Advertisement

ವೈನ್ಸ್‌ ಸ್ಟೋರ್ ಗಳಲ್ಲಿನ ದಾಸ್ತಾನು ಪರಿಶೀಲನೆ

05:17 PM Apr 30, 2020 | mahesh |

ಕೆಜಿಎಫ್: ದುಬಾರಿ ಬೆಲೆಗೆ ಅಕ್ರಮವಾಗಿ ಮದ್ಯ ಮಾರಾಟ ಮಾಡುವುದರ ಜೊತೆಗೆ ಇತ್ತೀಚೆಗೆ ತಾಲೂಕಿನಲ್ಲಿ ಮದ್ಯದಂಗಡಿಗಳಿಗೆ ಕನ್ನಾ ಹಾಕುವ ಪ್ರಕರಣಗಳು ಹೆಚ್ಚಾಗಿವೆ. ಇಂತಹ ಘಟನೆಗಳು ಕಳ್ಳರಿಂದಲೋ ಅಥವಾ ಬಾರ್‌ ಮಾಲಿಕರಿಂದ ನಡೆಯುತ್ತಿದೆಯೋ ಎಂಬ ಸಂಶಯ ಜನರಲ್ಲಿ ಮೂಡಿದೆ. ಈ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆ ಮಂಗಳವಾರದಿಂದ ನಗರದ ವಿವಿಧ ಬಾರ್‌ ಮತ್ತು ವೈನ್ಸ್‌ ಸ್ಟೋರ್‌ಗಳ ಮೇಲೆ ದಾಳಿ ನಡೆಸಿ, ಮದ್ಯ ದಾಸ್ತಾನು (ಸ್ಟಾಕ್‌) ಪರಿಶೀಲಿಸಲು ಮುಂದಾಗಿದ್ದು, ಅಂಗಡಿ ಮಾಲಿಕರೇ ಬ್ಲಾಕ್‌ನಲ್ಲಿ ಮಾರಾಟ ಮಾಡುತ್ತಿದ್ದಾರೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಇದರಿಂದ ರಾಜ್ಯ ಅಬಕಾರಿ ಆಯುಕ್ತರು ಎಲ್ಲಾ ಮದ್ಯದಂಗಡಿಗಳಲ್ಲಿರುವ ದಾಸ್ತಾನು ಪರಿಶೀಲನೆ ನಡೆಸಿ ವರದಿ ನೀಡುವಂತೆ ಆದೇಶ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಒಂದನೇ ಅಡ್ಡರಸ್ತೆಯಲ್ಲಿರುವ ಲಿಕ್ಕರ್‌ ಕಾರ್ನರ್‌ ಎಂಬ ವೈನ್ಸ್‌ ಸ್ಟೋರ್ಗೆ ದಾಳಿ ಮಾಡಿದ ಅಬಕಾರಿ ಅಧಿಕಾರಿಗಳು, ಕಡತ ಹಾಗೂ ಅಂಗಡಿಯಲ್ಲಿರುವ ಸ್ಟಾಕ್‌ಗಳ ಪರಿಶೀಲನೆ ನಡೆಸಿದರು.

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮದ್ಯದಂಗಡಿಗಳನ್ನು ಸೀಲ್‌ ಮಾಡುವ ಸಂದರ್ಭದಲ್ಲಿ ಅಂಗಡಿಯಲ್ಲಿನ ದಾಸ್ತಾನು ಪಟ್ಟಿಯನ್ನು ತೆಗೆದುಕೊಂಡ ನಂತರ ಸೀಲ್‌ ಮಾಡಬೇಕು ಎಂಬ ನಿಯಮವಿದ್ದರೂ ಸೀಲ್‌ ಹಾಕುವ ವೇಳೆ ಸರ್ಕಾರದ ಆದೇಶವನ್ನು ಪಾಲಿಸದೆ, ಕೇವಲ ಅಂಗಡಿಗಳಿಗೆ ಸೀಲ್‌ ಮಾಡಲಾಗಿದೆ. ಆದ್ದರಿಂದ ಕೆಲವು ಅಂಗಡಿ ಮಾಲಿಕರು ಮದ್ಯದ ಬಾಟಲಿಗಳನ್ನು ಕಳ್ಳ ಮಾರ್ಗದಲ್ಲಿ ಹೊರ ತಂದು ಮಾರಾಟ ಮಾಡಲು ಅನುಕೂಲವಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next