Advertisement

ಸದ್ದಿಲ್ಲದೆ ಮರಳಿದ ಚಿಯರ್‌ ಲೀಡರ್ ! ಕೋವಿಡ್‌-19 ಬಳಿಕ ಮಾಯವಾಗಿದ್ದರು

12:50 AM Apr 04, 2023 | Team Udayavani |

ಬೆಂಗಳೂರು: ಐಪಿಎಲ್‌ ಆಕರ್ಷಣೆಗಳಲ್ಲಿ ಚಿಯರ್‌ ಲೀಡರ್ ಪಾತ್ರವೂ ಮಹತ್ವದ್ದಾಗಿದೆ. ಪ್ರತಿಯೊಂದು ತಂಡವೂ ತನ್ನದೇ ಆದ ಚೆಲುವೆಯರ ದಂಡನ್ನು ಹೊಂದಿದೆ. ಬೌಂಡರಿ, ಸಿಕ್ಸರ್‌ ಸಿಡಿದಾಗ, ವಿಕೆಟ್‌ ಬಿದ್ದಾಗ ಸ್ಟೇಜ್‌ ಏರಿ ಕುಣಿದು ಕಿಕ್‌ ಕೊಡುವುದೇ ಇವರ ಕೆಲಸ. ಆದರೆ ಕೋವಿಡ್‌-19 ಬಳಿಕ ಅನೇಕ ನಿರ್ಬಂಧ ಹೇರಲಾದ ಕಾರಣ ಈ ಚಿಯರ್‌ ಲೀಡರ್ ಮಾಯವಾಗಿದ್ದರು.

Advertisement

ಪ್ರಸಕ್ತ ಋತುವಿನ ಮೂಲಕ ಐಪಿಎಲ್‌ ಪಂದ್ಯಗಳು ದೇಶಾದ್ಯಂತ ಪಸರಿಸಿವೆ. ಜತೆಗೆ ಚಿಯರ್‌ ಲೀಡರ್ ಕೂಡ ಮರಳಿ ಪ್ರತ್ಯಕ್ಷರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬಿಸಿಸಿಐ ಅಥವಾ ಐಪಿಎಲ್‌ ಸಂಘಟನ ಸಮಿತಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಪಂದ್ಯಾವಳಿ ಆರಂಭಗೊಂಡು ಇವರೆಲ್ಲ ಹಾರಾಡತೊಡಗಿದಾಗಲೇ ಕ್ರಿಕೆಟ್‌ ಅಭಿಮಾನಿಗಳಿಗೆ ಇದು ತಿಳಿದದ್ದು!

ಆರ್‌ಸಿಬಿ ಸ್ಪೆಷಾಲಿಟಿ
ಈ ನಿಟ್ಟಿನಲ್ಲಿ ಆರ್‌ಸಿಬಿ ವಿಭಿನ್ನ ಪ್ರಯತ್ನ ಮಾಡಿದೆ. ರವಿವಾರದ ಪಂದ್ಯದ ವೇಳೆ ಹಸಿರುಡುಗೆ ತೊಟ್ಟ ಸಂಗೀತಗಾರರ ತಂಡವೊಂದು ತಂಡಕ್ಕೆ “ಚಿಯರ್‌’ ಹೇಳುತ್ತಿದ್ದ ದೃಶ್ಯ ಕಂಡು ಬಂತು.
ಇದು “ಆ್ಯಂಪಿಯರ್‌ ಟೇಕ್‌ ಚಾರ್ಜ್‌ ಸ್ಕ್ವಾಡ್‌’ ಹೆಸರಿನ ತಂಡವಾಗಿತ್ತು. ವಾಹನ ಹಾಗೂ ಇನ್ನಿತರ ಗೃಹೋ ಪಯೋಗಿ ವಸ್ತುಗಳ ಬಿಡಿ ಭಾಗಗಳನ್ನು ಬಳಸಿ ತಯಾರಿಸಲಾದ ಸಂಗೀತ ಉಪಕರಣಗಳನ್ನು ಇವರು ಹೊಂದಿದ್ದರು. ಇವರ ಹಸಿರು ಉಡುಗೆ ಯನ್ನು ಮರುಬಳಕೆಯ ವಸ್ತುಗಳಿಂದ ತಯಾರಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next