Advertisement

ದಿಲ್ಲಿ : ಶಂಕಿತ ಅಲ್‌ ಕಾಯಿದಾ ಉಗ್ರನ ವಿರುದ್ಧ ಚಾರ್ಚ್‌ ಶೀಟ್‌

03:57 PM Jan 22, 2018 | Team Udayavani |

ಹೊಸದಿಲ್ಲಿ : ಕಳೆದ ವರ್ಷ ಆಗಸ್ಟ್‌ನಲ್ಲಿ ಸೌದಿ ಅರೇಬಿಯದಿಂದ ಭಾರತಕ್ಕೆ ಗಡಿಪಾರುಗೊಂಡಿದ್ದ ಶಂಕಿತ ಅಲ್‌ ಕಾಯಿದಾ ಉಗ್ರ ಜೀಶನ್‌ ಅಲಿ ವಿರುದ್ಧ ದಿಲ್ಲಿ ಪೊಲೀಸರು ಇಂದು ಸೋಮವಾರ ದೋಷಾರೋಪ ಪಟ್ಟಿಯನ್ನು ಇಲ್ಲಿನ ಹೆಚ್ಚುವರಿ ಸೆಶನ್ಸ್‌ ನ್ಯಾಯಾಲಯದಲ್ಲಿ ಸಲ್ಲಿಸಿದ್ದಾರೆ.

Advertisement

ಜೀಶನ್‌ ಅಲಿ ಅಲ್‌ ಕಾಯಿದಾ ಉಗ್ರ ಸಂಘಟನೆಗೆ ಯುವಕರು ಸೇರುವಂತ ಪ್ರಚೋದನಕಾರಿ ಭಾಷಣ ಮಾಡುತ್ತಿದ್ದ ಮತ್ತು ಭಾರತದಲ್ಲಿ ಅಲ್‌ ಕಾಯಿದಾ ನೆಲೆಯನ್ನು ಸ್ಥಾಪಿಸುವ ಯತ್ನವನ್ನು ಮಾಡಿದ್ದ ಎಂಬ  ಬಗ್ಗೆ ಆತನ ವಿರುದ್ಧ ಕೇಸು ದಾಖಲಾಗಿದೆ. 

ಹೆಚ್ಚುವರಿ ಸೆಶನ್ಸ್‌ ನ್ಯಾಯಾಧೀಶ ಸಿದ್ಧಾರ್ಥ ಶರ್ಮಾ ಅವರು ಈ ಕೇಸಿನ ವಿಚಾರಣೆಯನ್ನು ಫೆ.2ರಂದು ಕೈಗತ್ತಿಕೊಳ್ಳಲಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next