Advertisement

ಜೈಲ್‌ಗೆ ಹೋದವರಿಂದ ಚಾರ್ಜ್‌ಶೀಟ್‌: ವ್ಯಂಗ್ಯ

12:54 PM May 13, 2017 | Team Udayavani |

ಹರಪನಹಳ್ಳಿ: ಕಾಂಗ್ರೆಸ್‌ ಸರ್ಕಾರ 4 ವರ್ಷ ಪೂರೈಸಿ 5ನೇ ವಸಂತಕ್ಕೆ ಪಾದಾರ್ಪಣೆ ಮಾಡುತ್ತಿರುವ ಸಂದರ್ಭದಲ್ಲಿ ಬಿಜೆಪಿ ಕಾಂಗ್ರೆಸ್‌ ವಿರುದ್ಧ ಆರೋಪ ಪಟ್ಟಿ ಕೈಪಿಡಿ ಬಿಡುಗಡೆ ಮಾಡಿರು ವುದನ್ನು ಖಂಡಿಸಿರುವ ಕೆಪಿಸಿಸಿ ಸದಸ್ಯ, ರೇಷ್ಮೆ ಉದ್ಯಮ ನಿಗಮದ ಮಾಜಿ ಅಧ್ಯಕ್ಷ ಡಿ.ಬಸವರಾಜ್‌ ಅವರು “ಜೈಲ್‌ಗೆ ಹೋಗಿ ಬೇಲ್‌ ಮೇಲೆ ಬಿಡುಗಡೆಗೊಂಡಿರುವವರು ಚಾರ್ಜ್‌ಶೀಟ್‌ ಬಿಡುಗಡೆ ಮಾಡುತ್ತಾರೆಂದರೆ ದೇಶದ ನ್ಯಾಯಾಂಗ ವ್ಯವಸ್ಥೆ ಎಲ್ಲಿಗೆ ಬಂದಿದೆ ನೋಡಿ’ ಎಂದು ವ್ಯಂಗ್ಯವಾಡಿದ್ದದಾರೆ.

Advertisement

ಪಟ್ಟಣದಲ್ಲಿ ಶಾಸಕ ಎಂ.ಪಿ.ರವೀಂದ್ರ ಅವರ ನಿವಾಸದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಗರಣದಲ್ಲಿ ಜೈಲು ಪಾಲಾದವರು, ಕಳ್ಳರು, ಸುಳ್ಳರು, ಸಿಬಿಐ ಪ್ರಕರಣ ಎದುರಿಸುತ್ತಿರುವವರು ಸೇರಿಕೊಂಡು ಆರೋಪ ಪಟ್ಟಿ ಬಿಡುಗಡೆ ಮಾಡಿರುವುದು ಹಾಸ್ಯಹಾಸ್ಪದ.

ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರೂ ಸಾಲಮನ್ನಾ ಮಾಡದ, ಬರಪರಿಹಾರ ನೀಡದೇ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ  ಬಿಜೆಪಿ ನಾಯಕರು ಚಾರ್ಜ್‌ಶೀಟ್‌ ಸಲ್ಲಿಸಲಿ ಎಂದರು. ಬಿಜೆಪಿ ಮನೆಯೊಂದು, ನೂರು ಬಾಗಿಲು ಎಂಬುವಂತಾಗಿದೆ.

ಬಿಜೆಪಿ ಯದ್ದು ಮಿಷನ್‌-150 ಅಲ್ಲ 420 ಆಗಲಿದೆ. ಹೊಡೆದು ಹೋಗಿರುವ ರಾಜ್ಯದ ಬಿಜೆಪಿ  ನಾಯಕರ ಮನಸ್ಸುಗಳನ್ನು ಹೈಕಮಾಂಡ್‌ ಒಂದುಗೂಡಿಸಲು ಸಾಧ್ಯವಿಲ್ಲ. ಹಸಿವು ಮುಕ್ತ ರಾಜ್ಯವನ್ನಾಗಿಸಲು ಜಾರಿಗೊಂಡ ಅನ್ನಭಾಗ್ಯ, ಕ್ಷೀರಭಾಗ್ಯ ಸೇರಿದಂತೆ ಅನೇಕ  ಭಾಗ್ಯಗಳನ್ನು ಕಲ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ದೇವರಾಜು ಅರಸು ನಂತರ ಕಂಡ ಧೀಮಂತ ನಾಯಕ.

ಬಿಜೆಪಿ ಏನೇ ತಿಪ್ಪರಲಾಗ ಹಾಕಿದ್ದರೂ ಸಿದ್ದರಾಮಯ್ಯ ನೇತೃತ್ವದಲ್ಲಿ ಚುನಾವಣೆ ಎದುರಿಸಿ ಮುಂದಿನ ಅವಧಿಧಿಗೆ ಅಧಿಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜಿಲ್ಲಾ ಕಾಂಗ್ರೆಸ್‌ ಕಾರ್ಯದರ್ಶಿ ಎಂ.ವಿ.ಅಂಜಿನಪ್ಪ, ಪುರಸಭೆ ಸದಸ್ಯರಾದ ಸಿ.ಜಾವೀದ್‌, ವಕೀಲ ವೆಂಕಟೇಶ್‌, ಅಬ್ದುಲ್‌ ರಹಿಮಾನಸಾಬ್‌, ತಾ.ಪಂ ಸದಸ್ಯ ಓ.ರಾಮಪ್ಪ, ನಟೇಶಕುಮಾರ್‌ ಸುದ್ದಿಗೋಷ್ಠಿಯಲ್ಲಿದ್ದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next