Advertisement

ಚೆಕ್‌ಪೋಸ್ಟ್‌ಗಳಲ್ಲಿ ತಪಾಸಣೆ ಚುರುಕುಗೊಳಿಸಿ: ಡೀಸಿ

03:45 PM Aug 12, 2021 | Team Udayavani |

ಚಾಮರಾಜನಗರ: ಕೋವಿಡ್‌ ತಡೆಯುವ ಮುಂಜಾಗ್ರತಾ ಕ್ರಮವಾಗಿ ಈ ಹಿಂದೆ ಸ್ಥಾಪಿಸಲಾಗಿದ್ದ 5 ಅಂತರ ಜಿಲ್ಲಾ ಚೆಕ್‌ಪೋಸ್ಟ್‌ಗಳನ್ನು ಶೀಘ್ರವೇ ಮತ್ತೆ ಆರಂಭಿಸಿ ತಪಾಸಣೆ ಕಟ್ಟುನಿಟ್ಟಾಗಿ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್‌.ರವಿ ಸೂಚನೆ ನೀಡಿದರು.

Advertisement

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೋವಿಡ್‌-19 ನಿರ್ವಹಣೆ ಸಂಬಂಧ ಕರೆಯಲಾಗಿದ್ದ ಆರೋಗ್ಯ ಇಲಾಖೆ, ಪೊಲೀಸ್‌ ಅಧಿಕಾರಿಗಳು, ಇತರೆ ಇಲಾಖೆಗಳ ನೋಡಲ್‌ ಅಧಿಕಾರಿಗಳ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಅಂತರ ಜಿಲ್ಲೆಗಳನ್ನು ಸಂಪರ್ಕಿಸುವ ಟಗರುಪುರ, ಸತ್ತೇಗಾಲ, ಬಾಣಳ್ಳಿ, ಕವಲಂದೆ ಬಳಿ, ಬೇಗೂರು ಸ್ಥಳಗಳಲ್ಲಿ ಚೆಕ್‌ ಪೋಸ್ಟ್‌ ಗಳನ್ನು ಕೂಡಲೇ ತೆರೆದು ಕಾರ್ಯ ಆರಂಭಿಸಬೇಕು. ಪೊಲೀಸ್‌, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿಯನ್ನೊಳ ಗೊಂಡ ತಂಡ ನಿಯೋಜಿಸಬೇಕು. ಚೆಕ್‌ಪೋಸ್ಟ್‌ನಲ್ಲಿ ತಪಾಸಣೆ ಚುರುಕುಗೊಳಿಸಬೇಕು ಎಂದರು.

ಚೆಕ್‌ಪೋಸ್ಟ್‌ಗಳಲ್ಲಿ ಹೊರ ಜಿಲ್ಲೆಯಿಂದ ಜಿಲ್ಲೆಯ ಪ್ರವಾಸಿ ತಾಣ, ಧಾರ್ಮಿಕಕ್ಷೇತ್ರಗಳಿಗೆ ಭೇಟಿ ನೀಡಲು ಬರುವವರನ್ನು ಅಲ್ಲಲ್ಲಿ ತಪಾಸಣೆಗೆ ಒಳಪಡಿಸಬೇಕು. ವಿಶೇಷವಾಗಿ 60 ವರ್ಷ ದಾಟಿದವರು ರೋಗ ಲಕ್ಷಣ ಕಂಡು ಬರುವವರಿಗೆ ರ್ಯಾಟ್‌ ಮೂಲಕ ಕೋವಿಡ್‌ ಪರೀಕ್ಷೆ ನಡೆಸಬೇಕು ಎಂದರು.

ಪರೀಕ್ಷೆಗಳ ಸಂಖ್ಯೆಹೆಚ್ಚಿಸಿ: ಕೋವಿಡ್‌ ಮುಂಜಾಗ್ರತಾ ಪಾಲನೆಗಾಗಿ ಆರೋಗ್ಯ ಇಲಾಖೆ ಇನ್ನಷ್ಟು ಸುಧಾರಣಾ ಕ್ರಮ ಅನುಸರಿಸಬೇಕು. ಈಗಾಗಲೇ ಹನೂರು ತಾಲೂಕಿನ ಟಿಬೆಟಿಯನ್‌ ಸೆಟ್ಲಮೆಂಟ್‌ ಪ್ರದೇಶದಲ್ಲಿ ಕೋವಿಡ್‌ ಸೋಂಕು ಪ್ರಕರಣ ವ್ಯಾಪಿಸದಂತೆ ತಡೆ
ಯಲು ಕಂಟೈನ್ಮೆಂಟ್‌ ವಲಯವನ್ನಾಗಿ ಘೋಷಿಸಲಾಗಿದೆ. ಈ ಪ್ರದೇಶದಿಂದ ಹೊರಗೆ ಹಾಗೂ ಒಳಗೆ ಪ್ರವೇಶಿಸದಂತೆ ಕಟ್ಟುನಿಟ್ಟಿನ  ಕ್ರಮ ಮುಂದುವರೆಸಬೇಕು. ವರದಿಯಾಗಿರುವ ಈ ಪ್ರದೇಶದಲ್ಲಿ ಕೋವಿಡ್‌ ಪರೀಕ್ಷೆಗಳ ಸಂಖ್ಯೆ ಹೆಚ್ಚಳ ಮಾಡುವಂತೆ ಸೂಚನೆ ನೀಡಿದರು. ಬೇಡಗುಳಿ ಎಸ್ಟೇಟ್‌ ಭಾಗದಲ್ಲಿಯೂ ಇತ್ತೀಚೆಗೆ ವರದಿಯಾಗಿರುವ ಕೋವಿಡ್‌ ಸೋಂಕು ಪ್ರಕರಣ ಹರಡದಂತೆ ಸ್ಥಳೀಯವಾಗಿ ಕಂಟೈನ್ಮೆಂಟ್‌ ವಲಯ ನಿರ್ಮಿಸಿ ಅಲ್ಲಿಯೇ ಸೋಂಕಿತರಿಗೆ ಆರೈಕೆ, ಔಷಧೋ ಪಚಾರಗಳಿಗೆ ಅವಶ್ಯಕ ಕ್ರಮಕೈಗೊಳ್ಳಬೇಕು ಎಂದರು.

Advertisement

ಸಂಪರ್ಕಿತರ ಪತ್ತೆ ಕೈಗೊಳ್ಳಿ: ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಕೋವಿಡ್‌ ಪರೀಕ್ಷೆ, ಕಣ್ಗಾವಲು, ಲಸಿಕೆ ನೀಡುವ ಕಾರ್ಯ ತೀವ್ರವಾಗಿ ನಡೆಸಬೇಕು. ಸಂಪರ್ಕಿತರ ಪತ್ತೆ ಕಾರ್ಯ ನಿರ್ವಹಿಸಬೇಕು. ನಗರ, ಪಟ್ಟಣ ಪ್ರದೇಶಗಳಲ್ಲಿ ಮಾಸ್ಕ್ ಧರಿಸದೇ ಇರುವವರ ವಿರುದ್ಧ ದಂಡ ವಿಧಿಸಬೇಕು. ಜಾಗೃತಿ ಕಾರ್ಯ ಆಗಬೇಕು. ಪ್ರತೀ ತಾಲೂಕಿನಲ್ಲಿಯೂ ತಲಾ ಒಂದು ಕೋವಿಡ್‌ ಕೇಂದ್ರ ಆರಂಭಿಸಲು ಸಿದ್ಧತೆಕೈಗೊಳ್ಳಬೇಕೆಂದರು.

ಇದನ್ನೂ ಓದಿ:ಮಾಸ್ಕ್ ಇಲ್ಲದೆ ಏನು ಆಡಳಿತ ಮಾಡ್ತೀರಾ? ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಮುಖ್ಯಮಂತ್ರಿ ತರಾಟೆ

ಗಡಿಭಾಗದ ಗ್ರಾಮಗಳಲ್ಲಿ ಈಗಾಗಲೇ ಆರಂಭಿಸಿರುವ ಲಸಿಕೆ ನೀಡುವ ಕಾರ್ಯವನ್ನು ಇನ್ನಷ್ಟು ವೇಗಗೊಳಿಸಿ ಈ ತಿಂಗಳ 15ರೊಳಗೆ ಗಡಿಭಾಗಕ್ಕೆ ಹೊಂದಿಕೊಂಡಿರುವ ಎಲ್ಲಾ 170 ಗ್ರಾಮಗಳ ಜನರಿಗೆ ಶೇ.100 ಲಸಿಕೆ ನೀಡುವ ಗುರಿ ಪೂರ್ಣಗೊಳಿಸಬೇಕು
ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಕಾತ್ಯಾಯಿನಿ ದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ.ಎಸ್‌. ಸುಂದರ್‌ ರಾಜ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಸಿ.ರವಿ, ಜಿಲ್ಲಾ ಸರ್ವೆಲೆನ್ಸ್‌ ಅಧಿಕಾರಿ ಡಾ.ನಾಗರಾಜು, ಆರ್‌ಸಿಎಚ್‌ ಅಧಿಕಾರಿ ಡಾ.ವಿಶ್ವೇಶ್ವರಯ್ಯ, ಜಿಲ್ಲಾ ಆಸ್ಪತ್ರೆ ನೋಡಲ್‌ ಅಧಿಕಾರಿ ಡಾ.ಮಹೇಶ್‌, ತಹಶೀಲ್ದಾರ್‌ ಚಿದಾನಂದ ಗುರು ಸ್ವಾಮಿ, ಲೋಕೋಪಯೋಗಿ ಇಲಾಖೆ ಕಾರ್ಯ ಪಾಲಕ ಎಂಜಿನಿಯರ್‌ ವಿನಯ್‌ಕುಮಾರ್‌, ಪ್ರಾದೇಶಿಕ ಸಾರಿಗೆ ಅಧಿಕಾರಿ ಶಿವಕುಮಾರ್‌, ಇತರೆ ಇಲಾಖೆಗಳ ಅಧಿಕಾರಿಗಳು ಇದ್ದರು

ನಿಯಮ ಕಟ್ಟುನಿಟ್ಟಾಗಿ ಪಾಲನೆ ಮಾಡಿ
ಕೆಎಸ್‌ಆರ್‌ಟಿಸಿ, ಖಾಸಗಿ ಬಸ್‌ಗಳಲ್ಲಿ ನಿಗದಿಪಡಿಸಿದ ಆಸನ ಸಾಮರ್ಥ್ಯಕ್ಕಿಂತ ಹೆಚ್ಚು ಪ್ರಯಾಣಿಕರಿಗೆ ಪ್ರಯಾಣಿಸಲು ಅನುಮತಿಸುವಂತಿಲ್ಲ.ಕೆಎಸ್‌ಆರ್‌ಟಿಸಿ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು ಈ ಕುರಿತು ತಪಾಸಿಸಬೇಕು. ಬಸ್‌ನಲ್ಲಿಕೋವಿಡ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿಯೊಬ್ಬರೂ ಮಾಸ್ಕ್ ಧರಿಸಿದ್ದಾರೆಯೇ ಎಂಬ ಬಗ್ಗೆ ಬಸ್ಸಿನ ನಿರ್ವಾಹಕರು ಪರಿಶೀಲಿಸಬೇಕು. ಸ್ಯಾನಿಟೈಜೇಷನ್‌ ಇನ್ನಿತರ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ರವಿ ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next