Advertisement
ಆ ಕಣ್ಣುಗಳ ಮೂಲಕ ಈಗಲೂ ಮಿಂಚೊಂದು ದಾಟುತ್ತದೆ. ಅದು ಐಕಾನಿಕ್ ಫೋಟೋವೊಂದರ ಕಣ್ಣುಗಳು. ಆ ಚಿತ್ರವುಳ್ಳ ಟಿ ಶರ್ಟುಧಾರಿಗೆ, “ನಿನ್ನ ಎದೆ ಮೇಲೆ ಅಂಟಿಕೊಂಡ ಆ ಫಕೀರ ಯಾರು?’ ಎಂದು ಪ್ರಶ್ನಿಸಿದವರು ಕಡಿಮೆ. ಅವನೊಬ್ಬ ಸಾಮಾಜಿಕ ರೂಪದರ್ಶಿ. ಉದ್ದನೆ ಕೂದಲು ಬಿಟ್ಟ, ನಿಷ್ಠುರ ಕಣ್ಣಿನ ರೆಪ್ಪೆಗಳನ್ನು ತೆರೆದ, ದಟ್ಟ ಗೆರಿಲ್ಲಾ ಗಡ್ಡದ ಮಾಡೆಲ್ಲು. ಗಲ್ಲದ ತನಕ ಜಿಪ್ಪೆಳೆದ ಜಾಕೆಟ್, ಮೇಲೆದ್ದ ಕಾಲರ್- ಆತನ ಸೊಗಸು. ಕೂದಲಿಗೆ ಬಾಚಣಿಗೆ ಮುಟ್ಟಿಸದ ಸುಂದರ ಸೋಮಾರಿ. ದವಡೆಗಳಲ್ಲಿ ದಟ್ಟ ಕೋಪವನು ಸಾಕಿಕೊಂಡ “ದೂರ್ವಾಸ’ನ ದೂತನೋ? ಸಣ್ಣ ಶಂಕೆ! ತಲೆಮೇಲಿನ ರೌಂಡು ಟೋಪಿ, ಒಂದ್ಹತ್ತು ಡಿಗ್ರಿ ಓರೆಯಾಗಿ ಕುಳಿತು, ಕೆಂಪು ನಕ್ಷತ್ರವನ್ನು ಬೀಳದಂತೆ ಹಿಡಿದಿದೆ. ಆತ ಕೊಟ್ಟ ಪೋಸ್‌ನಲ್ಲಿ ಅದೇನೋ ಹೈ ಟೆನÒನ್. ಭುಜದ ದಿಕ್ಕಿಗೂ, ಅವನ ಮೋರೆಯ ದಿಕ್ಕಿಗೂ ಪುಟ್ಟ ವ್ಯತ್ಯಾಸವಿದೆ. ಮರುಕದ ಜತೆಗೆ ಉದ್ಧಟತನ ತುಂಬಿಕೊಂಡ ಆ ಕಣ್ಣುಗಳ ದೃಷ್ಟಿಗೆ ಇಲ್ಲಿಯ ತನಕ ಸಾವು ಬಂದಿಲ್ಲ.
Related Articles
ಅದು ಮಾರ್ಚ್ 4, 1960. ಹವಾನಾದಲ್ಲಿ ಲಂಗರು ಹಾಕಿದ್ದ ಫ್ರೆಂಚ್ ಸ್ಟೀಮರ್ ನೌಕೆ “ಲ ಕ್ಯೂಬರ್’ ಮೇಲೆ ಪ್ರಬಲ ಬಾಂಬ್ ಒಂದು ಸ್ಫೋಟಗೊಂಡಿತು. ಅದು ಅಮೆರಿಕದ ಇಂಟೆಲಿಜೆನ್ಸ್‌ನ ಕೈವಾಡ ಎಂಬ ಶಂಕೆ ಈಗಲೂ ಇದೆ. ಆಗ ಅಲ್ಲಿ 136 ಮಂದಿ ಸಾವನ್ನಪ್ಪಿದ್ದರು. ಹಾಗೆ ಮಡಿದವರನ್ನೆಲ್ಲ ಮರುದಿನ ಒಂದೇ ಜಾಗದಲ್ಲಿ ಸಮಾಧಿ ಮಾಡುವಾಗ, ಕ್ಯೂಬಾದ ಕಮ್ಯುನಿಸ್ಟ್ ಹೋರಾಟಗಾರ ಫಿಡೆಲ್ ಕ್ಯಾಸ್ಟ್ರೋ ಒಂದು ಐತಿಹಾಸಿಕ ಭಾಷಣ ಮಾಡಿದ್ದರು. ಅದಕ್ಕಾಗಿ ಅಲ್ಲೊಂದು ದೊಡ್ಡ ವೇದಿಕೆಯನ್ನೇ ಹಾಕಲಾಗಿತ್ತು. ಕ್ಯಾಸ್ಟ್ರೋ, “ತಾಯ್ನೆಲ ಇಲ್ಲವೇ ಮರಣ’ ಎಂದು ಕರೆಕೊಟ್ಟ ಆ ಐತಿಹಾಸಿಕ ಭಾಷಣದಿಂದ ಅಲ್ಲಿ ಹೋರಾಟದ ಚಿತ್ರಣವೇ ಬದಲಾಗಿತ್ತು. ಕ್ಯಾಸ್ಟ್ರೋ ಭಾಷಣ ಮಾಡಿದ ಅದೇ ವೇದಿಕೆಯ ಹಿಂಬದಿಯಲ್ಲಿ ಚೆ ಗುವಾರ ನಿಂತಿದ್ದರು. ಚೆ ಕಣ್ಣುಗಳು ಏನನ್ನೋ ಹೇಳಲು ಹೊರಟಿದ್ದವು. ಆ ಮುಖದಲ್ಲಿ ಕಂಡ ಕ್ರಾಂತಿಯ ಕಾವ್ಯವನ್ನೇ ಕೋರ್ಡಾ, ಎರಡೇ ಎರಡು ಶಾಟ್‌ಗಳಲ್ಲಿ ಸೆರೆಹಿಡಿದಿದ್ದರು. ಅಂದು ಕೋರ್ಡಾ ಬಳಸಿದ್ದು, ಪ್ಲಸ್- ಎಕ್ಸ್ ಫಿಲ್ಮ್ ರೀಲ್ ಲೋಡ್ ಮಾಡಿದ್ದ, 90 ಎಂಎಂ ಟೆಲಿಫೋಟೋ ಲೆನ್ಸ್ ಅಳವಡಿಸಿದ್ದ, ಲೀಕಾ ಎಂ2 ಕ್ಯಾಮೆರಾವನ್ನ.
Advertisement
ಅವತ್ತು ಕೋರ್ಡಾ, ಒಂದು ವರ್ಟಿಕಲ್ ಮತ್ತೂಂದು ಹಾರಿಝಾಂಟಲ್ ಆಗಿ ಒಟ್ಟು ಎರಡು ಫೋಟೋ ಕ್ಲಿಕ್ಕಿಸಿದ್ದರು. ಒಂದರಲ್ಲಿ ಚೆ ಗುವಾರ ಒಂಟಿಯಾಗಿ ನಿಂತಿದ್ದರೂ, ಯಾರ¨ªೋ ನೆರಳು ಆತನ ಹಿಂಬದಿಯಲ್ಲಿ ಮೂಡಿತ್ತು. ತೊನೆದಾಡುತ್ತಿದ್ದ ತಾಳೆಮರದ ಗರಿಗಳ ನೆರಳೂ ಅವನ ಭುಜದ ಮೇಲೆ ಇಣುಕಿದ್ದವು. ಮತ್ತೂಂದು ಚಿತ್ರದಲ್ಲಿ, ಚೆ ಮುಂಭಾಗದಲ್ಲಿ ಯಾರ¨ªೋ ತಲೆ ಕಾಣಿಸಿಕೊಂಡಿತ್ತು. ಕೋರ್ಡಾ ಇವೆರಡೂ ಚಿತ್ರಗಳನ್ನೂ ತಮ್ಮ ಪತ್ರಿಕೆಯ ಫೋಟೋ ಎಡಿಟರ್ ಮುಂದಿಟ್ಟಿದ್ದರು.
ಆದರೆ, ಇವು ಮುಂದೊಂದು ದಿನ ಜಗತ್ತನ್ನು ಪ್ರಭಾವಿಸುವ, ಯುವ ಮನಸ್ಸುಗಳು ಅಪ್ಪಿಕೊಳ್ಳುವ ಚಿತ್ರಗಳು ಎಂಬುದನ್ನು ಅಂದು ಗುರುತಿಸದೇ ಹೋಯಿತು “ರೆವಲ್ಯೂಶನ್’ ಪತ್ರಿಕೆ. ಅಂತ್ಯಕ್ರಿಯೆ ಸಮಾರಂಭದ ಸಚಿತ್ರ ವರದಿಯಲ್ಲಿ ಫಿಡೆಲ… ಕ್ಯಾಸ್ಟ್ರೋನ ಭಾಷಣಗಳ ಫೋಟೋ ಜೊತೆಗೆ ಇನ್ನಿಬ್ಬರು ಕ್ರಾಂತಿಕಾರಿಗಳಾದ ಸಾಟ್ರೆì ಮತ್ತು ಡಿ ಬ್ಯೂವೊಯೆರ್ ಇದ್ದ ಫೋಟೋಗಳನ್ನಷ್ಟೇ ಹಾಕಿಕೊಂಡಿತ್ತು. ಒಂದು ವರ್ಷದ ಬಳಿಕ ಕೋರ್ಡಾ ಆ ಮೊದಲ ಫೋಟೋವನ್ನು ತಮ್ಮ ಸ್ಟುಡಿಯೋದ ಗೋಡೆಗೆ ನೇತುಹಾಕಿದರು. ಆಪ್ತಸ್ನೇಹಿತರಿಗೆ ನೆಗೇಟಿವ್ ಕಾಪಿಗಳನ್ನು ಮುದ್ರಿಸಿ, ಫ್ರೆಮ… ಹಾಕಿಸಿ, ಗಿಫ್ಟ್ ಕೊಡುತ್ತಿದ್ದರು.
ಎಲ್ಲಿದ್ದೀಯ ಚೆ?ಬೊಲಿವಿಯಾದ ದಂಡಯಾತ್ರೆಯಲ್ಲಿ ಇನ್ನೇನು ಚೆ ಸಾಯುತ್ತಾರೆ ಎನ್ನುವ ಎರಡೇ ಎರಡು ತಿಂಗಳ ಮುಂಚೆ, ಅಂದರೆ 1967ರ ಆಗಸ್ಟ್ ಕೊನೆಯ ವಾರದಲ್ಲಿ ಈ ಫೋಟೋ ಮೊಟ್ಟ ಮೊದಲ ಬಾರಿಗೆ ಪತ್ರಿಕೆಯಲ್ಲಿ ಅಚ್ಚಾಯಿತು. ಭೂಗತನಾಗಿದ್ದ ಈ ಕ್ರಾಂತಿಕಾರನನ್ನು ನೆನಪಿಸಿಕೊಂಡು, “ಪ್ಯಾರಿಸ್ ಮ್ಯಾಚ್’ ಎನ್ನುವ ಫ್ರೆಂಚ್ ಪತ್ರಿಕೆ ಇದೇ ಫೋಟೋ ಬಳಸಿಕೊಂಡು, “ಎಲ್ಲಿದ್ದೀಯ ಚೆ?’ ಎಂಬ ಲೇಖನ ಪ್ರಕಟಿಸಿತ್ತು. ಆದರೆ, ಫೋಟೋ ತೆಗೆದ ಕೋರ್ಡಾಗೆ ಮಾತ್ರ ಆ ಪತ್ರಿಕೆ ಗೌರವಧನವನ್ನೇ ಕೊಡಲಿಲ್ಲ! ಪೇಪರಿನ ಫೋಟೋದಿಂದ ಪ್ಲಕಾರ್ಡುಗಳನ್ನು ಮಾಡಿಕೊಂಡ ಕ್ರಾಂತಿಕಾರರು, ಹವಾನಾ ಮತ್ತು ಬೊಲಿವಿಯಾದ ಬೀದಿಗಳಲ್ಲಿ ಮೆರವಣಿಗೆ ನಡೆಸಿದ್ದರು. ಅಲ್ಲಿಂದಲೇ ಶುರುವಾಗಿದ್ದು, “ಚೆ’ ಫೋಟೋದ ಚೇತೋಹಾರಿ ಯುಗ. ಬೊಲಿವಿಯಾದ ತಗ್ಗುಪ್ರದೇಶ “ಯೂರೋ’ದಲ್ಲಿ ಗುಂಡೇಟು ತಿಂದು, ಮರುದಿನ ಮಡಿದ “ಚೆ’ ಈ ಫೋಟೋದ ಮೂಲಕ ಮತ್ತೆ ಜೀವಪಡೆದರು. ನಂತರದ ದಿನಗಳಲ್ಲಿ ಪ್ಯಾರಿಸ್, ರೋಮ…, ಬೆಲ್‌ಫಾಸ್ಟ್‌ನ ವಿದ್ಯಾರ್ಥಿ ಚಳವಳಿಗಳಿಗೆ “ಚೆ’ನ ಇದೇ ಫೋಟೋ ಫಲಕವಾಯಿತು. ಬರೀ ಪಾಶ್ಚಾತ್ಯ ನಗರಿಗಳೇ ಏಕೆ, ಭಾರತದ ಈಗಿನ ಅದೆಷ್ಟೋ ವಿದ್ಯಾರ್ಥಿ ಚಳವಳಿಗಳಲ್ಲೂ “ಚೆ’ನ ಈ ಫೋಟೋ ಕಾಣಿಸಿಕೊಳ್ಳುತ್ತದೆ. ನೀವು ಒಮ್ಮೆ ದೆಹಲಿಯ ಜವಾಹರಲಾಲ್ ನೆಹರು ವಿವಿಯ (ಜೆಎನ್‌ಯು) ಹಾಸ್ಟೆಲ್ ಕೋಣೆಗಳಿಗೆ ಹೋಗಿಬಂದರೆ, ಅಲ್ಲಿ 10ರಲ್ಲಿ 6 ಮಂದಿಯ ಕೋಣೆಗಳಲ್ಲಿ “ಚೆ’ ಫೋಟೋ ಕಾಣಿಸುತ್ತದೆ. ಥೇಟ್ “ಚೆ’ ರೀತಿಯೇ ಗಡ್ಡಬಿಟ್ಟುಕೊಂಡ ಮಾರ್ಕ್ಸ್ವಾದಿ ಹುಡುಗರು ಅಲ್ಲಿ ಸಿಗುತ್ತಾರೆ. ಆದರೆ, “ಚೆ’ಯನ್ನು ಸಿದ್ಧಾಂತದ ಆಚೆಗೂ ನೋಡುವ ಕಣ್ಣುಗಳಿವೆ. ಮಾರುಕಟ್ಟೆಯ “ಕ್ರಾಂತಿ’!
“ಚೆ’ಯನ್ನೇ ಮುಂದಿಟ್ಟುಕೊಂಡು, ಮಾರುಕಟ್ಟೆಯೂ ಕ್ರಾಂತಿ ಮಾಡುತ್ತದೆ. ನೀವು “ಇಬೇ’ನಲ್ಲಿ “ಚೆ’ ಎಂದು ಟೈಪಿಸಿದರೆ, 26,000 ಫಲಿತಾಂಶಗಳು ತೆರೆದುಕೊಳ್ಳುತ್ತವೆ. ಅಮೇಜಾನ್‌ನಲ್ಲೂ ಈ ಸಂಖ್ಯೆ 10,000 ದಾಟುತ್ತದೆ. ಭಾವುಟದಿಂದ ಐಫೋನ್ ಕೇಸ್‌ವರೆಗೆ, ಸಿಗರೇಟು, ಲೈಟರ್, ಟಿ ಶರ್ಟು, ಟೋಪಿ, ಪದಕ, ಟ್ಯಾಟೂ ಸ್ಟಿಕ್ಕರ್… ಹೀಗೆ ಯುವ ಸಮೂಹ ಯಾವ ಕ್ರೇಜ್‌ಗೆಲ್ಲ ಅಂಟಿಕೊಂಡಿದೆಯೋ, ಅಲ್ಲೆಲ್ಲ “ಚೆ’ ಅಚ್ಚಾಗಿದ್ದಾನೆ. ವಿಶ್ವವನ್ನು “ಚೆ’, ಹೀಗೆ ಬಗೆ ಬಗೆಯಲ್ಲಿ ಮುತ್ತಿಕೊಂಡು 50 ವರುಷವಾಗಿದೆ. ಅವನಿಲ್ಲದ ಈ ಜಗತ್ತಿಗೂ 50 ವರುಷವೇ ಆಗಿದೆ. ಕ್ರಾಂತಿಯ, ಸಿದ್ಧಾಂತದ ಎಲ್ಲೆ ಮೀರಿ, ಅವನ ಹೆಸರೇ ಗೊತ್ತಿಲ್ಲದ ಯುವಕರ ಎದೆಯೊಳಗೂ “ಚೆ’ ಅರಳಿದ್ದಾನೆ. ಈಗಿನ ಪೀಳಿಗೆಯ ಕಣ್ಣಿಗೆ ಆತ ಕೇವಲ ಫ್ಯಾಶನ್ ಐಕಾನ್. ಆ ಫೋಟೋ ನೋಡಿದಾಗ ಅಲ್ಲೊಂದು ಛಲ, ಆತ್ಮನಂಬಿಕೆ ಮಾತ್ರವೇ ಕಾಣಿಸುತ್ತದೆ. ಬದುಕಿಗೆ ಒಂದು ಉದ್ದೇಶವಿದೆ, ಹೋರಾಡಿ ಅದನ್ನು ದಕ್ಕಿಸಿಕೋ ಎಂದು ಆ ಫೋಟೋ ಹೇಳುತ್ತದೆ.ಹಾಗಾಗಿ, ಟಿಶರ್ಟಿನಲ್ಲಿರುವ “ಚೆ’ ಯಾರೆಂದು ಗೊತ್ತೇ ಇಲ್ಲದವನಿಗೂ, ಗುವಾರ ಒಬ್ಬ ಹೀರೋ! ಈ ಕ್ರಾಂತಿಗೆ ಯಾವ ಹೆಸರಿಡೋಣ? – ಕೀರ್ತಿ ಕೋಲ್ಗಾರ್