Advertisement

ಗಂಗಾವತಿ: ಹೊರ ವಲಯದ ಐಟಿಐ ಕಾಲೇಜ್ ಹಿಂಭಾಗದ ಗುಡ್ಡದಲ್ಲಿ ಚಿರತೆಗಳ ಪ್ರತ್ಯಕ್ಷ

09:44 AM Dec 15, 2022 | Team Udayavani |

ಗಂಗಾವತಿ: ನಗರದ ಹೊರವಲಯದ ಐಟಿಐ ಕಾಲೇಜು ಹಿಂಭಾಗದ ಗುಡ್ಡಪ್ರದೇಶದಲ್ಲಿ ಗುರುವಾರ ಬೆಳ್ಳಂಬೆಳ್ಳಿಗ್ಗೆ ವಾಕಿಂಗ್ ಗೆ ತೆರಳಿದವರಿಗೆ ಚಿರತೆಗಳು ಪ್ರತ್ಯಕ್ಷವಾಗಿದ್ದು, ಐಟಿಐ ಕಾಲೇಜು ರಸ್ತೆಯಲ್ಲಿ ವಾಕಿಂಗ್ ಗೆ ತೆರಳುವವರು ಆತಂಕಗೊಂಡಿದ್ದಾರೆ.

Advertisement

ಐಟಿಐ ಕಾಲೇಜು ಹಿಂಭಾಗದ ಗುಡ್ಡ, ಸಿದ್ದಿಕೇರಿ, ಸೂರ್ಯನಾಯಕನ ತಾಂಡ, ವಾಣೀಭದ್ರೇಶ್ವರ ಗುಡ್ಡ ಸೇರಿದಂತೆ ಇಲ್ಲಿ ಗುಡ್ಡ ಬೆಟ್ಟಗಳಲ್ಲಿ ಚಿರತೆಗಳು ಕಂಡುಬಂದಿದ್ದು, ಕೆಲ ಗ್ರಾಮಗಳಲ್ಲಿ ಜನಜಾನುವಾರುಗಳ ಮೇಲೆ ದಾಂಧಲೆ ನಡೆಸಿವೆ.

ಅರಣ್ಯ ಇಲಾಖೆ ಚಿರತೆ ಮತ್ತು ಕರಡಿಗಳನ್ನು ಸೆರೆ ಹಿಡಿಯಲು ಬೋನ್ ಗಳನ್ನು ಇರಿಸಿದ್ದು, ಕಳೆದ ವಾರ ಉಡುಮಕಲ್ ಗಡ್ಡಿ ಗ್ರಾಮದ ಹೊರಗೆ ಇರಿಸಿದ್ದ ಬೋನ್ ಗೆ ಚಿರತೆ ಬಿದ್ದಿತ್ತು. ಇದೀಗ ಸಂಗಾಪೂರ ಮತ್ತು ಅಂಜನಾದ್ರಿ, ಪಂಪಾಸರೋವರ ಭಾಗದಲ್ಲಿ ಚಿರತೆಗಳು ಹಗಲಿನಲ್ಲಿಯೇ ಪ್ರತ್ಯಕ್ಷವಾಗಿ ಜನರಿಗೆ ಆತಂಕ ಉಂಟು ಮಾಡಿವೆ.

ಅರಣ್ಯ ಇಲಾಖೆ ವೈಜ್ಞಾನಿಕ ತಂತ್ರಗಳನ್ನು ಬಳಸಿ ಕಾಡು ಪ್ರಾಣಿಗಳಿಂದ ಜನ-ಜಾನುವಾರುಗಳಿಗೆ ರಕ್ಷಣೆ ನೀಡಬೇಕೆಂದು ಗುರುವಾರ ಬೆಳ್ಳಿಗ್ಗೆ ಗುಡ್ಡದ ಬಂಡೆಯ ಮೇಲೆ ಮಲಗಿದ್ದ ಚಿರತೆಯನ್ನು ತಮ್ಮ ಮೊಬೈಲ್ ನಲ್ಲಿ‌ ಸೆರೆ ಹಿಡಿದ ವಿರೇಶ ಆರತಿ ಎಂಬವರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next