ಪಿರಿಯಾಪಟ್ಟಣ: ತಾಲ್ಲೂಕಿನ ಹಿಟ್ನೆಹೆಬ್ಬಾಗಿಲು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಧ್ಯಕ್ಷರಾಗಿ ಛಾಯಾ ಮಹದೇವ್ ಅವಿರೋಧವಾಗಿ ಆಯ್ಕೆಯಾದರು.
ಹಿಟ್ನೆಹೆಬ್ಬಾಗಿಲು ಗ್ರಾಪಂ ಆವರಣದಲ್ಲಿ ಸೋಮವಾರ ಅಧ್ಯಕ್ಷೆ ಮೀನಾಕ್ಷಮ್ಮ ಬಸವಣ್ಣನವರ ರಾಜಿನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ನಡೆದು ಎರಡನೆ ಅವಧಿಗೆ ನಡೆದ ಚುನಾವಣೆಯಲ್ಲಿ ಛಾಯಾ ಮಹದೇವ್ ಅವಿರೋಧ ಆಯ್ಕೆಯಾದರು.
ಸಾಮಾನ್ಯ ಮಹಿಳೆಗೆ ಮೀಸಲಿದ್ದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಛಾಯಾ ಮಹದೇವ್ ಮಾತ್ರ ನಾಮಪತ್ರ ಸಲ್ಲಿಸಿದ ಕಾರಣ ಚುನಾವಣಾಧಿಕಾರಿ ದೇವರಾಜೇಗೌಡ ಇವರ ಆಯ್ಕೆಯನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡ ನಿತೀನ್ ವೆಂಕಟೇಶ್ ಮಾತನಾಡಿ ನಮ್ಮ ತಂದೆ ಮಾಜಿ ಶಾಸಕ ಕೆ.ವೆಂಕಟೇಶ್ ಅವರು ತಾಲ್ಲೂಕಿನಲ್ಲಿ ಮಾಡಿರುವ ಅಭಿವೃದ್ದಿ ಕಾರ್ಯ ಮತ್ತು ಅವರ ಮಾರ್ಗದರ್ಶನದ ಫಲವಾಗಿ ಹಿಟ್ನೆಬಾಗಿಲು ಗ್ರಾ.ಪಂ ನಲ್ಲಿ 18 ಸದಸ್ಯ ಸ್ಥಾನಗಳಲ್ಲಿ 16 ಸದಸ್ಯರು ಗೆಲುವು ಸಾಧಿಸಲು ಸಾಧಿಸಿ ಮೊದಲನೆ ಅವಧಿಗೆ ಮೀನಾಕ್ಷಮ್ಮನವರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿತ್ತು ಪಕ್ಷದ ಆಂತರಿಕ ಒಪ್ಪಂದದಂತೆ ಇವರು ರಾಜಿನಾಮೆ ನೀಡಿದ ಕಾರಣ ನಮ್ಮ ಸದಸ್ಯರು ಛಾಯಾ ಮಹದೇವ್ ರವರನ್ನು ಒಮ್ಮತಂದಿಂದ ಒಪ್ಪಿ ಎರಡನೆ ಅವಧಿಗೆ ಅಧ್ಯಕ್ಷರನ್ನಾಗಿ ಮಾಡಿರುವುದು ಸಂತಸದ ವಿಷಯ ಎಂದರು.
ನೂತನ ಗ್ರಾಪಂನ ಅಧ್ಯಕ್ಷೆ ಛಾಯಾ ಮಹದೇವ್ ಮಾತನಾಡಿ ನನ್ನ ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಗ್ರಾಪಂ ಸದಸ್ಯರು, ಮಾಜಿ ಶಾಸಕ ಕೆ.ವೆಂಕಟೇಶ್, ಗ್ರಾಮಸ್ಥರು ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರಿಗೆ ಅಭಿನಂಧನೆಗಳು. ನನ್ನ ಅಧಿಕಾರವಧಿಯಲ್ಲಿ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಕುಡಿಯುವ ನೀರು ರಸ್ತೆ, ಚರಂಡಿ ಬೀದಿದೀಪ ಸೇರಿದಂತೆ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾ.ಪಂ.ಸದಸ್ಯರಾದ ಅನಿಲ್ ಕುಮಾರ್, ಕಾಮರಾಜ್ ಹಾಗೂ ಸೀಗೂರು ವಿಜಯಕುಮಾರ್ ಮಾತನಾಡಿ ಈ ಪಂಚಾಯಿತಿಯಲ್ಲಿ ಸತತವಾಗಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿಯುತ್ತ ಬಂದಿದ್ದು, ಗಾಂಧಿ ಗ್ರಾಮ ಪುರಸ್ಕಾರ ಸೇರಿದಂತೆ ಉತ್ತಮ ಜನಪರ ಆಡಳಿತ ನೀಡಿದರ ಫಲವಾಗಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಬೆಂಬಲಿಗರು ಜಯಗಳಿಸಿದ್ದಾರೆ, ಮಾಜಿ ಶಾಸಕ ಕೆ.ವೆಂಕಟೇಶ್ ಹಾಗೂ ಪಕ್ಷದ ಎಲ್ಲಾ ಜನಪ್ರತಿನಿಧಿಗಳ ಸಹಕಾರದಿಂದ ಉತ್ತಮ ಆಡಳಿತ ನೀಡುವ ಮುಖಾಂತರ ತಾಲ್ಲೂಕಿನಲ್ಲಿ ನಮ್ಮ ಗ್ರಾ.ಪಂ. ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ನಿಟ್ಟಿನಲ್ಲಿ ಉತ್ತಮ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ನಿರ್ಗಮಿತ ಅಧ್ಯಕ್ಷೆ ಮೀನಾಕ್ಷಮ್ಮ ಬಸವಣ್ಣ, ಸದಸ್ಯರಾದ ವನಜಾಕ್ಷಮ್ಮ, ವರನಂದಿ, ಸೌಮ್ಯ, ಯಶೋಧಮ್ಮ, ಕುಮಾರ್, ರವಿಕುಮಾರ್, ಸಾಕಮ್ಮ, ಸರೋಜಾ, ಸುಧಾ, ಪಿಎಲ್.ಡಿ ಬ್ಯಾಂಕ್ ಅಧ್ಯಕ್ಷ ಈಚೂರು ಲೋಕೇಶ್, ಮಾಜಿ ಅಧ್ಯಕ್ಷ ಹಿಟ್ನಳ್ಳಿ ಪರಮೇಶ್, ತಾಪಂ ಮಾಜಿ ಸದಸ್ಯ ಅಣ್ಣಯ್ಯ. ಯೂತ್ ಕಾಂಗ್ರೆಸ್ ನ ಜಿಲ್ಲಾ ಕಾರ್ಯದರ್ಶಿ ಮೊಹದೇಶ್, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಅಧ್ಯಕ್ಷ ಜೆ.ಮೋಹನ್, ಮುಖಂಡರಾದ ಶಿವರುದ್ರ, ಆಯಿತನಹಳ್ಳಿ ಮಹದೇವ್ ಸಾಲುಗೊಪ್ಪಲು ಪುಟ್ಟರಾಜು, ವಿ.ಜಿ.ಕೊಪ್ಪಲು ಲೋಕೇಶ್, ರಾಜಶೇಖರ್, ಆಲನಹಳ್ಳಿ ಕುಮಾರ್, ಶಿವಶಂಕರ್, ಕುಮಾರ್, ಶಂಕರ್, ಮಹೇಶ ಹಾಗೂ ಹಿಟ್ನೆಹೆಬ್ಬಾಗಿಲು ಪಂಚಾಯಿತಿ ವ್ಯಾಪ್ತಿಯ ಕಾಂಗ್ರೆಸ್ ಬೆಂಬಲಿಗರು ಹಾಜರಿದ್ದರು.