ಮಂಗಳೂರು/ಉಡುಪಿ: ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಮುಂಬಯಿ ಲೋಕಮಾನ್ಯ ತಿಲಕ್ ರೈಲು ನಿಲ್ದಾಣದಿಂದ ಮಂಗ ಳೂರು ಜಂಕ್ಷನ್ ನಿಲ್ದಾಣಕ್ಕೆ ಆಗಸ್ಟ್ 16ರಿಂದ ವಿಶೇಷ ಸಾಪ್ತಾಹಿಕ ರೈಲು ಸಂಚಾರ ನಡೆಸಲಿದೆ.
ಲೋಕಮಾನ್ಯ ತಿಲಕ್‌ನಿಂದ ನಂ. 01165 ರೈಲು ಆ. 16, 23, 30 ಮತ್ತು ಸೆ. 6ರಂದು ವಿಶೇಷ ಸಾಪ್ತಾಹಿಕ ರೈಲು ಮಧ್ಯರಾತ್ರಿ 12.45ಕ್ಕೆ ಹೊರಡಲಿದ್ದು ಮರುದಿನ ರಾತ್ರಿ 7.30ಕ್ಕೆ ಮಂಗಳೂರು ಜಂಕ್ಷನ್ ತಲುಪಲಿದೆ.
ನಂ. 01166 ಮಂಗಳೂರು ಜಂಕ್ಷನ್‌ನಿಂದ ಆ. 16, 23, 30 ಹಾಗೂ ಸೆ. 6ರಂದು ರಾತ್ರಿ 10.20ಕ್ಕೆ ಹೊರಡಲಿದ್ದು ಮರುದಿನ ಸಂಜೆ 6.30ಕ್ಕೆ ಲೋಕಮಾನ್ಯ ತಿಲಕ್ ತಲುಪಲಿದೆ.
ಥಾಣೆ, ಪನ್ವೇಲ್, ರೋಹ, ಮಾನ್‌ಗಾಂವ್, ವೀರ್, ಖೇಡ್, ಚಿಪ್ಳೂಣ್, ಸಂಗಮೇಶ್ವರ್ ರೋಡ್, ರತ್ನಾಗಿರಿ, ರಾಜಾಪುರ್ ರೋಡ್, ವೈಭವ್‌ವಾಡಿ ರೋಡ್, ಕಂಕಾವಳಿ, ಸಿಂಧುದುರ್ಗ, ಕುಡಾಲ್, ಸಾವಂತ್‌ವಾಡಿ, ಥಿವಿಂ, ಕರ್ಮೈಲಿ, ಮಡಗಾಂವ್ ಜಂಕ್ಷನ್, ಕಾಣಕೋಣ, ಕಾರವಾರ, ಅಂಕೋಲಾ, ಗೋಕರ್ಣ ರೋಡ್, ಕುಮಟಾ, ಹೊನ್ನಾವರ, ಮುಡೇìಶ್ವರ, ಭಟ್ಕಳ, ಮೂಕಾಂಬಿಕಾ ರೋಡ್ ಬೈಂದೂರು, ಕುಂದಾಪುರ, ಬಾರ್ಕೂರು, ಉಡುಪಿ, ಮೂಲ್ಕಿ ಹಾಗೂ ಸುರತ್ಕಲ್ ನಿಲ್ದಾಣಗಳಲ್ಲಿ ನಿಲುಗಡೆ ಇರುತ್ತದೆ ಎಂದು
ಪ್ರಕಟನೆ ತಿಳಿಸಿದೆ.