Advertisement
ಬ್ರೇಸ್‌ಲೇಟ್ ಹಾಗೂ ಇನ್ನಿತರ ಆ್ಯಕ್ಸೆಸರಿಗಳೊಂದಿಗೆ ಫಿಂಗರ್ ರಿಂಗ್ಸ್ ಕೂಡ ಕೈಗಳ ಸೌಂದರ್ಯವನ್ನು ಹೆಚ್ಚಿಸುವುದರ ಮೂಲಕ ನಿಮ್ಮ ಪರ್ಸನಾಲಿಟಿಗೂ ಮೆರುಗು ನೀಡುತ್ತದೆ. ಬದ್ಧತೆಯ ಸಂಕೇತ ಎಂದು ಕರೆಸಿಕೊಳ್ಳುವ ಉಂಗುರಗಳು ಈಗ ಫ್ಯಾಷನ್ ಲೋಕದಲ್ಲಿ ಗಮನ ಸೆಳೆಯುತ್ತಿದೆ.
ಸಮಯ ನೋಡಲು ಗಡಿಯಾರ ಬಳಕೆಯಾಗುತ್ತಿದ್ದ ಕಾಲ ಬದಲಾಗಿ ಅದೆಷ್ಟೋ ದಶಕಗಳು ಕಳೆಯಿತು. ಈಗೇನಿದ್ದರೂ ವಾಚ್, ಮೊಬೈಲ್ ಹವಾ. ಅದರಲ್ಲೇ ಸಮಯ ನೋಡಿಕೊಂಡು ಜನ ತಮ್ಮ ಕೆಲಸಗಳಲ್ಲಿ ತೊಡಗಿಕೊಳ್ಳುತ್ತಾರೆ. ತಂತ್ರಜ್ಞಾನ, ಆಲೋಚನೆಗಳು ವೇಗವಾಗಿ ಬದಲಾಗುತ್ತಿವೆ. ನಮ್ಮ ಕೆಲಸಗಳನ್ನು ವೇಗವಾಗಿ ಮಾಡಲು ಮಿಷಿನ್‌ಗಳು ಕಾಲಿಟ್ಟಿವೆ. ಸಮಯ ನೋಡಲು ವಾಚ್ ಗಳನ್ನು ಬಳಸುತ್ತಿದ್ದ ಜನರು ಬದಲಾವಣೆ ಬೇಕು ಎಂದು ಹೊಸ ತಂತ್ರಜ್ಞಾನ, ಫ್ಯಾಷನ್‌ಗೆ ಮೊರೆ ಹೋಗುತ್ತಿದ್ದಾರೆ. ಅದಕ್ಕಾಗಿಯೇ ಉಂಗುರದಷ್ಟೇ ಚಿಕ್ಕದಾದ ಗಡಿಯಾರವನ್ನು ಬೆರಳಿಗೆ ಧರಿಸಿಕೊಂಡು ಸಮಯ ನೋಡುತ್ತಿದ್ದಾರೆ. ಅದು ಗಡಿಯಾರ ಎಂದು ತಿಳಿಯದಿರಲು ಉಂಗುರದಂತೆ ಸುಂದರವಾಗಿ ವಿನ್ಯಾಸ ಮಾಡಲಾಗುತ್ತದೆ. ಮೇಲ್ನೋಟಕ್ಕೆ ಅದು ಉಂಗುರದಂತೆ ಭಾಸವಾದರೂ ಅದರೊಳಗೆ ಗಡಿಯಾರ ಇರುತ್ತದೆ ಎಂಬುದು ಯಾರಿಗೂ ತಿಳಿಯುವುದಿಲ್ಲ. ಇದು ಸಮಯ ನೋಡುವ ವಸ್ತುವಿಗಿಂತಲೂ ಹೆಚ್ಚಾಗಿ ಟ್ರೆಂಡಿಯಾಗಿ ಕಾಣುತ್ತದೆ ಎಂಬುದಕ್ಕಾಗಿ ಯುವತಿಯರು, ಮಹಿಳೆಯರು ಫಿಂಗರ್ ರಿಂಗ್ ವಾಚ್‌ಗೆ ಆಕರ್ಷಿತರಾಗುತ್ತಿದ್ದಾರೆ.
Related Articles
ನೋಡಲು ಸುಂದರವಾಗಿ ಕಾಣುವ ಫಿಂಗರ್ ರಿಂಗ್ ವಾಚ್ ದುಬಾರಿ ಇಲ್ಲ. ವಿವಿಧ ಬ್ರ್ಯಾಂಡ್ ಗಳಲ್ಲಿ ಲಭ್ಯವಾಗುವ ವಾಚ್ ಬೆಲೆ 300 ರೂ. ನಿಂದ ಆರಂಭವಾಗುತ್ತದೆ.
Advertisement
ಕಾಲೇಜು ಯುವತಿಯರು ಫಿದಾಫಿಂಗರ್ ರಿಂಗ್ ವಾಚ್‌ಗಳನ್ನು ಹೆಚ್ಚಾಗಿ ಕಾಲೇಜು ಯುವತಿಯರೆ ಬಳಸುತ್ತಿದ್ದು, ತಮಗೆ ಇಷ್ಟವಾಗುವ ಹಾಗೂ ಧರಿಸುವ ಬಟ್ಟೆಗಳಿಗೆ ಒಪ್ಪುವ ಬಣ್ಣದ ರಿಂಗ್‌ಗಳನ್ನು ಧರಿಸಿ ಮಿಂಚುತ್ತಿದ್ದಾರೆ. ಈಗಾಗಲೇ ದೊಡ್ಡ ಗಾತ್ರದ ರಿಂಗ್ ಧರಿಸುವುದು ಟ್ರೆಂಡ್ ಆಗಿರುವುದರಿಂದ ಈ ರಿಂಗ್ ವಾಚ್ ದೊಡ್ಡ ವಿಷಯವಾಗುವುದಿಲ್ಲ. ಆದರೆ ವಾಚ್, ರಿಂಗ್ ಬೇರೆ ಬೇರೆಯಾಗಿ ಧರಿಸಲು ಹಿಂದೆ ಮುಂದೆ ನೋಡುವ ಯುವತಿಯರು ಈಗ ರಿಂಗ್ ವಾಚ್ ಮೂಲಕ ಸುಲಭ ದಾರಿ ಕಂಡುಹಿಡಿದಿದ್ದಾರೆ. ಪ್ರಜ್ಞಾ ಶೆಟ್ಟಿ