Advertisement

ಚೀರ್‌ ಫಾರ್‌ ಇಂಡಿಯಾ ಅಭಿಯಾನದಲ್ಲಿ ಪಾಲ್ಗೊಳ್ಳಿ

04:01 PM Jul 22, 2021 | Team Udayavani |

ಬೆಂಗಳೂರು: ಟೋಕಿಯೋಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿರುವಭಾರತೀಯ ಆಟಗಾರರಿಗೆ ಉತ್ತೇಜನ ನೀಡುವ ಚೀರ್‌ ಫಾರ್‌ ಇಂಡಿಯಾ ಅಭಿಯಾನದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಉನ್ನತ ಶಿಕ್ಷಣ ಖಾತೆ ಸಚಿವರೂ ಆದಉಪ ಮುಖ್ಯಮಂತ್ರಿಡಾ.ಸಿ.ಎನ್‌.ಅಶ್ವತ್ಥನಾರಾಯಣ ಕರೆ ನೀಡಿದರು.

Advertisement

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿನಭಾರತೀಯ ಸ್ಪರ್ಧಾಳುಗಳಿಗೆ ಪ್ರೋತ್ಸಾಹ ನೀಡುವನಿಟ್ಟಿನಲ್ಲಿ ಭಾರತೀಯ ದೈಹಿಕ ಶಿಕ್ಷಣಪ್ರತಿಷ್ಠಾನ ಹಮ್ಮಿಕೊಂಡಿದ್ದ ರಾಷ್ಟ್ರೀಯಮಟ್ಟದ ವೆಬಿನಾರ್‌ನಲ್ಲಿ ಭಾಗವಹಿಸಿಮಾತನಾಡಿದ ಅವರು, 15 ದಿನಗಳಕಾಲ ನಡೆಯಲಿರುವ ಈ ಕ್ರೀಡಾಹಬ್ಬದಲ್ಲಿ ನಮ್ಮ ದೇಶದ ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಈ ಅಭಿಯಾನದಲ್ಲಿ ಎಲ್ಲರೂ ಭಾಗಿಯಾಗುವಂತೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಈ ಅಭಿಯಾನದ ಭಾಗವಾಗಿ ತಮ್ಮಸಾಮಾಜಿಕ ತಾಣದಖಾತೆಗಳಲ್ಲಿ ನಮ್ಮಕ್ರೀಡಾಪಟುಗ ‌ಳಿಗೆಚೈತನ್ಯ, ಪ್ರೋತ್ಸಾಹ ತುಂಬುವಂಥ ಬರಹ ಗಳನ್ನು,ಪೋಸ್ಟ್‌ಗಳನ್ನು ಹಾಕುವಮೂಲಕ ದೇಶಪ್ರೇಮಮೆರೆಯ ಬೇಕು ಎಂದುಸಲಹೆ ನೀಡಿದರು.

ರಾಜ್ಯದ ಯುವಜನ ಸಬಲೀಕರಣಮತ್ತು ಕ್ರೀಡಾ ಖಾತೆ ಸಚಿವಡಾ.ಕೆ.ಸಿ.ನಾರಾ ಯಣಗೌಡ, ಆಳ್ವಾಸ್‌ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಮೋಹನ್‌ ಆಳ್ವಾ, ಒಲಿಂಪಿಕ್‌ ಮಾಜಿಕ್ರೀಡಾಪಟು ಪ್ರಮೀಳಾ ಅಯ್ಯಪ್ಪ,ಅರ್ಜುನ ಪ್ರಶಸ್ತಿ ವಿಜೇತ ಜೂಡ್‌ಫೆಲಿಕ್ಸ್‌, ಭಾರತದ ದೈಹಿಕ ಶಿಕ್ಷಣ ಪ್ರತಿಷ್ಠಾನದ ಕಾರ್ಯದರ್ಶಿ ಪಿಯೂಷ್‌ಜೈನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next