ನವದೆಹಲಿ: ಆಧುನಿಕ ಯುಗದಲ್ಲಿ ಪ್ರತಿನಿತ್ಯ ಹೊಸ ಹೊಸ ತಂತ್ರಜ್ಞಾನಗಳು ಅಭಿವೃದ್ಧಿ ಆಗುತ್ತಿದೆ. ಇತ್ತೀಚೆಗೆ ಟ್ರೆಂಡಿಂಗ್ ನಲ್ಲಿರುವ ಚಾಟ್‌ಜಿಪಿಟಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (AI) ಬಗ್ಗೆ ನಿಮಗೆಲ್ಲ ಗೊತ್ತೇ ಇದೆ. ನಾವು ಕೇಳುವ ಪ್ರಶ್ನೆಗಳಿಗೆ ಇದರ ಬಳಿ ಎಲ್ಲದಕ್ಕೂ ಉತ್ತರವಿದೆ. ಕ್ಷಣಾರ್ಧದಲ್ಲಿ ಎಲ್ಲವನ್ನು ಹೇಳುವ ಚಾಟ್ ಜಿಪಿಟಿಯಿಂದ ಎಷ್ಟು ಉಪಯೋಗವಿದೆಯೋ, ಅಷ್ಟೇ ಅಪಾಯವೂ ಇದೆ ಎನ್ನುವುದನ್ನು ಮರೆಯಬಾರದು.
ಇಲ್ಲೊಬ್ಬ ವಿದ್ಯಾರ್ಥಿ ಚಾಟ್ ಜಿಪಿಟಿಯ ಸಹಾಯದಿಂದ ಪರೀಕ್ಷೆಗೆ ತಯಾರಾದ ಬಗ್ಗೆ ಬರೆದುಕೊಂಡಿದ್ದಾನೆ. ರೆಡ್ಡಿಟ್‌ನಲ್ಲಿ ಈ ಬಗ್ಗೆ ವಿಷಯವನ್ನು ಹಂಚಿಕೊಂಡಿದ್ದಾನೆ. ವಿದ್ಯಾರ್ಥಿ, ಎಐ ಚಾಟ್‌ಬಾಟ್‌ನ ಸಹಾಯದಿಂದ, ತನ್ನ ಪರೀಕ್ಷೆಗೆ ಪ್ರಮುಖ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಸ್ವಲ್ಪ ಸಮಯವನ್ನು ತೆಗೆದುಕೊಂಡು,ಆ ವಿಷಯಗಳಿಗೆ ಮಾತ್ರ ತನ್ನ ಸಮಯವನ್ನು ಮೀಸಲಿಟ್ಟು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದ್ದಾನೆ.
ಈಗ ಚಾಟ್‌ಜಿಪಿಟಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದು ನಮಗೆಲ್ಲರಿಗೂ ತಿಳಿದಿದೆ, ಫಲಿತಾಂಶಗಳನ್ನು ಪಡೆಯಲು ನೀವು ಸಾಧ್ಯವಾದಷ್ಟು ಮಾಹಿತಿಯನ್ನು ಅದರೊಳಗೆ ನೀಡಬೇಕಾಗುತ್ತದೆ. ನಾನು ಹಾಗೆಯೇ ಮಾಡಿದೆ. ಮೊದಲು ಪಾಠದ ಎಲ್ಲಾ ವಿಷಯವನ್ನು ಚಾಟ್ ಬಾಟ್ ಗೆ ಹಾಕಿದ್ದೇನೆ. ಆ ಬಳಿಕ ಅದರಲ್ಲಿರುವ ಪ್ರಮುಖ ಪ್ರಶ್ನೆಗಳನ್ನು ಮಾತ್ರ ತಿಳಿಸಿ, ಅದನ್ನು ಸುಲಭವಾಗಿ ವಿಶ್ಲೇಷಿಸಲು ಹೇಳಿದ್ದೇನೆ. ಮೊದಲು ನಾನು ಹಾಕಿದ ಪಠ್ಯದ ವಿಚಾರಗಳು ಉದ್ದವಾಗಿತ್ತು. ಆ ಬಳಿಕ ಅದನ್ನು ಸ್ವಲ್ಪ ಸ್ವಲ್ಪ ಮಾಡಿ ಹಾಕಿದೆ. ಚಾಟ್ ಬಾಟ್ ಇದನ್ನು ಒಂದೊಂದಾಗಿ ವಿಶ್ಲೇಷಿಸಿತ್ತು.
ಮೊದಲ ದಿನ, ಚಾಟ್‌ಬಾಟ್ ಸೆಮಿಸ್ಟರ್‌ನಲ್ಲಿದ್ದ ಪ್ರಮುಖ ಪಾಠ ಪ್ರಶ್ನೆಗಳನ್ನು ಹೈಲೈಟ್ ಮಾಡಿ ಹೇಳಿತು. ಆ ಬಳಿಕ ನಾನು ಪ್ರತಿ ಪಾಠದ ಅಗತ್ಯ ಅಂಶವನ್ನು ಪಟ್ಟಿ ಮಾಡಿ ಕೊಡಲು ಹೇಳಿದೆ. ಇದಾದ ಕೆಲ ಗಂಟೆಗಳು ಉತ್ತರಗಳ ನಿಖರತೆಯನ್ನು ಪರಿಶೀಲಿಸಲು ಹೋಯಿತು ಎಂದಿದ್ದಾರೆ.
ಪರೀಕ್ಷೆಯ ದಿನ ವಿದ್ಯಾರ್ಥಿ ಚಾಟ್ ಜಿಪಿಟಿ ನೀಡಿದ ಮಾಹಿತಿಯನ್ನು ಓದಿಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿದ್ದಾರೆ. ಚಾಟ್ ಜಿಪಿಟಿ ಒದಗಿಸಿದ ಎಲ್ಲಾ ಮಾಹಿತಿಯೂ ಪರೀಕ್ಷೆಗೆ ಬಂದಿದೆ. “ನಾನು ಪರೀಕ್ಷೆಯಲ್ಲಿ 94 ಪಡೆದಿದ್ದೇನೆ, ಆದರೆ ನಾನು ಒಂದೇ ಒಂದು ಪಾಠವನ್ನು ನೋಡದೆ ಕೇವಲ ಮೂರು ದಿನಗಳವರೆಗೆ ಚಾಟ್ ಜಿಪಿಟಿ ಕೊಟ್ಟ ಪ್ರಶ್ನೋತ್ತರಗಳನ್ನು ಓದಿದ್ದೇನೆ” ಎಂದು ರೆಡ್ಡಿಟ್ ಪೋಸ್ಟ್ ನಲ್ಲಿ ಬರೆದಿದ್ದಾರೆ.
ವಿದ್ಯಾರ್ಥಿ ಸೇರಿಸಿದರು, “ಇದು ಕಠಿಣ ಕೋರ್ಸ್ ಆಗಿರಲಿಲ್ಲ, ಆದರೆ ಇದು ತುಂಬಾ ವಿಸ್ತಾರವಾಗಿತ್ತು, ಸಾಕಷ್ಟು ಓದುವಿಕೆ ಮತ್ತು ತಿಳುವಳಿಕೆ ಇದರಿಂದ ಸಿಕ್ಕಿದೆ. ಚಾಟ್ ಜಿಪಿಟಿ ಉತ್ತಮವಾಗಿದೆ. ಏಕೆಂದರೆ ಇದು ಪಠ್ಯವನ್ನು ಅರ್ಥಮಾಡಿಕೊಳ್ಳುವಲ್ಲಿ ಪರಿಣತಿಯನ್ನು ಹೊಂದಿದೆ ಎಂದಿದ್ದಾರೆ.