Advertisement

ಬೇಟಿ ಬಚಾವೊ ಬೇಟಿ ಪಡಾವೊ ಹೆಸರಿನಲ್ಲಿ ವಂಚನೆ: ಎಚ್ಚರಿಕೆ

01:38 AM Jul 21, 2019 | Sriram |

ಉಡುಪಿ: ‘ಬೇಟಿ ಬಚಾವೊ ಬೇಟಿ ಪಡಾವೊ’ ಕಾರ್ಯಕ್ರಮದಡಿಯಲ್ಲಿ 2 ಲಕ್ಷ ರೂ. ನಗದು ಉತ್ತೇಜನ ನೀಡುವುದಾಗಿ ಕೆಲವು ಅನಧಿಕೃತ ಸಂಘಟನೆಗಳು/ಸ್ವಯಂ ಸೇವಾ ಸಂಸ್ಥೆಗಳ/ವ್ಯಕ್ತಿಗಳು ಹೆಣ್ಣು ಮಕ್ಕಳ ವೈಯಕ್ತಿಕ ಮಾಹಿತಿಯನ್ನು ನಮೂನೆಯಲ್ಲಿ ಪಡೆದು ವಂಚಿಸುತ್ತಿರುವುದು ಕೇಂದ್ರಸರಕಾರದ ಮಹಿಳಾ ಮತ್ತು ಮಕ್ಕಳಅಭಿವೃದ್ಧಿ ಇಲಾಖೆಯ ಸಚಿವಾಲಯದ ಗಮನಕ್ಕೆ ಬಂದಿದ್ದು, ವಂಚಕರ ವಿರುದ್ಧ ಜಾಗರೂಕರಾಗಿರುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಪ್ರಕಟನೆ ತಿಳಿಸಿದೆ.

Advertisement

ಈ ಯೋಜನೆಯಡಿ ಯಾರಿಗೂ ನಗದು ವಿತರಿಸುವುದಿಲ್ಲ. ಅನಧಿಕೃತ ಸಂಸ್ಥೆಗಳು/ ವ್ಯಕ್ತಿಗಳು ಯೋಜನೆಯಡಿ ಹಣ ನೀಡಿ ಮೋಸಮಾಡುತ್ತಿವೆ. ವಂಚಕರ ವಿರುದ್ಧ ಕ್ರಮತೆಗೆದುಕೊಳ್ಳಲಾಗುವುದು. ಪ್ರಕರಣಗಳು ಬೆಳಕಿಗೆ ಬಂದ ಕಡೆಗಳಲ್ಲಿ ಪೊಲೀಸ್‌ ದೂರು ದಾಖಲಿಸಲಾಗಿದೆ. ವಂಚಕರ ಬಲೆಗೆ ಬೀಳದಂತೆ, ಅವರಿಗೆಯಾವುದೇ ವೈಯಕ್ತಿಕ ದಾಖಲೆಗಳನ್ನುನೀಡದಂತೆ ಸಾರ್ವಜನಿಕರಿಗೆ ಸಲಹೆ/ಸೂಚನೆ ನೀಡಲಾಗಿದೆ. ವಂಚಕ ವ್ಯಕ್ತಿಗಳ/ಸಂಸ್ಥೆಗಳ ಹೆಸರನ್ನು ಠಾಣೆಗೆ ತಿಳಿಸುವಂತೆ ಸೂಚಿಸಲಾಗಿದೆ.

 

Advertisement

Udayavani is now on Telegram. Click here to join our channel and stay updated with the latest news.

Next