Advertisement

ಅಗ್ಗದ ಮೊಬೈಲ್‌ ಹೆಸರಲ್ಲಿ ಮೋಸ

10:46 AM Sep 01, 2019 | Team Udayavani |

ಮಡಿಕೇರಿ: ಕಡಿಮೆ ಬೆಲೆಯಲ್ಲಿ ಮೊಬೈಲ್‌ ನೀಡುತ್ತೇವೆ ಎಂದು ವ್ಯಕ್ತಿಯೋರ್ವನನ್ನು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

Advertisement

ಇಲ್ಲಿನ ಒಂದನೇ ಭಾಗದ ನಿವಾಸಿ ಶರವಣ ಅವರ ಮೊಬೈಲಿಗೆ ಅಪರಿಚಿತನೊಬ್ಬ ಕರೆ ಮಾಡಿ, ಬೆಂಗಳೂರಿನಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಲ್ಲದೆ, ಸ್ಯಾಮ್‌ಸಂಗ್‌ ಕಂಪೆನಿಯ 6 ಸಾ. ರೂ. ಬೆಲೆಯ ಮೊಬೈಲನ್ನು 2 ಸಾ. ರೂ.ಗೆ ನೀಡುತ್ತಿದ್ದೇವೆ. ನೀವು ಒಪ್ಪಿದರೆ ವಾರದೊಳಗೆ ಅಂಚೆ ಮೂಲಕ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾನೆ.

ಇದಕ್ಕೊಪ್ಪಿದ ಶರವಣ ಅವರು, ಮೊಬೈಲ್‌ ಕಳುಸಿಕೊಡುವಂತೆ ತಿಳಿಸಿದ್ದಾರೆ. ವಾರದ ಬಳಿಕ ಅಂಚೆ ಕಚೇರಿಗೆ ಪಾರ್ಸಲ್‌ ಬಂದಿದ್ದು, 2 ಸಾ. ರೂ. ಪಾವತಿಸಿ ಪಾರ್ಸೆಲ್‌ ಪಡೆದು ಮನೆಗೆ ಬಂದಿದ್ದಾರೆ. ಪಾರ್ಸೆಲ್‌ ಬಿಚ್ಚಿದಾಗ ಆಘಾತ ಕಾದಿತ್ತು. ಅದರಲ್ಲಿ ಇದ್ದುದು ಅವಧಿ ಮೀರಿದ ತಿಂಡಿ, ತಗಡಿನ ಪಾದುಕೆ, ಆಮೆ ಮತ್ತು ಲಕ್ಷಿ$¾ಯ ಚಿತ್ರ. ತತ್‌ಕ್ಷಣ ಶರವಣ ಹಿಂದಿನ ಸಂಖ್ಯೆಗೆ ಕರೆ ಮಾಡಿದಾಗ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next