Advertisement
ಡಿಸಿ, ಸಿಇಒ ಮತು ಎಸ್ಪಿ ಅವರ ತಂಡವು ಮೊದಲು ತಡೋಳಾ ಮತ್ತು ಕಲಕೋರಾ ಬಳಿ ನಿರ್ಮಿಸಿರುವ ಚೆಕ್‌ಪೋಸ್ಟ್‌ಗಳಿಗೆ ಭೇಟಿ ನೀಡಿತು. ಮಾದರಿ ನೀತಿಸಂಹಿತೆ ಉಲ್ಲಂಘನೆ ಬಗ್ಗೆ ಚೆಕ್‌ಪೋಸ್ಟ್‌ಗಳಲ್ಲಿ ಮೂರು ಪಾಳಿಯಲ್ಲಿ ಕಾರ್ಯನಿರತವಾಗಿರುವ ಸ್ಟಾ ಟಿಕ್ ಸರ್ವೆಲನ್ಸ್ ತಂಡದ ಕಾರ್ಯವೈಖರಿ ಪರಿಶೀಲಿಸಿದ
ಜಿಲ್ಲಾಧಿಕಾರಿಗಳು, ಮತದಾರರಿಗೆ ಹಂಚಲು ಲಿಕ್ಕರ್, ಆಯುಧ, ಅಧಿಕ ಪ್ರಮಾಣದಲ್ಲಿ ಹಣ ಒಯ್ಯುವುದನ್ನು ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು. ವಾಹನ ಪರಿಶೀಲನೆ ಮಾಡುವಾಗ ಕಡ್ಡಾಯ ವಿಡಿಯೋ ಮಾಡಬೇಕು. ಪ್ರತಿದಿನ ಕಾರ್ಯಚಟುವಟಿಕೆಗಳ ಬಗ್ಗೆ ಚುನಾವಣಾಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಮತದಾನ
ಪೂರ್ಣವಾಗುವವರೆಗೂ, ಪೂರ್ವಾನುಮತಿಯಿಲ್ಲದೇ ರಜೆ ಮೇಲೆ ತೆರಳದೇ ಕಾಳಜಿ ವಹಿಸಿ ಕೆಲಸ ಮಾಡಬೇಕು ಎಂದು ಸೂಚಿಸಿದರು.
ಒಟ್ಟು 643 ಮತದಾರರು ಇರುವ ಕಲಕೋರಾ ಗ್ರಾಮದ 260ರ ಮತಗಟ್ಟೆ ಮತ್ತು ಬಸವಕಲ್ಯಾಣ ಸಿಟಿನಲ್ಲಿ ಅತೀ ಸೂಕ್ಷ್ಮ ಮತಗಟ್ಟೆ ಎಂದು ಗುರುತಿಸಿರುವ
567 ಮತದಾರರು ಇರುವ ಧರಮಪ್ರಕಾಶ ಗಲ್ಲಿಯ ಮತಗಟ್ಟೆ ಸಂಖ್ಯೆ 89ರಲ್ಲಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯಿಂದ ಪೂರ್ವಭಾವಿ ಸಭೆ ಕೂಡ
ನಡೆಯಿತು.
Related Articles
ಶಾಂತಿಯುತ ಮತದಾನಕ್ಕೆ ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ. ಪ್ರಜಾಪ್ರಭುತ್ವ ಬಲಪಡಿಸಲು ನಾವುಗಳು ತಪ್ಪದೇ ಮತದಾನ ಮಾಡಬೇಕು. ಅರ್ಹ
ಎಲ್ಲರೂ ಮತದಾನ ಮಾಡುವುದು ಸಂವಿಧಾನ ಬದ್ಧ ಕರ್ತವ್ಯವಾಗಿದೆ. ಪ್ರತಿಯೊಬ್ಬರು ತಪ್ಪದೇ ಮತದಾನ ಮಾಡಬೇಕು ಎಂದು ಗ್ರಾಮಸ್ಥರಲ್ಲಿ ವಿನಂತಿಸಿದರು.
Advertisement
ಜಿಪಂ ಸಿಇಒ ಮಾತನಾಡಿ, 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ತಪ್ಪದೇ ಮಾತದಾನ ಮಾಡಬೇಕು. ಮತದಾನ ಮಾಡಲು ಮಹಿಳೆಯರು ಹಿಂಜರಿಯಬಾರದು. ಮತಗಟ್ಟೆಗಳಲ್ಲಿ ಕಲ್ಪಿಸಿರುವ ಅನುಕೂಲತೆಗಳನ್ನು ಬಳಸಿಕೊಂಡು ವಿಕಲಚೇತನರು ಕೂಡ ಮತದಾನ ಮಾಡಬೇಕು ಎಂದು ತಿಳಿಸಿದರು. ಜಿಲ್ಲಾ ಸ್ವೀಪ್ ಸಮಿತಿಯಿಂದ ಮತದಾನದ ಮಹತ್ವ ಮತ್ತು ಮತಯಂತ್ರಗಳ ಬಳಕೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಎಸ್‌ಪಿ ಮಾತನಾಡಿ, ಬಸವಕಲ್ಯಾಣ ಉಪ ಚುನಾವಣೆಯಲ್ಲಿ ಪ್ರತಿಯೊಬ್ಬರು ನಿರ್ಭಿಡೆಯಿಂದ ಮತದಾನ ಮಾಡಲು ಅನುಕೂಲವಾಗುವಂತೆ ಎಲ್ಲ ರೀತಿಯ ಪೊಲೀಸ್ ಬಂದೋಬಸ್ತ್ಗೆ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು. ತಹಶೀಲ್ದಾರ್ ನಾಗಯ್ಯ ಹಿರೇಮಠ, ಚುನಾವಣಾ ಮಾಸ್ಟರ್ ಟ್ರೇನರ್ ಡಾ.ಗೌತಮ ಅರಳಿ ಹಾಗೂ ಇನ್ನಿತರರು ಇದ್ದರು.