Advertisement

ಗ್ರಾಪಂ ಸಭೆಗೆ ಬರುವವರಿಗೆ ಆಲ್ಕೋಹಾಲ್‌ ಪರೀಕ್ಷಿಸಿ!

09:37 PM Jul 10, 2021 | Team Udayavani |

ಗದಗ: ಗ್ರಾಪಂ ಮಟ್ಟದಲ್ಲಿ ವಿವಿಧ ಕಾರಣಗಳಿಂದಾಗಿ ಸಭೆಗಳಲ್ಲಿ ಗದ್ದಲ, ವಾಗ್ವಾದ ನಡೆದು ಸಭೆ ಮುಂದೂಡಿಕೆಯಾಗುವುದು ಸಹಜ. ಇನ್ನೂ ಕೆಲವೊಮ್ಮೆ ಪಾನಮತ್ತರಾಗಿ ಬರುವ ಸದಸ್ಯರಿಂದಾಗಿ ರಗಳೆಯಾಗಿ ಕಲಾಪಕ್ಕೆ ಅಡ್ಡಿಯಾಗುವುದನ್ನೂ ಅಲ್ಲಗೆಳೆಯುವಂತಿಲ್ಲ. ಅಂತಹ ವರ್ತನೆಗಳಿಗೆ ಕಡಿವಾಣ ಹಾಕುವಂತೆ ವ್ಯಕ್ತಿಯೊಬ್ಬರು ಜಿಪಂ ಮೊರೆ ಹೋಗುವ ಮೂಲಕ ಗಮನ ಸೆಳೆದಿದ್ದಾರೆ.

Advertisement

ತಾಲೂಕಿನ ಲಕ್ಕುಂಡಿ ಗ್ರಾಮದ ಉಸ್ಮಾನ್‌ಅಲಿ ಜಂದೀಸಾಬ ನಮಾಜಿ ಎಂಬುವರು ಶುಕ್ರವಾರ ಗದಗ ತಾಪಂ ಇಒ ಹಾಗೂ ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿ, ತಾಲೂಕಿನ ಲಕ್ಕುಂಡಿ ಗ್ರಾಪಂನಲ್ಲಿ ಭಾಗಶಃ ಮಹಿಳಾ ಸದಸ್ಯರಿದ್ದಾರೆ. ಕೆಲವೊಮ್ಮೆ ಗ್ರಾಪಂ ಸಭೆಗಳಿಗೆ ಕೆಲ ಚುನಾಯಿತ ಸದಸ್ಯರು, ಸಿಬ್ಬಂದಿಗಳೂ ಪಾನಮತ್ತರಾಗಿ ಬರುತ್ತಾರೆ ಎಂದು ಆರೋಪಿಸಿದ್ದಾರೆ.

ಇದರಿಂದ ಸಭೆಯ ಕಾರ್ಯ ಕಲಾಪಗಳಿಗೆ ಅಡ್ಡಿಯಾಗುತ್ತಿದೆ. ಸಭೆಯಲ್ಲಿ ವಿಷಯಗಳು ಶಾಂತಿಯುತ ಚರ್ಚೆಗೆ ಅಡ್ಡಿಯಾಗುತ್ತಾರೆ. ಪರಿಣಾಮ ಗ್ರಾಪಂ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳು ಪರಿಪೂರ್ಣವಾಗಿ ಚರ್ಚೆ ಮತ್ತು ನಿರ್ಣಯಗಳಾಗದೇ, ಕೆಲವೊಮ್ಮೆ ಸಭೆ ಮುಂದೂಡಲಾಗಿದೆ ಎಂದು ದೂರಿದ್ದಾರೆ.

ಮದ್ಯವ್ಯಸನಿಗಳ ಅನುಚಿತ ವರ್ತನೆಯಿಂದ ಮಹಿಳಾ ಸದಸ್ಯೆಯರಿಗೆ ಸಭೆಯಲ್ಲಿ ಕೂರಲು ಮುಜುಗರವಾಗುತ್ತದೆ. ಈ ಹಿನ್ನೆಲೆಯಲ್ಲಿ ಲಕ್ಕುಂಡಿ ಗ್ರಾಪಂ ಸಭೆಯಲ್ಲಿ ಮದ್ಯವ್ಯಸನಿಗಳ ಉಪಟಳ ತಡೆಗೆ ಆಲ್ಕೋಹಾಲ್‌ ಬ್ರಿತ್‌ ಟೆಸ್ಟ್‌ ಉಪಕರಣ ಅಳವಡಿಸಬೇಕು. ಸಭೆಗೆ ಪಾನಮತ್ತರಾಗಿ ಬರುವ ಸದಸ್ಯರು ಮತ್ತು ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಉಸ್ಮಾನ್‌ಅಲಿ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next