Advertisement
ಪ್ರತೀ ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವ್ಯಾಪ್ತಿಯಲ್ಲಿರುವ ಶಾಲೆಗಳ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಈಗಾಗಲೇ ಅಪ್‌ಲೋಡ್ ಮಾಡಲಾಗಿದೆ.
ಬೆಂಗಳೂರು: ಖಾಸಗಿ ಅನುದಾನ ರಹಿತ ಶಾಲೆಗಳು ತಾವು ನಿಗದಿಪಡಿಸಿದ ಶುಲ್ಕದ ವಿವರವನ್ನು ಬಹಿರಂಗ ಪಡಿಸಬೇಕು ಮತ್ತು ಕ್ಯಾಪಿಟೇಷನ್ ಶುಲ್ಕ ಪಡೆಯಲು ಅವಕಾಶವಿಲ್ಲ ಎಂದು ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರು ಸುತ್ತೋಲೆ ಹೊರಡಿಸಿದ್ದಾರೆ.
Related Articles
Advertisement
ಸಿಇಟಿಗೆ ಅಂಕ ದಾಖಲಿಸಲು ಮೇ 25ರವರೆಗೆ ಅವಕಾಶಬೆಂಗಳೂರು: ಸಿಬಿಎಸ್‌ಇ, ಸಿಐಎಸ್‌ಸಿಇ, ಐಜಿಸಿಎಸ್‌ಇ ಪಠ್ಯಕ್ರಮ ಸೇರಿದಂತೆ ರಾಜ್ಯ ಪಠ್ಯಕ್ರಮ ಹೊರತು ಪಡಿಸಿ ಮತ್ತಿತ್ತರ ಬೋರ್ಡ್‌ಗಳಲ್ಲಿ ದ್ವಿತೀಯ ಪಿಯು ಅಥವಾ ಟೆನ್ ಪ್ಲಸ್ ಟು ಓದಿರುವ ವಿದ್ಯಾರ್ಥಿಗಳು ತಮ್ಮ ಹನ್ನೆರಡನೇ ತರಗತಿಯ ಅಂಕಗಳನ್ನು ಸಿಇಟಿ ರ್‍ಯಾಂಕಿಂಗ್‌ಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ)ಗೆ ಸಲ್ಲಿಸಲು ಮೇ 25ರ ಸಂಜೆ 5.30ರ ವರೆಗೆ ಸಮಯಾವಕಾಶ ನೀಡಲಾಗಿದೆ. ಈ ಹಿಂದೆ ಮೇ 20ರೊಳಗೆ ಅಂಕ ದಾಖಲಿಸುವಂತೆ ಸೂಚನೆ ನೀಡಲಾಗಿತ್ತು. ಆದರೆ ಇದೀಗ ಗಡುವು ವಿಸ್ತರಿಸಲಾಗಿದೆ. ಮೇ 23 ಸಂಜೆ ನಾಲ್ಕು ಗಂಟೆಯಿಂದ ಮೇ 25ರ ಸಂಜೆ 5.30ರ ವರೆಗೆ ಅಂಕಗಳನ್ನು ಕೆಇಎ ಪೊರ್ಟಲ್‌ನಲ್ಲಿ ದಾಖಲಿಸಬಹುದು ಎಂದು ಕೆಇಎ ಹೇಳಿದೆ.