Advertisement
ಕಾಸರಗೋಡು ತಾಲೂಕಿನ ಬೇಕಲ ಅಂಚೆ, ತಿರುವಕೋಳಿ ಎಂಬಲ್ಲಿನ ನಿವಾಸಿ ವಿವೇಕ್ ಬೇಕಲ್ (42) ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಚೀಫ್ ಜ್ಯುಡಿಶಿಯಲ್ ಫಸ್ಟ್ ಕ್ಲಾಸ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದ್ವಿತೀಯ ದರ್ಜೆ ಕ್ಲಾರ್ಕ್ ಆಗಿ ಕೆಲಸ ನಿರ್ವಹಿಸುತ್ತಿರುವ ರಾಜೇಂದ್ರ ಪ್ರಸಾದ್ ಎನ್ನುವವರ ಪತ್ನಿ ಸುರೇಖಾ ಗುಣಗಿ ಎಂಬವರಿಗೆ ಪರಿಚಯದ ನೆಲೆಯಲ್ಲಿ ಒಟ್ಟು 12,45,000 ರೂ. ಸಾಲವನ್ನು ವಿವಿಧ ಸಂದರ್ಭಗಳಲ್ಲಿ ನೀಡಿದ್ದರು. ಇದಕ್ಕೆ ಪ್ರತಿಯಾಗಿ 6,20,000 ರೂ. ಮತ್ತು 6,25,000 ರೂ. ಮೌಲ್ಯದ ಎರಡು ಚೆಕ್ ಪಡೆದಿದ್ದರು. ಚೆಕ್‌ಗಳು ಬ್ಯಾಂಕ್‌ನಲ್ಲಿ ಬೌನ್ಸ್ ಆಗಿದ್ದು, ಹಣ ವಾಪಾಸು ನೀಡುವಂತೆ ಲಾಯರ್ ನೋಟಿಸ್ ಕಳುಹಿಸಿದ್ದರೂ ವಾಪಾಸು ನೀಡಿರಲಿಲ್ಲ. ಹಾಗಾಗಿ ಕಾಸರಗೋಡು ಸಿಜೆಎಂ ನ್ಯಾಯಾಲಯದಲ್ಲಿ 2 ಚೆಕ್ ಬೌನ್ಸ್ ಕೇಸ್‌ಗಳನ್ನು ದಾಖಲಿಸಿದ್ದರು.
Related Articles
Advertisement