Advertisement
ತ್ಯಾಗರಾಜನಗರ ನಿವಾಸಿ, ನಿವೃತ್ತ ಸರ್ಕಾರಿ ನೌಕರ ಜಿ.ಎಸ್.ಶ್ರೀಪಾದ, ಆತನ ಪುತ್ರ ಆನಂದ್‌ತೀರ್ಥ ಮತ್ತು ಖಾಸಗಿ ಕಂಪನಿ ಉದ್ಯೋಗಿ ಹರೀಶ್, ರೌಡಿಶೀಟರ್‌ಗಳಾದ ಪ್ರಶಾಂತ್, ಪ್ರತಾಪ್, ವೆಂಕಟೇಶ್ ಬಂಧಿತರು. ಪ್ರಕರಣದ ಪ್ರಮುಖ ಆರೋಪಿ ರೌಡಿಶೀಟರ್ ನವೀನ್ ಹಾಗೂ ಆತನ ಸಹಚರ ರಾಜೇಶ್ ಶೆಟ್ಟಿ ತಲೆಮರೆಸಿಕೊಂಡಿದ್ದು, ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.
Related Articles
Advertisement
ಜೈಲಿನಿಂದ ಹೊರಹೋಗುತ್ತಿದ್ದಂತೆ ಕೊರಿಯರ್ ಬಾಯ್‌ಗಳು ಕೊಂಡೊಯ್ಯುವ ಚೆಕ್‌ಗಳನ್ನು ತನಗೆ ತಂದು ಕೊಟ್ಟರೆ, ಅವುಗಳನ್ನು ರಾಸಾಯನಿಕ ವಸ್ತು ಬಳಸಿ ಮೊತ್ತ, ದಿನಾಂಕ ಬದಲಿಸಿಕೊಡುತ್ತೇನೆ. ಚೆಕ್‌ಗಳನ್ನು ಬ್ಯಾಂಕ್‌ಗೆ ಹಾಕಿ ನಗದು ಪಡೆಯಬಹುದು ಎಂದು ಸಂಚಿನ ಬಗ್ಗೆ ವಿವರಣೆ ನೀಡಿದ್ದ. ಆದರೆ, ಅವುಗಳನ್ನು ನಗದು ರೂಪಕ್ಕೆ ಬದಲಾಯಿಸುವ ಹೊಣೆ ನಿಮ್ಮದು ಎಂದು ನವೀನ್ ಹೇಳಿದ್ದ.
ಮತ್ತೂಂದೆಡೆ ಈ ಮೊದಲು ಬ್ಯಾಂಕ್‌ಗಳಿಂದ ಸಾಲ ಕೊಡಿಸುವ ಕೆಲಸ ಮಾಡುತ್ತಿದ್ದ ಹರೀಶ್‌ಗೆ, ಕಳವು ಮಾಡುತ್ತಿದ್ದ ಚೆಕ್ ಅನ್ನು ನಗದು ರೂಪಕ್ಕೆ ಬದಲಾಯಿಸಿಕೊಟ್ಟರೆ ಕಮೀಷನ್ ಕೊಡುವುದಾಗಿ ಪ್ರತಾಪ್ ಭರವಸೆ ನೀಡಿದ್ದ. ಒಟ್ಟಾರೆ ಕೃತ್ಯಕ್ಕೆ ಜೈಲಿನಲ್ಲೇ ಕುಳಿತು ಸಂಚು ರೂಪಿಸಿªದ ಆರೋಪಿಗಳು ಪರಪ್ಪನ ಅಗ್ರಹಾರದಿಂದ ಹೊರಬರುತ್ತಿದ್ದಂತೆ ಕೃತ್ಯ ಎಸಗಲು ಆರಂಭಿಸಿದ್ದರು ಎಂದು ಪೊಲೀಸರು ಹೇಳಿದರು.
ಆರೋಪಿಗಳ ಪೈಕಿ ವೆಂಕಟೇಶ್ ಹಾಗೂ ಪ್ರಶಾಂತ್ ಕೆಲ ತಿಂಗಳ ಹಿಂದೆ ತಮಿಳುನಾಡಿನ ಶಾಸ್ತ್ರಿ ಭವನದ ಬಳಿ ಕೊರಿಯರ್ ಮೂಲಕ ಚೆಕ್‌ಗಳನ್ನು ವಿವಿಧ ಕಂಪನಿಗಳಿಗೆ ವಿತರಿಸುವ ಕೆಲಸ ಮಾಡುತ್ತಿದ್ದ ಯುವಕನನ್ನು ಪತ್ತೆಹಚ್ಚಿದ್ದಾರೆ. ಬಳಿಕ ಆತನನ್ನು ಹಿಂಬಾಲಿಸಿಕೊಂಡು ಹೋಗಿ, ಆತ ಕಂಪನಿಯೊಂದಕ್ಕೆ ಚೆಕ್ ವಿತರಣೆ ಮಾಡುವ ಸಂದರ್ಭದಲ್ಲಿ ಯುವಕನ ಗಮನ ಬೇರೆಡೆ ಸಳೆದು ಆತನ ಬ್ಯಾಗ್‌ನಲ್ಲಿದ್ದ ಹತ್ತಾರು ಚೆಕ್‌ಗಳನ್ನು ಕಳ್ಳತನ ಮಾಡಿದ್ದರು. ನಂತರ ನವೀನ್ ಮೂಲಕ ಅಸಲಿ ಚೆಕ್‌ನಲ್ಲಿದ್ದ ಮೊತ್ತವನ್ನು ಬದಲಾಯಿಸಿದ್ದರು.
ಪರಾರಿಯಾಗುವಾಗ ರಸ್ತೆ ಅಪಘಾತ – ಬಂಧನ: ಅನಂತರ ತಮಿಳುನಾಡಿನ ಬ್ಯಾಂಕ್ ಒಂದರಲ್ಲಿ ಆ ಚೆಕ್ ಬಳಸಿ ಹಣ ಡ್ರಾ ಮಾಡಿಕೊಳ್ಳಲು ಮುಂದಾಗಿದ್ದರು. ಆರೋಪಿಗಳು ನೀಡಿದ ಚೆಕ್ ಅನ್ನು ಬ್ಯಾಂಕ್ ಸಿಬ್ಬಂದಿ ಪರಿಶೀಲಿಸಿದಾಗ ನಕಲಿ ಎಂಬುದು ಬೆಳಕಿಗೆ ಬಂದಿತ್ತು. ಕೂಡಲೇ ಮ್ಯಾನೇಜರ್ ಇಬ್ಬರು ಆರೋಪಿಗಳನ್ನು ತಮ್ಮ ಕೊಠಡಿಗೆ ಕರೆದು ಪ್ರಶ್ನಿಸುತ್ತಿದ್ದಾಗ, ತಮ್ಮ ಬಳಿಯಿದ್ದ ಕಾರದ ಪುಡಿಯನ್ನು ಮ್ಯಾನೇಜರ್ ಮುಖಕ್ಕೆ ಎರಚಿ ಪರಾರಿಯಾಗಿದ್ದರು.
ಬೈಕ್‌ನಲ್ಲಿ ಹೋಗುತ್ತಿದ್ದ ಆರೋಪಿಗಳು ತಪ್ಪಿಸಿಕೊಳ್ಳುವ ಭರದಲ್ಲಿ ಸ್ಕೀಡ್ ಆಗಿ ಕೆಳಗೆ ಬಿದ್ದಿದ್ದು, ವೆಂಕಟೇಶ್ ಕೈಗೆ ಗಂಭೀರ ಪೆಟ್ಟಾಗಿತ್ತು. ಕೂಡಲೇ ತಮಿಳುನಾಡಿನ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ವಿಚಾಣೆ ನಡೆಸಿದಾಗ ಸತ್ಯಾಂಶ ಬೆಳಕಿಗೆ ಬಂದಿದೆ. ನಂತರ ಜಾಮೀನು ಪಡೆದು ಹೊರಬಂದ ಆರೋಪಿಗಳು ಬೆಂಗಳೂರಿನಲ್ಲಿ ಅದೇ ರೀತಿಯ ಕೃತ್ಯ ಎಸಗಿ ಸಿಕ್ಕಿ ಬಿದ್ದಿದ್ದಾರೆ ಎಂದು ಪೊಲೀಸರು ಹೇಳಿದರು.
ಮಗನ ತಪ್ಪಿಗೆ ತಂದೆಗೆ ಶಿಕ್ಷೆ: ಪ್ರಕರಣದಲ್ಲಿ ಬಂಧಿತರಾಗಿರುವ ನಿವೃತ್ತ ಸರ್ಕಾರಿ ನೌಕರ ಜಿ.ಎಸ್.ಶ್ರೀಪಾದ ಅವರಿಗೆ ವಂಚನೆ ಜಾಲದ ಬಗ್ಗೆ ಮಾಹಿತಿಯಿಲ್ಲ. ಆದರೆ, ಶ್ರೀಪಾದ ಅವರ ಪುತ್ರ ಆನಂದತೀರ್ಥ, ಆರೋಪಿ ಹರೀಶನ ಸಂಪರ್ಕದಲ್ಲಿದ್ದ. ಆನಂದತೀರ್ಥ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ.
ಈ ವಿಚಾರ ತಿಳಿದಿದ್ದ ಹರೀಶ್, ಆತನಿಗೆ ನಕಲಿ ಚೆಕ್ ಮೂಲಕ ಹಣ ಡ್ರಾ ಮಾಡುವ ಪ್ಲಾನ್ ಬಗ್ಗೆ ತಿಳಿಸಿ, ಹಣದ ಆಮೀಷವೊಡ್ಡಿ ಕೃತ್ಯದಲ್ಲಿ ಭಾಗಿಯಾಗುವಂತೆ ಕೇಳಿಕೊಂಡಿದ್ದ. ಅದರಂತೆ, ಆನಂದ ತೀರ್ಥ, ತನ್ನ ತಂದೆ ಶ್ರೀಪಾದ್ ಅವರಿಗೆ ನಕಲಿ ಚೆಕ್ ನೀಡಿ, ವಿಧಾನಸೌಧ ಶಾಖೆಯ ಎಸ್‌ಬಿಐ ಶಾಖೆಯಿಂದ ಹಣ ಡ್ರಾ ಮಾಡಿಕೊಡುವಂತೆ ಹೇಳಿದ್ದ. ಹಣ ಡ್ರಾ ಮಾಡಿದರೆ ಸ್ನೇಹಿತರೊಬ್ಬರು ಕಮೀಷನ್ ಕೊಡುತ್ತಾರೆ ಎಂದು ತಿಳಿಸಿದ್ದ.
ಪುತ್ರನ ವಂಚನೆ ಜಾಲದ ಬಗ್ಗೆ ಅರಿವಿಲ್ಲದ ಶ್ರೀಪಾದ, 57.750 ರೂ. ಮೊತ್ತವನ್ನು 5.77.500 ಎಂದು ತಿರುಚಲಾಗಿದ್ದ ನಕಲಿ ಚೆಕ್ ಅನ್ನು ಬ್ಯಾಂಕ್‌ಗೆ ಸಲ್ಲಿಸಿದ್ದರು. ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಪರಿಶೀಲಿಸಿದಾಗ ವಂಚನೆ ಬೆಳಕಿಗೆ ಬಂದಿತ್ತು. ಈ ಸಂಬಂಧ ಬ್ಯಾಂಕ್ ಮ್ಯಾನೇಜರ್ ವಿಧಾನಸೌಧ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿದ್ದಾರೆ.