Advertisement

ತಾಪಂ ಸಭೆಯಲ್ಲಿ ಸಿಡಿಪಿಒ ವಿರುದ್ಧ ಆರೋಪ

04:40 PM May 20, 2017 | Team Udayavani |

ಸೇಡಂ: ಅಂಗನವಾಡಿಗಳಲ್ಲಿ ಮಕ್ಕಳ ಅನುಪಸ್ಥಿತಿ ಮತ್ತು ಕೆಲ ಲೋಪದೋಷಗಳ ವಿರುದ್ಧ ತಾಪಂ ಸಭಾಂಗಣದಲ್ಲಿ ಸಭಾ ಅಧ್ಯಕ್ಷರೇ ಹೌಹಾರಿದ ಪ್ರಸಂಗ ನಡೆಯಿತು. ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ಬಗ್ಗೆ ಖುದ್ದು ತಾಪಂ ಅಧ್ಯಕ್ಷೆ ಸುರೇಖಾ ರಾಜಶೇಖರ ಪುರಾಣಿಕ ಅಸಮಾಧಾನ ವ್ಯಕ್ತಪಡಿಸಿದರು. 

Advertisement

ಅನೇಕ ಅಂಗನವಾಡಿಗಳಲ್ಲಿ ಮಕ್ಕಳೇ ಇರೋದಿಲ್ಲ. ಆದರೆ ಖರ್ಚು ವೆಚ್ಚ ಮಾತ್ರ ದಾಖಲೆಗಳಲ್ಲಿ ತೋರಿಸ್ತೀರಿ. ಆಹಾರ ಧಾನ್ಯಗಳು ಕಾಳಸಂತೆ ಮಾರಾಟ ಮಾಡಲಾಗುತ್ತಿದೆ ಎಂದು ಹೇಳಿದರು. ಆಗ ಕಕ್ಕಾಬಿಕ್ಕಿಯಾದ ಅಧಿಕಾರಿ ಅಶೋಕ ರಾಜನ್‌, ಕೆಲ ಕೇಂದ್ರಗಳಲ್ಲಿ ಮಾತ್ರ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಉತ್ತರಿಸಿದರು. 

ಈ ಕುರಿತು ವರದಿ ಮಾಡಿ, ಕ್ರಮಕ್ಕೆ ಸೂಚಿಸಿದಲ್ಲಿ ಕೆಲ ರಾಜಕಾರಣಿಗಳೇ ಅಂಗನವಾಡಿ ಕಾರ್ಯಕರ್ತೆಯರ ಪರ ನಿಲ್ಲುತ್ತಾರೆ ಎಂದು ಆರೋಪಿಸಿದರು. ಈ ವೇಳೆ ಸಭೆಯಲ್ಲಿದ್ದ ಬಹುತೇಕ ಸದಸ್ಯರು ಕರ್ತವ್ಯ ದ್ರೋಹ ಎಸಗುವ ಅಂಗನವಾಡಿ ಕಾರ್ಯಕರ್ತೆಯರನ್ನು ಮುಲಾಜಿಲ್ಲದೆ ತೆಗೆದು ಹಾಕುವಂತೆ ಒತ್ತಾಯಿಸಿದರು. 

ಸುಮಾರು ವರ್ಷಗಳಿಂದ ಇಲ್ಲಿಯೇ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿ ಮೇಲ್ವಿಚಾರಕಿಯರನ್ನು ಬೇರೆಡೆ ವರ್ಗಾಯಿಸಲು ಶಿಪಾರಸ್ಸು ಮಾಡುವಂತೆ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಯಿತು. ತಾಪಂ ಯೋಜನಾಧಿಕಾರಿ ಹಣಮಂತ ಮಾತನಾಡಿ ಪ್ರಸ್ತಕ ವರ್ಷಕ್ಕೆ ಸರ್ಕಾರದಿಂದ 21 ಕೋಟಿ ಅನುದಾನ ಬಂದಿದೆ. 

ಮುಂದಿನ ದಿನಗಳಲ್ಲಿ ಕ್ರಿಯಾ ಯೋಜನೆ ತಯಾರಿಸಲಾಗುವುದು. ಯಾವ ಯಾವ ಕೆಲಸ ಕೈಗೊಳ್ಳಬೇಕು ಎನ್ನುಉದರ ಬಗ್ಗೆ ಸದಸ್ಯರು ತಿಳಿಸಬೇಕು ಎಂದು ಹೇಳಿದರು. ತಾಲೂಕಿನ ಕೊತ್ತಾಪಲ್ಲಿ, ಕಾನಗಡ್ಡಾ, ಇಟಕಾಲ, ದುಗನೂರ, ಬಿಲಾಕಲ್‌, ಹಣಮನಹಳ್ಳಿ ಗ್ರಾಮಗಳನ್ನು 2017-18ನೇ ಸಾಲಿನ ಗೊಂಚಲು ಗ್ರಾಮಗಳನ್ನಾಗಿ ಆಯ್ಕೆಗೊಳಿಸಲಾಯಿತು. 

Advertisement

ಕೃಷಿ ಇಲಾಖೆ ಸಹಾಯಕ ನಿರ್ದೆಶಕ ಎ. ವೈ. ಹಂಪಣ್ಣ ಮಾತನಾಡಿ, ಮುಂಗಾರು ಬೆಳೆಗೆ ವಾಡಿಕೆಯಷ್ಟು ಮಳೆಯಾಗುತ್ತದೆ ಎನ್ನುವುದು ಹವಾಮಾನ ಇಲಾಖೆ ನಿರೀಕ್ಷೆಯಾಗಿದೆ. ಅದರಂತೆ ಈಗಾಗಲೇ ಬಿತ್ತನೆಗೆ ಬೇಕಾಗುವ ಬೀಜಗಳನ್ನು ಶೇಖರಿಸಲಾಗಿದೆ. ಯಾವುದೆ ರೀತಿಯಿಂದ ಬೀಜಗಳ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. 

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಗುರುನಾಥ ಶೆಟಗಾರ, ಸದಸ್ಯರಾದ ವೆಂಕಟರಾಮರೆಡ್ಡಿ ಕಡತಾಲ, ಚನ್ನಬಸಪ್ಪ ಹಾಗರಗಿ(ಜಗ್ಗು), ನಾಗರೆಡ್ಡಿ ದೇಶಮುಖ, ಸತ್ಯನಾರಾಯಣರೆಡ್ಡಿ ದೇಶಮುಖ, ಅನವೇಶರೆಡ್ಡಿ ಹೂವಿನಭಾವಿ, ಡಾ| ವೆಂಕಟರಾವ ಮಿಸ್ಕಿನ್‌, ಪ್ರೀತಿ ಸಾಯಿಬಣ್ಣ, ಸಿದ್ದಮ್ಮ ಶಾಮಪ್ಪ,

ರಾಮುನಾಯಕ, ಸುನೀತಾ ಪರಶುರಾಮರೆಡ್ಡಿ, ಇಂದ್ರಾದೇವಿ ಬಸವರಾಜಪ್ಪಗೌಡ, ಪದ್ಮಮ್ಮ ರವೀಂದ್ರ, ಮಲ್ಲಿಕಾರ್ಜುನರೆಡ್ಡಿ ಕೋಲಕುಂದಾ, ದೇವಮ್ಮ ರಾಮಲಿಂಗಪ್ಪ, ಅಧಿಕಾರಿಗಳಾದ ಸಂತೋಷ ಶೇಷಲು, ಮಾರುತಿ ನಾಯಕ, ಗುರುರಾಜ ಜೋಶಿ, ಶಶಿಕಾಂತ ನಂದೂರ, ಎಸ್‌.ಎಮ್‌. ನಾರಾಯಣಕರ್‌, 

ಮುಕುಂದರೆಡ್ಡಿ ಪಾಟೀಲ, ಸಂತೋಷಕುಮಾರ, ತಿಮ್ಮಾರೆಡ್ಡಿ, ಶಿವಶಂಕರ ಟಿ.ಡಿ, ಅಶೋಕ ಪಾಟೀಲ, ಭೀಮಾಶಂಕರ ಕಟ್ಟಿಮನಿ, ರಾಜು ಕುಲಕರ್ಣಿ, ಶಿವಪುತ್ರಪ್ಪ ಮಮ್ಮಶೆಟ್ಟಿ, ಮಂಜುನಾಥ ಭೂಶೆಟ್ಟಿ, ಎಸ್‌.ಎನ್‌. ರವೀಂದ್ರ, ಬಸವರಾಜ ಅವಂಟಿ ಇದ್ದರು. ರವಿ ಕುದುರೆನ್‌ ಸ್ವಾಗತಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next