Advertisement

ಮೀಟರ್‌ ರೀಡಿಂಗ್‌ನಲ್ಲಿ ಜನರಿಗೆ ಮೋಸ 

04:29 PM Jan 08, 2018 | Team Udayavani |

ಬಂಟ್ವಾಳ: ಮೆಸ್ಕಾಂ ಇಲಾಖೆಗೆ ಸಂಬಂಧಪಟ್ಟಂತೆ ಮೀಟರ್‌ ರೀಡಿಂಗ್‌ ನಲ್ಲಿ ಜನರಿಗೆ ಮೋಸ ಆಗುತ್ತಿದೆ. ಕೆ.ಸಿ. ರಸ್ತೆ-ಅಮ್ಟೂರು ರಸ್ತೆ ಡಾಮರು ಕಾಮಗಾರಿಯು ಕಳಪೆಯಾಗಿದೆ ಎಂಬ ಪ್ರಮುಖ ಆರೋಪಗಳು ಗೋಳ್ತ ಮಜಲು ಗ್ರಾ.ಪಂ. ಗ್ರಾಮಸಭೆಯಲ್ಲಿ ಸಾರ್ವಜನಿಕರಿಂದ ವ್ಯಕ್ತವಾಯಿತು.

Advertisement

ಗ್ರಾ.ಪಂ. ಅಧ್ಯಕ್ಷೆ ಜಯಲಕ್ಷ್ಮೀ ಅಧ್ಯಕ್ಷತೆಯಲ್ಲಿ ಸಭೆ ಜರಗಿತು. ಕೆಲವೊಂದು ಕಾರ್ಯಕ್ರಮಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳನ್ನು ಕಡೆಗಣಿಸಲಾಗುತ್ತಿದೆ. ಎಲ್ಲ ಕಾರ್ಯಕ್ರಮಗಳಲ್ಲಿ ನಮ್ಮನ್ನು ಆಹ್ವಾನಿಸಬೇಕು ಎಂದು ಸದಸ್ಯರಿಂದ ಅಭಿಪ್ರಾಯ ವ್ಯಕ್ತವಾಯಿತು. ಮಾರ್ನಬೈಲ್‌ ಸೇತುವೆ ಬಳಿಯಲ್ಲಿ ರಸ್ತೆ ಅಗಲ ಕಿರಿದಾಗಿದ್ದು, ತೋಡಿಗೆ
ಕುಸಿದು ಬೀಳುವ ಸಂಭವವಿದೆ. ಈ ಬಗ್ಗೆ ತಡೆಗೋಡೆ ರಚನೆಗೆ ಜಿ.ಪಂ. ಎಂಜಿನಿಯರಿಂಗ್‌ ಇಲಾಖೆಗೆ ಬರೆಯಲು ಗ್ರಾಮಸ್ಥರು ಆಗ್ರಹಿಸಿದರು. ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಗೈರಾಗಿರುವ ಬಗ್ಗೆ ಗ್ರಾಮಸ್ಥರಿಂದ ಅಸಮಾಧಾನ ವ್ಯಕ್ತವಾಯಿತು. ಜಿ.ಪಂ. ಸದಸ್ಯೆ ಕಮಲಾಕ್ಷಿ ಕೆ. ಪೂಜಾರಿ, ತಾ.ಪಂ. ಸದಸ್ಯ ಮಹಾಬಲ ಶೆಟ್ಟಿ, ನೋಡಲ್‌ ಅಧಿಕಾರಿ ಹರೀಶ್‌ ಉಪಸ್ಥಿತರಿದ್ದರು. ಪಿಡಿಒ ನಾರಾಯಣ ಗಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next