Advertisement

Madhya Pradesh National Park; ಓಬನ್‌ ಚೀತಾ ಶಿವಪುರಿ ಕಾಡಿನಲ್ಲಿ ಪತ್ತೆ

09:37 PM Apr 18, 2023 | Team Udayavani |

ಭೋಪಾಲ್‌: ಮಧ್ಯಪ್ರದೇಶದ ಶಿಯೋಪುರದ ಕುನೋ ರಾಷ್ಟ್ರೀಯ ಉದ್ಯಾನವನ (ಕೆಎನ್‌ಪಿ)ದಿಂದ ಹೊರಬಂದಿದ್ದ ಚೀತಾ ಓಬನ್‌, ನೆರೆಯ ಶಿವಪುರಿ ಜಿಲ್ಲೆಯ ಮಾಧವ ರಾಷ್ಟ್ರೀಯ ಉದ್ಯಾನವನ ಹೊಕ್ಕಿದೆ. ಅದೇ ಪ್ರದೇಶದಲ್ಲಿ ಇತ್ತೀಚೆಗಷ್ಟೇ ಎರಡು ಹುಲಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಅಕ್ಕ-ಪಕ್ಕದ ಕಾಡುಗಳಿಗೆ ಚೀತಾಗಳು ಪ್ರವೇಶಿಸುವುದು ಸಹಜ ಪ್ರಕ್ರಿಯೆ ಹೀಗಾಗಿ ಅದನ್ನು ಹಿಂದಿರುಗಿಸುವ ಬಗ್ಗೆ ಈವರೆಗೆ ಯಾವುದೇ ಯೋಜನೆ ರೂಪಿಸಿಲ್ಲ.ಇದು ಎರಡನೇ ಬಾರಿಗೆ ಓಬನ್‌ ಉದ್ಯಾನವನದಿಂದ ಹೊರಬಂದಿದೆ. ಇದಕ್ಕೂ ಮೊದಲು ಶಿವಪುರಿ ಜಿಲ್ಲೆಯ ಬೈರದ್‌ ಎನ್ನುವ ಪ್ರದೇಶಕ್ಕೆ ತೆರಳಿತ್ತು. ಅಲ್ಲಿಂದ ಮರಳಿ ಕರೆತಂದು, ಕೆಎನ್‌ಪಿಗೆ ಬಿಡಲಾಗಿತ್ತು. ಈಗ ಮತ್ತೆ ಮಾಧವ ರಾಷ್ಟ್ರೀಯ ಉದ್ಯಾನವನಕ್ಕೆ ತೆರಳಿದೆ ಎಂದಿದ್ದಾರೆ.

ನಮೀಬಿಯಾದಿಂದ ಭಾರತಕ್ಕೆ ತಂದಿರುವ ಚೀತಾಗಳ ಪೈಕಿ, ಓಬನ್‌ ಕೂಡ ಒಂದಾಗಿದ್ದು, ಇದು ವರ್ಷ ವಯಸ್ಸಿನದ್ದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next