನಿಧಿ ಸುಬ್ಬಯ್ಯ ಹಾಗೂ ಲವ್‌ ಮಾಕ್ಟೇಲ್ ಖ್ಯಾತಿಯ ರೆಚೆಲ್‌ ಡೇವಿಡ್‌ ಅಭಿನಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next