Advertisement

ಚಿದು ಕುಟುಂಬಕ್ಕೇ ಚಾರ್ಜ್‌

08:27 AM May 12, 2018 | Team Udayavani |

ಚೆನ್ನೈ: ವಿದೇಶಗಳಲ್ಲಿ ಹೊಂದಿರುವ ಆಸ್ತಿ ವಿವರ ನೀಡದೇ ಇರುವುದಕ್ಕೆ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ, ಪತ್ನಿ ನಳಿನಿ ಚಿದಂಬರಂ, ಪುತ್ರ ಕಾರ್ತಿ ಚಿದಂಬರಂ, ಸೊಸೆ ಶ್ರೀನಿಧಿ ವಿರುದ್ಧ ಆದಾಯ ತೆರಿಗೆ ಇಲಾಖೆ ಆರೋಪಪಟ್ಟಿ ಸಲ್ಲಿಸಿದೆ. ಕಪ್ಪುಹಣ (ಘೋಷಣೆ ಮಾಡದೇ ಇರುವ ವಿದೇಶಿ ಆದಾಯ ಮತ್ತು ಆಸ್ತಿ) ಮತ್ತು ತೆರಿಗೆ ಹೇರುವ ಕಾಯ್ದೆ 2015ರ ಅನ್ವಯ ಮಾಜಿ ಸಚಿವರು ಸೇರಿದಂತೆ ಪೂರ್ಣ ಕುಟುಂಬದ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ. 

Advertisement

ಚಿದಂಬರಂ ಪತ್ನಿ ನಳಿನಿ ಚಿದಂಬರಂ ಕೇಂಬ್ರಿಜ್‌ನಲ್ಲಿ ಹೊಂದಿರುವ 5.37 ಕೋಟಿ ರೂ., ಪುತ್ರ ಕಾರ್ತಿ ಹೊಂದಿರುವ 80 ಲಕ್ಷ ರೂ., ಸೊಸೆ ಶ್ರೀನಿಧಿ ಅಮೆರಿಕದಲ್ಲಿ ಹೊಂದಿರುವ 3.28 ಕೋಟಿ ರೂ. ಮೌಲ್ಯದ ಆಸ್ತಿ ವಿವರಗಳನ್ನು ಆದಾಯ ತೆರಿಗೆ ಇಲಾಖೆಗೆ ಸಲ್ಲಿಸಿಲ್ಲ ಎಂದು ಆರೋಪಿಸಲಾಗಿದೆ.

ಇದರ ಜತೆಗೆ ಸದ್ಯ ಕಾರಾಗೃಹದಲ್ಲಿರುವ ಕಾರ್ತಿ ಚಿದಂಬರಂ ಸಹ ಮಾಲಕತ್ವ ಹೊಂದಿರುವ ಚೆಸ್‌ ಗ್ಲೋಬಲ್‌ ಅಡ್ವೆ„ಸರಿ ಎಂಬ ಸಂಸ್ಥೆಯ ತೆರಿಗೆ ಮಾಹಿತಿಯನ್ನೂ ಸಲ್ಲಿಸಿಲ್ಲ ಎಂದು ಆರೋಪ ಪಟ್ಟಿಯಲ್ಲಿ ಉಲ್ಲೇಖೀಸಲಾಗಿದೆ. ಈ ಬಗ್ಗೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್‌ ಕಳುಹಿಸ ಲಾಗಿದ್ದರೂ ಅವರು ಸಹಕರಿಸಿರಲಿಲ್ಲ. 2015ರಲ್ಲಿ ಈ ಕಾಯ್ದೆ ಜಾರಿಯಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next