Advertisement
ಇದಕ್ಕೆ ಸಾಕ್ಷಿಯಾಗಿ ನುಗ್ಗೇಹಳ್ಳಿ ಹೋಬಳಿ ಗೌಡಗೆರೆ ಸಮೀಪದಲ್ಲಿ ಹಾದು ಹೋಗಿರುವ ರಾಷ್ಟ್ರೀಯದ್ದಾರಿಯಲ್ಲಿ ಚಿರತೆಗಳು ವಾಹನಕ್ಕೆ ಸಿಕ್ಕಿ ಮೃತಪಟ್ಟಿರುವುದು. ಗೌಡಗೆರೆ ಗ್ರಾಮದ ಸುತ್ತಮುತ್ತಲಿನ ಅನೇಕ ಹಳ್ಳಿಯಲ್ಲಿ ಬೀದಿನಾಯಿಗಳು ನಾಪತ್ತೆಯಾಗಿರುವುದು. ಕೆಲವು ಮನೆಗಳಲ್ಲಿ ಕುರಿ, ರಾಸುಗಳ ಕರುಗಳು ರಾತ್ರಿ ಕಳೆದು ಬೆಳಗಾಗುವುದರೊಳಗೆ ಮಾಯವಾಗುತ್ತಿವೆ ಇದರಿಂದ ಚಿರತೆ ಹಾವಳಿ ಇದೆ ಎನ್ನುವುದಕ್ಕೆ ಮತ್ತಷ್ಟು ಪುಷ್ಟಿ ನೀಡಿದಂತಾಗುತ್ತಿದೆ.
Related Articles
Advertisement
ಕೋಳಿಶೆಡ್‌ನತ್ತ ಚಿರತೆ ಹೆಜ್ಜೆ: ಬೆಟ್ಟ ಗುಡ್ಡ ಹಾಗೂ ಹೆಚ್ಚು ಮರಗಿಡಗಳು ಬೆಳೆದಿರುವ ಜಾಗದಲ್ಲಿ ವಾಸವಾಗಿರುವ ಚಿರತೆಗಳು ರಾತ್ರಿಯಾಗುತ್ತಿದಂತೆ ಗ್ರಾಮಕ್ಕೆ ಪ್ರವೇಶ ಮಾಡುತ್ತಿವೆ. ನಾಯಿ, ಕುರಿ, ರಾಸುಗಳನ್ನು ಹೊಂಚುಹಾಕಿ ರಕ್ತ ಹೀರುತ್ತಿದ್ದ ಚಿರತೆಗಳು ಇದೀಗ ಕೋಳಿ ಫಾರಂಗಳತ್ತ ಗುರಿ ಇಟ್ಟಿವೆ. ಕೋಳಿಶೆಡ್‌ನಲ್ಲಿ ಚಿರತೆ ದಾಳಿಮಾಡಿ ಹತ್ತಾರು ನಾಟಿ ಕೋಳಿ ಹಾಗೂ ಫಾರಂ ಕೋಳಿಗಳ ಪ್ರಾಣತೆಗೆಯುತ್ತಿವೆ. ಇದರಿಂದ ಶೆಡ್ ಮಾಲೀಕರಿಗೆ ಸಾವಿರಾರು ರೂ. ನಷ್ಟವಾಗುತ್ತಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇಡುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಶ್ರವಣಬೆಳಗೊಳದ ವಿಂದ್ಯಗಿರಿ ಮತ್ತು ಚಂದ್ರಗಿರಿಯಲ್ಲಿ ಬೆಟ್ಟದಲ್ಲಿ ಬೋನು ಇಡಲಾಗಿದೆ. ಇನ್ನು ಹಲವು ಗ್ರಾಮಸ್ಥರು ಬೋನಿಗೆ ಬೇಡಿಕೆ ಇಟ್ಟಿದ್ದಾರೆ. ಬೇಡಿಕೆ ಇರುವಷ್ಟು ಬೋನ್ ಲಭ್ಯವಿಲ್ಲದೇ ತೊಂದರೆಯಾಗುತ್ತಿದೆ. ಯಾವ ಗ್ರಾಮದಲ್ಲಿ ಹೆಚ್ಚು ಚಿರತೆ ಕಾಣಿಸಿಕೊಳ್ಳುತ್ತದೋ ಅಲ್ಲಿಗೆ ಕೂಡಲೆ ಸಿಬ್ಬಂದಿ ಕಳುಹಿಸಿ ಚಿರತೆ ಹಿಡಿಯಲು ಕ್ರಮ ಕೈಗೊಳ್ಳುತ್ತಿದ್ದೇವೆ.-ಹೇಮಂತ ಕುಮಾರ, ವಲಯ ಅರಣ್ಯ ಅಧಿಕಾರಿ ಚಿರತೆ ಒಂದು ಕುರಿ ತಿಂದಿರುವುದಲ್ಲದೇ ಕರುವಿನ ಮೇಲೂ ದಾಳಿ ಮಾಡಿ ಅದನ್ನು ಕೊಂದು ಹಾಕಿದೆ ಈ ಬಗ್ಗೆ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದೇನೆ ಅವರು ಪಶುಆಸ್ಪತ್ರೆಯಲ್ಲಿ ಸತ್ತ ಕುರುವಿನ ದೇಹ ಪರೀಕ್ಷಿಸಿ ಪ್ರಮಾಣ ಪತ್ರ ನೀಡಿ ನಂತರ ಪರಿಹಾರ ನೀಡುತ್ತೇನೆ ಎಂದು ಹೇಳಿದ್ದರು. ಅಗತ್ಯ ದಾಖಲೆ ನೀಡಿ ತಿಂಗಳು ಕಳೆದರೂ ಬಿಡಿಗಾಸು ಪರಿಹಾರ ನೀಡಿಲ್ಲ.
-ಗುರು, ಅಣ್ಣೇನಹಳ್ಳಿ ರೈತ * ಶಾಮಸುಂದರ್ ಕೆ ಅಣ್ಣೇನಹಳ್ಳಿ