Advertisement

ತುಂಬೆ ಗ್ರೂಪ್‌ ಮತ್ತು ಬ್ಯಾರೀಸ್‌ ಕಲ್ಚರಲ್‌ ಫೋರಮ್‌ UAE TO ಮಂಗಳೂರಿಗೆ ಚಾರ್ಟರ್ಡ್‌ ವಿಮಾನ

08:41 AM Jul 23, 2020 | mahesh |

ಮಂಗಳೂರು: ಕೋವಿಡ್‌-19 ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಯುಎಇಯಲ್ಲಿ ಸಿಲುಕಿಕೊಂಡಿದ್ದವರನ್ನು ಮಂಗಳೂರಿಗೆ ಕರೆತರಲು ತುಂಬೆ ಸಮೂಹ ಸಂಸ್ಥೆ ಮತ್ತು ಬ್ಯಾರೀಸ್‌ ಕಲ್ಚರಲ್‌ ಫೋರಂ (ಬಿಸಿಎಫ್) ವತಿಯಿಂದ ಚಾರ್ಟರ್ಡ್‌ ವಿಮಾನ ವ್ಯವಸ್ಥೆ ಮಾಡಲಾಗಿದೆ. ಮೊದಲ ಹಂತವಾಗಿ ಬಿಎಸ್‌ಎಫ್ ಚಾರ್ಟರ್ಡ್‌ ವಿಮಾನ ಮಂಗಳವಾರ ಯುಎಇ ರಾಸ್‌ ಅಲ್‌ ಖೈಮಾದಿಂದ ಮಂಗಳೂರಿಗೆ ತಲುಪಿತು. ನೌಕರಿ ಕಳೆದುಕೊಂಡವರು, ವೀಸಾ ಅವಧಿ ಮುಗಿದವರು, ವಿವಿಧ ರೀತಿಯ ಅನಾರೋಗ್ಯದಿಂದ ಬಳಲುತ್ತಿದ್ದವರು, ಹಿರಿಯ ನಾಗರಿಕರು, ಗರ್ಭಿಣಿಯರು, ಮಕ್ಕಳ ಸಹಿತ 185 ಪ್ರಯಾಣಿಕರು ತಾಯ್ನಾಡಿಗೆ ತಲುಪಿದರು.

Advertisement

ತುಂಬೆ ಗ್ರೂಪ್‌ ಮಾಲಕ, ಬಿಸಿಎಫ್ ಸ್ಥಾಪಕ ಪೋಷಕ ಡಾ| ತುಂಬೆ ಮೊಯಿದೀನ್‌ ಹಾಗೂ ಬಿಎಸ್‌ಎಫ್ ಅಧ್ಯಕ್ಷ ಡಾ | ಬಿ.ಕೆ. ಯೂಸುಫ್ ಅವರ ನೇತೃತ್ವದಲ್ಲಿ ಬಿಸಿಎಫ್ ಪ್ರಧಾನ ಕಾರ್ಯದರ್ಶಿ ಡಾ| ಕಾಪು ಮೊಹಮದ್‌ ಹಾಗೂ ತುಂಬೆ ಗ್ರೂಪ್‌ನ ಫ‌ರ್ಹಾದ್‌ ಅವರ ಉಸ್ತುವಾರಿಯಲ್ಲಿ ಈ ಕಾರ್ಯ ನಡೆಯಿತು. ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿಸಿಎಫ್ ಪೋಷಕ ಮುಮ್ತಾಜ್‌ ಅಲಿಯವರ ನೇತೃತ್ವದಲ್ಲಿ ಮಾಜಿ ಶಾಸಕ ಮೊದಿನ್‌ ಬಾವಾ, ಯು.ಟಿ . ಇಫ್ತಿಕಾರ್‌, ಬಿಸಿಎಫ್ ಕೇಂದ್ರ ಅಧ್ಯಕ್ಷ ಎಸ್‌ಎಂಆರ್‌ ರಶೀದ್‌ ಅವರು ಪ್ರಯಾಣಿಕರನ್ನು ಸ್ವಾಗತಿಸಿದರು.

ಜು.24ಕ್ಕೆ ಇನ್ನೊಂದು ವಿಮಾನ
ಜು.24ರಂದು ತುಂಬೆ ಬಿಸಿಎಫ್ ಸಹಭಾಗಿತ್ವದಲ್ಲಿ ಇನ್ನೊಂದು ಚಾರ್ಟರ್ಡ್‌ ವಿಮಾನ ಮಂಗಳೂರಿಗೆ ಆಗಮಿಸಲಿದೆ. ಅಲ್ಲದೆ ಶೀಘ್ರದಲ್ಲಿ ಇನ್ನೂ ಇಂತಹ ಹಲವಾರು ವಿಮಾನಗಳು ತುಂಬೆ ಬಿಸಿಎಫ್ ಸಹಭಾಗಿತ್ವದಲ್ಲಿ ಆಗಮಿಸಲಿವೆ ಎಂದು ತುಂಬೆ ಬಿಸಿಎಫ್ ವಕ್ತಾರರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next