Advertisement

ChatGPT: ಮುಂದಿನ ವರ್ಷ ಚಾಟ್‌ಜಿಪಿಟಿ ದಿವಾಳಿ?

09:09 PM Aug 13, 2023 | Team Udayavani |

ಹೊಸದಿಲ್ಲಿ: ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧಾರಿತ ಚಾಟ್‌ಜಿಪಿಟಿ ಶೀಘ್ರವೇ ದಿವಾಳಿಯತ್ತ ಸಾಗುವ ಆತಂಕ ಎದುರಾಗಿದೆ. ಅದರ ಮಾತೃಸಂಸ್ಥೆ ಓಪನ್‌ ಎಐ ಈಗಲೇ ವಿತ್ತೀಯ ಬಿಕ್ಕಟ್ಟಿಗೆ ಗುರಿಯಾಗಿದೆ. 2024ರ ವೇಳೆಗೆ ಅದು ದಿವಾಳಿ ಆಗಬಹುದು ಎಂದು “ಅನಾಲಿಟಿಕ್ಸ್‌ ಇಂಡಿಯಾ’ ನಿಯತಕಾಲಿಕ ವರದಿ ಮಾಡಿದೆ.

Advertisement

ಓಪನ್‌ ಎಐ ಹಲವಾರು ಎಐ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ನಿರ್ವಹಿಸುತ್ತಿದ್ದು, ಚಾಟ್‌ಜಿಪಿಟಿ ಒಂದಕ್ಕೇ ದಿನಕ್ಕೆ 5.80 ಕೋಟಿ ರೂ.ಗಳನ್ನು ವ್ಯಯಿಸುತ್ತಿದೆ. ಆದರೆ ಹಲವಾರು ಸಂಸ್ಥೆಗಳು ಕೂಡ ಪ್ರತಿಸ್ಪರ್ಧಿಗಳನ್ನು ಸೃಷ್ಟಿಸಿರುವ ಕಾರಣ ಚಾಟ್‌ಜಿಪಿಟಿ ಪ್ರಾಮುಖ್ಯ ಕುಸಿಯುತ್ತಿದೆ. ಜೂನ್‌ನಲ್ಲಿ 1.7 ಶತಕೋಟಿ ಬಳಕೆದಾರರನ್ನು ಹೊಂದಿದ್ದ ಚಾಟ್‌ಜಿಪಿಟಿ ಜುಲೈ ವೇಳೆಗೆ 1.5 ಶತಕೋಟಿ ಬಳಕೆದಾರರನ್ನು ಹೊಂದುವ ಮೂಲಕ ಶೇ. 12ರಷ್ಟು ಬಳಕೆದಾರರನ್ನು ಕಳೆದುಕೊಂಡಿದೆ. ಈಗ ಚಾಟ್‌ಜಿಪಿಟಿ 3.5 ಮತ್ತು ಜಿಪಿಟಿ4 ಎಂಬ ಸುಧಾರಿತ ಆವೃತ್ತಿಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. 2022ರ ನವೆಂಬರ್‌ನಲ್ಲಿ ಚಾಟ್‌ಜಿಪಿಟಿಯನ್ನು ಜಗತ್ತಿಗೆ ಪರಿಚಯಿಸಲಾಗಿತ್ತು. ಆರಂಭದಲ್ಲಿ ಚಾಟ್‌ಜಿಪಿಟಿಯನ್ನು ಬಳಸು ಹಿಂದೇಟು ಹಾಕಿದ್ದ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ಅದರ ಬಳಕೆಗೆ ಪ್ರೋತ್ಸಾಹ ನೀಡಲಾರಂಭಿಸಿವೆ.

ಇದರ ಜತೆಗೆ ಮೈಕ್ರೋಸಾಫ್ಟ್ ಸಹಭಾಗಿತ್ವದಲ್ಲಿ ಚಾಟ್‌ಜಿಪಿಟಿಯ ವಾಣಿಜ್ಯ ಬಳಕೆಗೆ ಪ್ರೋತ್ಸಾಹ ನೀಡಲಾಗಿತ್ತು. ಅದರಿಂದಲೂ ನಿರೀಕ್ಷಿತ ಯಶಸ್ಸು ಸಿಕ್ಕಿರಲಿಲ್ಲ. ಮೈಕ್ರೋಸಾಫ್ಟ್ ಓಪನ್‌ ಐಎನಲ್ಲಿ 10 ಬಿಲಿಯನ್‌ ಡಾಲರ್‌ ಹೂಡಿಕೆ ಮಾಡಿದ್ದು, ಅದುವೇ ಜೀವಾಳ ಎನ್ನುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next