Advertisement
ನೀತಾ ಅಂಬಾನಿ ಅವರು ಪ್ರಸಿದ್ಧ ಜವಳಿ ಮಳಿಗೆ ಹೌಸ್ ಆಫ್ ಅಂಗಡಿಗೆ ಭೇಟಿ ನೀಡಿದ್ದರು. ಇದು ಸೊಗಸಾದ ಕೈಮಗ್ಗ ಸೀರೆಗಳು, ಪ್ರೀಮಿಯಂ ಜವಳಿ ಹಾಗೂ ಕ್ಯುರೇಟೆಡ್ ಸಾಂಪ್ರದಾಯಿಕ ಉಡುಪುಗಳಿಗೆ ಹೆಸರುವಾಸಿಯಾಗಿದೆ.
Related Articles
Advertisement
ಹೌಸ್ ಆಫ್ ಅಂಗಡಿ ಸುದೀರ್ಘ 600 ವರ್ಷಗಳ ಪರಂಪರೆಯನ್ನು ಹೊಂದಿದ್ದು, ಇದು ಜವಳಿ ಕ್ಷೇತ್ರದ ಶ್ರೇಷ್ಠತೆಯ ಚಿಹ್ನೆಯಾಗಿ ಗುರುತಿಸಲ್ಪಟ್ಟಿದೆ. 2018ರಲ್ಲಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ತನ್ನ ವಿವಾಹ ಸಂದರ್ಭದಲ್ಲಿ ಹೌಸ್ ಆಫ್ ಅಂಗಡಿಯಲ್ಲಿ ಖರೀದಿಸಿದ್ದ ವಸ್ತ್ರದ ವಿನ್ಯಾಸಗಳಿಂದ ಈ ಮಳಿಗೆ ಎಲ್ಲರ ಗಮನಸೆಳೆಯಲ್ಪಟ್ಟಿತ್ತು. ನಂತರ ಬೆಂಗಳೂರಿನಲ್ಲಿ ನಡೆದ ಆರತಕ್ಷತೆ ಕಾರ್ಯಕ್ರಮದಲ್ಲೂ ದೀಪಿಕಾ ಹೌಸ್ ಆಫ್ ಅಂಗಡಿಯ ಸೀರೆಯಲ್ಲಿ ಮಿಂಚಿ ಎಲ್ಲರ ಗಮನ ಸೆಳೆದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ.
ಅವಿಸ್ಮರಣೀಯ ಭೇಟಿ:
ನೀತಾ ಅಂಬಾನಿ ಅವರು ಹೌಸ್ ಆಫ್ ಅಂಗಡಿಗೆ ಭೇಟಿ ನೀಡಿದ ನಂತರ ತಮ್ಮ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ, ಕೆ.ರಾಧಾರಾಮನ್ ಅವರು ಫೋಟೊವನ್ನು ಶೇರ್ ಮಾಡಿ, ಇದೊಂದು ಅವಿಸ್ಮರಣೀಯ ಭೇಟಿಯಾಗಿದೆ ಎಂದು ತಿಳಿಸಿ ಕೃತಜ್ಞತೆ ಸಲ್ಲಿಸಿದ್ದು. ಬಳಿಕ “ನಿಮ್ಮ ಪ್ರೀತಿ ಮತ್ತು ಪ್ರೋತ್ಸಾಹಕ್ಕಾಗಿ ಶ್ರೀಮತಿ ನೀತಾ ಅಂಬಾನಿ ಅವರಿಗೆ ಧನ್ಯವಾದಗಳು ಎಂದು ಪ್ರತಿಕ್ರಿಯಿಸಿದೆ.
ಅಲ್ಲದೇ ಹೌಸ್ ಆಫ್ ಅಂಗಡಿಯ ವಿಸಿಟರ್ಸ್ ಬುಕ್ ನಲ್ಲಿ ನೀತಾ ಅಂಬಾನಿ ಕೈಬರಹದ ಸಂದೇಶವನ್ನು ಆನ್ ಲೈನ್ ನಲ್ಲಿ ಹಂಚಿಕೊಂಡಿದೆ. ಇದೊಂದು ಭಾರತೀಯ ಪರಂಪರೆಯ ಸುಂದರವಾದ ಅನುಭವ ಪಡೆದಂತಾಗಿದೆ. ಸಾಂಪ್ರದಾಯಿಕ ಸಂಪ್ರದಾಯ ಸಂರಕ್ಷಿಸುವ ಬ್ರ್ಯಾಂಡ್ ನ ಕಾಳಜಿಯನ್ನು ಹೌಸ್ ಆಫ್ ಅಂಗಡಿ ಪ್ರತಿಬಿಂಬಿಸಿದೆ ಎಂದು ನೀತಾ ಶಹಬ್ಬಾಸ್ ಗಿರಿ ನೀಡಿದ್ದರು.