ಒಂದೆರಡು ವರ್ಷದ ಹಿಂದೆ ನಾನೂ ಒಂದೆರಡಸಲ ನಮ್ಮ ಗೆಳೆಯನಿಗೆ ಕನ್ಯಾ ನೋಡಾಕ ಹೋಗಿದ್ದೆ. ನಾವು ಕನ್ಯಾ ಇರೋ ಮನಿಗೆ ಹೋಗೋದೆ ತಡ ಮನೆಯವರಿಗೆಲ್ಲ ಸಂಭ್ರಮವೋ ಸಂಭ್ರಮ.ಅಕ್ಕಪಕ್ಕದ ಮನೆಯವರೂ ಅವತ್ತು ಕೆಲಸಕ್ಕ ರಜೆ ಹಾಕಿ ನಮ್ಮನ್ನ ನೋಡಾಕ ಕಾಯೊRಂತ ಕುಂತಿದ್ರು. ನಾವು ಹೋಗುತ್ತಿದ್ದಂತೆ ಕೈಕಾಲ ತೊಳಿಯಾಕ ನೀರ ಕೊಟ್ರಾ. ನಮ್ಮ ಪ್ರಯಾಣ, ಆರೋಗ್ಯ ಇತ್ಯಾದಿ ವಿಚಾರಿಸಿದ್ರು.
ಅವ್ರು ಕೊಡೋ ಗೌರವ ನೋಡಿದ್ರೆ ನಾವು ಯಾವ ಮಿನಿಸ್ಟರ್‌ಗೂ ಕಡಿಮೆ ಇಲ್ಲ ಅನ್ನಿಸಿ ಒಳಗೊಳಗೆ ಖುಷಿ ಆಗತಿತ್ತು. ನಮ್ಮ ಗೆಳೆಯನದು ವಿಶೇಷವಾದ ಉಡುಪು, ಗಾಂಭೀರ್ಯ. ನಾವೆಲ್ಲಾ ಪದೇಪದೆ ಅವನನ್ನ ಕಿಚಾಯಿಸೋದು ನೋಡಿದ ಅವರಿಗೆ ಅವನೇ ನಮ್ಮ ಹುಡುಗಿ ನೋಡಾಕ್ ಬಂದಿರೊ ವರಅಂಥಾ ಕನ್‌ಫರ್ಮ್ ಆಯ್ತು. ಅವಾಗ ಶುರುವಾಯ್ತು ವರನ ಪೀಕಲಾಟ. ರೆಪ್ಪೆ ಬಡಿಯದೆ ಎಲ್ಲರೂ ಅವನನ್ನೇ ನೋಡತಿದ್ರೆ, ಅವ ನಾಚೊRಂಡು ತಲೆ ತಗ್ಗಿಸಿದ.
ಅಷ್ಟರಲ್ಲೇ “ಕರಿರೆವ್ವಾ ಹೆಣ್ ಮಗಳ್ನ’ ಅಂತ ಕುಂತವರಲ್ಲೇ ಒಬ್ರು ಅಂದ್ರು. ಒಂದ್ ಕ್ಷಣ ಎಲ್ಲರೂ ಶಾಂತ! ಹೆಣ್ ಮಗಳು ಬಣ್ಣದ ಸೀರೆ ಉಟ್ಕೊಂಡು, ಹಸಿರು ಗಾಜಿನ ಬಳೆ, ಕೊರಳ ತುಂಬಾ ಬಂಗಾರದ ಆಭರಣ ತೊಟ್ಟು, ತಲೆ ತುಂಬಾ ಸೆರಗು ಹೊದ್ದುಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ ಬಂದು ಎಲ್ಲರಿಗೂ ಚಾ ಕೊಟ್ಟು ಅಲ್ಲೇ ಚಾಪೆ ಮೇಲೆ ಕುಂತಗೊಂಡು. ಎಲ್ಲರೂ ಅವಳನ್ನೇ ನೋಡುತ್ತಿರುವಾಗ,
“ಮಾತಾಡಸ್ರಿà ಮೂಕಿ ಆಗಿದ್ರೆ?’ ಅನ್ನೋ ಹುಡುಗಿ ಮನೆಯವರ ಪ್ರಾಮಾಣಿಕವಾದ ಮಾತು ಕೇಳಿ ಖುಷಿಯಾಯ್ತು. ಹಂಗದಿದ್ದೇ ತಡ; ನಮ್ಮ ಜೊತೆ ಬಂದ ದೇವಪ್ಪ ಅನ್ನೋ ಹಿರಿಯ ಮನುಷ ಒಂದಾದ ಮೇಲೊಂದರಂತೆ ಬಾಣ ಬಿಟ್ಟಂಗ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳಿದ್ದೇ ಕೇಳಿದ್ದು! ಹಂಗೂ ಹಿಂಗೂ ಹುಡುಗಿ ಉತ್ತರಿಸಿ ನಿಟ್ಟುಸಿರು ಬಿಟುÛ. ಐದು ಜನ ಸಂದರ್ಶಕರಿರುವ ಐಎಎಸ್, ಐಪಿಎಸ್ ಪರೀಕ್ಷೆ ಪಾಸ್ ಮಾಡುವುದೇ ಕಷ್ಟವಿರುವಾಗ ನೆರೆದ ಅಷ್ಟು ಮಂದಿಗೂ ತಡವರಿಸದೆ ಉತ್ತರಿಸಿ ವಧುಪರೀಕ್ಷೆಗಳಲ್ಲಿ ಗೆಲ್ಲುವ ನಮ್ಮ ಹೆಣ್ಮಕ್ಕಳು ಜಾಣ್ಮೆಯಲ್ಲಿ ಒಂದ ಕೈ ಮೇಲೇ.
* ಮಾಳಿಂಗರಾಯ ಗುರಿಕಾರ