Advertisement

ಮುಂಬಯಿ:ವಸತಿ ಪ್ರದೇಶದಲ್ಲೇ ಲಘು ವಿಮಾನ ಪತನ; 5 ಸಾವು 

02:06 PM Jun 28, 2018 | Team Udayavani |

ಮುಂಬಯಿ: ನಗರದ ಘಾಟ್‌ಕೋಪರ್‌ನ  ಸರ್ವೋದಯ ನಗರದಲ್ಲಿ ಲಘು ವಿಮಾನವೊಂದು ಗುರುವಾರ ಮಧ್ಯಾಹ್ನ ಪತನವಾಗಿದ್ದು ,ಐವರು ದಾರುಣವಾಗಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. 

Advertisement

ಉತ್ತರ ಪ್ರದೇಶ ಸರ್ಕಾರಕ್ಕೆ  ಸೇರಿದ ಚಾರ್ಟರ್ಡ್‌ ವಿಮಾನ ಇದಾಗಿದ್ದು,ಜನವಸತಿ ಪ್ರದೇಶದಲ್ಲಿ ಪತನವಾದೊಡನೆಯೇ ಭಾರೀ ಬೆಂಕಿ ಕಾಣಿಸಿಕೊಂಡಿದೆ. 

ಸ್ಥಳಕ್ಕೆ ಮೂರಕ್ಕೂ ಹೆಚ್ಚು ಅಗ್ನಿ ಶಾಮಕ ದಳದ ವಾಹನಗಳೊಂದಿಗೆ ಆಗಮಿಸಿರುವ ಸಿಬಂದಿಗಳು ಬೆಂಕಿ ನಂದಿಸಲು ಯತ್ನಿಸಿದ್ದಾರೆ.

ಪೊಲೀಸರು, ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಸಾರ್ವಜನಿಕರು ಸ್ಥಳಕ್ಕೆ ತೆರಳದಂತೆ ನಿಗಾ ವಹಿಸಿದ್ದಾರೆ. 

Advertisement

ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next