Advertisement

ಚಾರ್ಮಾಡಿ ಘಾಟಿ ರಸ್ತೆ: ಭಾರೀ ವಾಹನ ನಿಷೇಧ

02:00 AM Dec 19, 2021 | Team Udayavani |

ಮಂಗಳೂರು: ರಾಷ್ಟ್ರೀಯ ಹೆದ್ದಾರಿ-73 (ಹಳೆ ರಾ.ಹೆ. 234) ಮಂಗಳೂರು- ತುಮಕೂರು ರಸ್ತೆಯ 75 ಕಿ.ಮೀ. (ಚಾರ್ಮಾಡಿ ಗ್ರಾಮ)ದಿಂದ 86.20 ಕಿ.ಮೀ. (ದಕ್ಷಿಣ ಕನ್ನಡ ಜಿಲ್ಲಾ ಗಡಿ) ವರೆಗಿನ ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಡಿ. 18ರಿಂದ ಮುಂದಿನ ಆದೇಶದವರೆಗೆ ದಿನದ 24 ಗಂಟೆಯೂ ಲಘು ಹಾಗೂ ಘನ ವಾಹನಗಳ ಸಂಚಾರಕ್ಕೆ ಮಾತ್ರ ಅನುಮತಿ ನೀಡಿ, ಹಾಗೂ ಭಾರೀ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಆದೇಶ ಹೊರಡಿಸಿದ್ದಾರೆ.

Advertisement

ಯಾವುದಕ್ಕೆ ಅವಕಾಶ
ಸಾರ್ವಜನಿಕರು ಸಂಚರಿಸುವ ಕೆಎಸ್ಸಾರ್ಟಿಸಿ ಕೆಂಪು ಬಸ್ಸು, ಆರು ಚಕ್ರದ ಲಾರಿ, ನಾಲ್ಕು ಚಕ್ರದ ವಾಹನಗಳು, ಟೆಂಪೋ ಟ್ರಾವೆಲರ್‌, ಆ್ಯಂಬುಲೆನ್ಸ್‌, ಕಾರು, ಜೀಪು, ವ್ಯಾನ್‌, ಎಲ್‌ಸಿವಿ (ಮಿನಿ ವ್ಯಾನ್‌) ಹಾಗೂ ದ್ವಿಚಕ್ರ ವಾಹನಗಳು ದಿನದ 24 ಗಂಟೆಯೂ ಸಂಚರಿಸಬಹುದಾಗಿದೆ.

ಯಾವುದಕ್ಕೆ ಅವಕಾಶ ಇಲ್ಲ
ಬುಲೆಟ್‌ ಟ್ಯಾಂಕರ್‌, ಪಿಪ್‌ ಕಾರ್ಗೋ ಕಂಟೈನರ್‌ ಹಾಗೂ ಲಾಂಗ್‌ ಚಾಸೀಸ್‌ ವಾಹನಗಳೂ, ಹೆವಿ ಕಮರ್ಶಿಯಲ್‌ ವೆಹಿಕಲ್‌, ಮಲ್ಟಿ ಆ್ಯಕ್ಸೆಲ್‌ ಟ್ರಕ್‌, ಟ್ರಕ್‌ ಟ್ರೈಲರ್‌, ಕೆಎಸ್ಸಾರ್ಟಿಸಿ ರಾಜಹಂಸ ಮತ್ತು ಎಲ್ಲ ಬಗೆಯ ಅಧಿಕ ಭಾರದ ಸರಕು ಸಾಗಣೆ ವಾಹನಗಳ ಸಂಚಾರವನ್ನು ದಿನದ 24 ಗಂಟೆಯೂ ನಿರ್ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next