Advertisement

ಹಿಪೋಕ್ರ್ಯಾಟಿಕ್‌ನಿಂದ ಚರಕ ಶಪಥದ ಕಡೆಗೆ

11:52 PM Feb 12, 2022 | Team Udayavani |

ಸದ್ಯದಲ್ಲೇ ಭಾರತೀಯ ವೈದ್ಯರ “ಸಾಂಪ್ರದಾಯಿಕ ಪ್ರತಿಜ್ಞೆೆ’ಯಿಂದ ಗ್ರೀಸ್‌ ವೈದ್ಯ ಹಿಪೋಕ್ರ್ಯಾಟ್‌ ಹೆಸರು ಮಾಯವಾಗಲಿದೆ. ಜಗತ್ತಿನಾದ್ಯಂತ ಚಾಲ್ತಿಯಲ್ಲಿರುವ “ಹಿಪೋಕ್ರ್ಯಾಟಿಕ್‌ ಓತ್‌’ ಅನ್ನು ಬದಲಿಸಿ, ಆ ಜಾಗಕ್ಕೆ “ಚರಕ ಶಪಥ’ವನ್ನು ತರಲು ರಾಷ್ಟ್ರೀಯ ವೈದ್ಯಕೀಯ ಆಯೋಗ(ಎನ್‌ಎಂಸಿ) ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ಶಪಥಗಳ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಹಿಪೋಕ್ರ್ಯಾಟಿಕ್‌ ಓತ್‌ ಎಂದರೇನು? :

ಜಗತ್ತಿನಾದ್ಯಂತ ವೈದ್ಯರು ಕೈಗೊಳ್ಳುವ ನೈತಿಕ ಪ್ರತಿಜ್ಞೆಯನ್ನು “ಹಿಪ್ಪೋಕ್ರ್ಯಾಟಿಕ್‌ ಓತ್‌’ ಎಂದು ಕರೆಯುತ್ತಾರೆ. ಗ್ರೀಸ್‌ ವೈದ್ಯ ಹಿಪೋಕ್ರೇಟ್ಸ್‌ ಬರೆದಿರುವ ಸಂಹಿತೆಯಿದು. ವೈದ್ಯ ವಿದ್ಯಾರ್ಥಿಗಳು ಪ್ರೀ-ಕ್ಲಿನಿಕಲ್‌ ಅಧ್ಯಯನ ಮುಗಿಸಿ ಕ್ಲಿನಿಕಲ್‌ ಅಧ್ಯಯನಕ್ಕೆ ಪ್ರವೇಶ ಪಡೆಯುವಾಗ (ವೈಟ್‌ ಕೋಟ್‌ ಸಮಾರಂಭ) ಈ ಶಪಥವನ್ನು ಮಾಡುತ್ತಾರೆ. “ತಾವು ನಿರ್ದಿಷ್ಟ ನೈತಿಕ ಮಾನದಂಡಗಳನ್ನು ಅನುಸರಿಸುತ್ತೇನೆ’ ಎಂದು ರೋಗಗಳನ್ನು ಉಪಶಮನಗೊಳಿಸುವ ಹಲವಾರು ದೇವ- ದೇವತೆಗಳ ಹೆಸರಿನಲ್ಲಿ ಪ್ರಮಾಣ ಮಾಡುವುದನ್ನೇ “ಹಿಪ್ಪೋಕ್ರ್ಯಾಟಿಕ್‌ ಓತ್‌’ ಎನ್ನುತ್ತಾರೆ.

ಚರಕ ಶಪಥ ಎಂದರೇನು? :

ಪ್ರಾಚೀನ ಆಯುರ್ವೇದ ವಿಜ್ಞಾನದ ಪಿತಾಮಹ ಹಾಗೂ “ಚರಕ ಸಂಹಿತೆ’ಯ ಕತೃì ಆಗಿರುವ ಮಹರ್ಷಿ ಚರಕ ಅವರನ್ನು ಗೌರವಿಸುವ ಶಪಥ ಇದಾಗಿದೆ. ಇದನ್ನು ಮೂಲತಃ ಸಂಸ್ಕೃತದಲ್ಲಿ ಬರೆಯಲಾಗಿದೆ. ಆದರೆ ಈಗ ಹಿಂದಿ ಮತ್ತು ಆಂಗ್ಲ ಭಾಷೆಗೂ ತರ್ಜುಮೆಯಾಗಿದೆ.

Advertisement

ಚರಕ ಶಪಥದಲ್ಲೇನಿದೆ? :

“ನನಗಾಗಿ ಅಲ್ಲ, ಯಾವುದೇ ಭೌತಿಕ ಆಸೆ ಅಥವಾ ಲಾಭದ ಉದ್ದೇಶಕ್ಕಾಗಿಯೂ ಅಲ್ಲ. ಬದಲಿಗೆ ನೋವಿನಲ್ಲಿರುವ ಮಾನವತೆಯ ಅಭ್ಯುದಯದ ಏಕೈಕ ಉದ್ದೇಶದಿಂದ, ನಾನು ನನ್ನ ರೋಗಿಗೆ ಚಿಕಿತ್ಸೆ ನೀಡುತ್ತೇನೆ’ ಎಂಬ ಅಂಶ ಚರಕ ಶಪಥದಲ್ಲಿದೆ. “ಚರಕವು ನಮ್ಮ ತಾಯಿನಾಡಿಗೆ ಸಂಬಂಧಿಸಿದ್ದು. ಹೀಗಾಗಿ ವೈಟ್‌ ಕೋಟ್‌ ಕಾರ್ಯಕ್ರಮದ ವೇಳೆ ಯಾವುದೋ ಗ್ರೀಸ್‌ ವೈದ್ಯನ ಪ್ರತಿಜ್ಞೆೆಯನ್ನು ಓದುವ ಬದಲು, ಸ್ಥಳೀಯ ಭಾಷೆಗಳಲ್ಲಿ ಚರಕ ಶಪಥ ಮಾಡುವುದು ಸೂಕ್ತ’ ಎನ್ನುವುದು ರಾಷ್ಟ್ರೀಯ ವೈದ್ಯಕೀಯ ಆಯೋಗದ ವಾದ.

ಪರ-ವಿರೋಧ ಚರ್ಚೆ :

ಆಯೋಗದ ಪ್ರಸ್ತಾವದ ಬೆನ್ನಲ್ಲೇ ಈ ಕುರಿತು ಪರ-ವಿರೋಧ ಚರ್ಚೆಗಳು ಶುರುವಾಗಿವೆ. ಕೆಲವು ವೈದ್ಯರು ಹಾಗೂ ವೈದ್ಯ ವಿದ್ಯಾರ್ಥಿಗಳು ಇದೊಂದು ಉತ್ತಮ ನಡೆ ಎಂದು ಹೇಳಿದ್ದರೆ, ಮತ್ತೆ ಕೆಲವರು “ಇದರ ಅಗತ್ಯವಿರಲಿಲ್ಲ’ ಎಂದಿದ್ದಾರೆ. “ಪ್ರಮಾಣ ಸ್ವೀಕಾರ ಸಮಾರಂಭದಲ್ಲಿ ಹೇಳುವ ಪದಗಳಿಗಿಂತಲೂ ನಮ್ಮ ಹೃದಯದಲ್ಲಿರುವ ಭಾವನೆಯಷ್ಟೇ ಮುಖ್ಯವಾಗುತ್ತದೆ. ಶಪಥವು ಸ್ಥಳೀಯ ಭಾಷೆಯಲ್ಲಿರುವುದು ಒಳ್ಳೆಯ ಯೋಚನೆ’ ಎಂದು ತಮಿಳುನಾಡಿನ ವಿದ್ಯಾರ್ಥಿನಿ ಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ. “ಶ್ರೀಮಂತ ವೈದ್ಯಕೀಯ ಇತಿಹಾಸವಿರುವ ನಮ್ಮ ದೇಶದಲ್ಲಿ ನಾವೇಕೆ ಗ್ರೀಸ್‌ ವೈದ್ಯನ ಹೆಸರಲ್ಲಿ ಶಪಥ ಮಾಡಬೇಕು’ ಎಂದೂ ಕೆಲವರು ಪ್ರಶ್ನಿಸಿದ್ದಾರೆ. ಭಾರತೀಯ ವೈದ್ಯಕೀಯ ಸಂಘವು ಈ ಪ್ರಸ್ತಾವ‌ಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದೆ. ಆಧುನಿಕ ವೈದ್ಯರಿಗೆ ಚರಕ ಶಪಥವು ಹೊಂದಾಣಿಕೆ ಯಾಗುವುದಿಲ್ಲ ಎಂದಿದೆ.

ಪ್ರತಿಜ್ಞೆೆಯಲ್ಲಿ ಏನಿರುತ್ತದೆ? :

  • ವೈದ್ಯ ವಿದ್ಯಾರ್ಥಿಗಳಿಗೆ ಕಲಿಸುವಂಥ ಗುರು(ವೈದ್ಯ)ವಿನ ಹೊಣೆಗಾರಿಕೆಗಳು
  • ಗುರುಗಳಿಗಾಗಿ ವಿದ್ಯಾರ್ಥಿಗಳು ಮಾಡಬೇಕಾದ ಕರ್ತವ್ಯಗಳು
  • ತನ್ನ ಸಾಮರ್ಥ್ಯಕ್ಕನುಗುಣವಾಗಿ ರೋಗಿಗೆ ಅನುಕೂಲವಾಗುವ ಚಿಕಿತ್ಸೆಯನ್ನೇ ನೀಡುತ್ತೇನೆ ಎಂಬ ಶಪಥ ಯಾರಿಗೂ ನೋವು ಅಥವಾ ಹಾನಿ ಉಂಟುಮಾಡುವುದಿಲ್ಲ ಎಂಬ ಪ್ರತಿಜ್ಞೆ
  • ವೈಯಕ್ತಿಕವಾಗಿ ಮತ್ತು ವೃತ್ತಿಪರವಾಗಿ ಉತ್ತಮ ಜೀವನ ನಡೆಸುತ್ತೇನೆ ಎಂಬ ಪ್ರಮಾಣ
Advertisement

Udayavani is now on Telegram. Click here to join our channel and stay updated with the latest news.

Next