Advertisement

ಚಾರ್ಮಾಡಿ: ಲಘು ವಾಹನ ಸಂಚಾರಕ್ಕೆ ಮುಕ್ತ: ಉಭಯ ಜಿಲ್ಲಾಧಿಕಾರಿಗಳ ಆದೇಶ

01:49 AM Aug 14, 2021 | Team Udayavani |

ಬೆಳ್ತಂಗಡಿ: ರಾಷ್ಟ್ರೀಯ ಹೆದ್ದಾರಿ-73ರ ಚಾರ್ಮಾಡಿ ಘಾಟಿಯ 6ನೇ ತಿರುವಿನಲ್ಲಿ ಭೂಕುಸಿತ ಉಂಟಾಗಿದ್ದ ರಿಂದ, ಈ ಹಿಂದೆ ರಾತ್ರಿ ಸಂಚಾರ ಸಂಪೂರ್ಣ ನಿರ್ಬಂಧಿಸಲಾಗಿತ್ತು. ಪ್ರಸಕ್ತ ಹೆದ್ದಾರಿ ಇಲಾಖೆ ಅಗತ್ಯ ಕಾಮಗಾರಿ ಕೈಗೊಂಡಿದ್ದರಿಂದ ಪ್ರಯಾಣಿಕರ ಅಗತ್ಯತೆ ಹಾಗೂ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ದಿನದ 24 ತಾಸು ಲಘುವಾಹನ ಸಂಚಾರಕ್ಕೆ ಅವಕಾಶ ನೀಡಿ ದ.ಕ. ಹಾಗೂ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Advertisement

ಜು. 23ರಂದು 6ನೇ ತಿರುವಿನಲ್ಲಿ ಗುಡ್ಡ ಕುಸಿತ ಉಂಟಾದ ಬಳಿಕ ಘಾಟಿಯಲ್ಲಿ ಸಂಜೆ 7ರಿಂದ ಬೆ. 6ರ ತನಕ ಎಲ್ಲ ವಾಹನಗಳ ಸಂಚಾರ ನಿರ್ಬಂಧಿಸಲಾಗಿತ್ತು. ಇದರಿಂದ ಬೆಳಗ್ಗಿನ ಅವಧಿಯಲ್ಲಿ ವಾಹನದಟ್ಟಣೆ ಉಂಟಾಗಿ ಬಹಳಷ್ಟು ಸಮಸ್ಯೆ ಎದುರಾಗಿತ್ತು. ನಿರ್ಬಂಧ ತೆರವಿಗೆ ಶಾಸಕರಾದ ಬೆಳ್ತಂಗಡಿಯ ಹರೀಶ್‌ ಪೂಂಜ, ಮೂಡಿಗೆರೆಯ ಎಂ.ಪಿ.ಕುಮಾರಸ್ವಾಮಿ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್‌, ಹರೀಶ್‌ ಕುಮಾರ್‌ ಒತ್ತಡ ಹೇರಿದ್ದರಿಂದ ಲಘು ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಯಾವುದಕ್ಕೆಲ್ಲ ಅವಕಾಶ :

ಉಭಯ ಜಿಲ್ಲಾಧಿಕಾರಿಗಳು ಚರ್ಚಿಸಿ ಆ.12ರಂದು ಆದೇಶ ಹೊರಡಿಸಿದ್ದು ಟೆಂಪೋ ಟ್ರಾವೆಲರ್‌, ಆ್ಯಂಬುಲೆನ್ಸ್‌, ಕಾರು, ಜೀಪು, ಮಿನಿವ್ಯಾನ್‌ ಹಾಗೂ ಇನ್ನಿತರ ಲಘು ವಾಹನಗಳು ಘಾಟಿಯಲ್ಲಿ ದಿನಪೂರ್ತಿ ಸಂಚರಿಸಲು ಅವಕಾಶ ನೀಡಿದ್ದಾರೆ. ಘನ ವಾಹನಗಳಾದ ಕೆಂಪು ಬಸ್‌, ಆರು ಚಕ್ರದ ಲಾರಿಗಳಿಗೆ ಬೆ. 6ರಿಂದ ಸಂಜೆ 7ರ ತನಕ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ. ಬುಲೆಟ್‌ ಟ್ಯಾಂಕರ್‌, ರಾಜಹಂಸ, ಶಿಪ್‌ ಕಾರ್ಗೋ ಹಾಗೂ ಇನ್ನಿತರ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಸಂಪೂರ್ಣ ನಿಷೇಧ ಮುಂದುವರಿದಿದೆ.

Advertisement

Udayavani is now on Telegram. Click here to join our channel and stay updated with the latest news.

Next