Advertisement

Karnataka ಪಂಪಾಸರೋವರದ ತಟದಲ್ಲಿ ಸಾವಿರಾರು ಸುಮಂಗಲಿಯರಿಂದ  ಹನುಮಾನ್ ಚಾಲೀಸಾ ಪಠಣ

10:50 AM Jan 09, 2024 | Team Udayavani |

ಗಂಗಾವತಿ:‌ ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ನಡೆದಾಡಿದ ಪವಿತ್ರ ಕಿಷ್ಕಿಂಧಾ ಅಂಜನಾದ್ರಿ, ಪಂಪಾಸರೋವರ ಹಾಗೂ ಋಷಿಮುಖ ಪರ್ವತ ಪ್ರದೇಶದಿಂದ ಅಯೋಧ್ಯೆಗೆ ಶ್ರೇಷ್ಠ ಸಂದೇಶ ಸಾರುವ ನಿಟ್ಟಿನಲ್ಲಿ ಕಲಿಯುಗದಲ್ಲಿಯೂ ಶ್ರೀ ರಾಮನ ಭಂಟ ಆಂಜನೇಯನ ಸನ್ನಿಧಾನದಲ್ಲಿ ಹನುಮಾನ ಚಾಲೀಸಾ ಪಠಣ ಮಾಡಿ ಲೋಕಾ ಕಲ್ಯಾಣಕ್ಕಾಗಿ ಶ್ರೀರಾಮ ಮಂದಿರ ಸದಾ ಕಾರ್ಯ ಮಾಡಲು ಕಿಷ್ಕಿಂಧಾ ಭೂಮಿ ಪ್ರೇರಣೆಯಾಗಿದೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಹೇಳಿದರು.

Advertisement

ಅವರು ತಾಲೂಕಿನ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶದ ಪಂಪಾಸರೋವರದಲ್ಲಿ ಫೌಂಡೇಶನ್ ಫಾರ್ ಹೋಲಿಸ್ಟಿಕ್ ಡೆವಲಪ್ಮೆಂಟ್, ಮಾತೃಶಕ್ತಿ ಕಾ ತಾಂಡವ್ ಅವರ ವತಿಯಿಂದ ಆಯೋಜಿಸಲಾದ ಹನುಮಾನ್ ತಾಂಡವ ಸಾಮೂಹಿಕ ಸ್ತೋತ್ರ ಪಠಣ ಕಾರ್ಯಕ್ರಮಕ್ಕೆ ಪತ್ನಿ ಅರುಣಾ ಲಕ್ಷ್ಮಿ ರೆಡ್ಡಿ ಸಮೇತ ಚಾಲನೆ ನೀಡಿ ಮಾತನಾಡಿದರು.

ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಉದ್ಘಾಟನೆಗೊಳ್ಳುತ್ತಿರುವ ರಾಮ ಮಂದಿರ ಕಾರ್ಯಕ್ರಮದ ಯಶಸ್ಸು ಮತ್ತು ಲೋಕಕಲ್ಯಾಣಾರ್ಥವಾಗಿ ಶ್ರೀ ಹನುಮಾನ್ ಜನ್ಮಭೂಮಿ ಅಂಜನಾದ್ರಿ ಸಮೀಪದ ಪ್ರಸಿದ್ಧ ಪಂಪ ಸರೋವರದಲ್ಲಿ ಈ ಕಾರ್ಯಕ್ರಮ ನಡೆಸುತ್ತಿರುವುದು ರಾಮಾಯಣ ಕಾಲವನ್ನು ನೆನಪಿಸುತ್ತಿದೆ ಎಂದು ಹೇಳಿದರು.

ಈ ಸಂಸ್ಥೆಯು ಸಂಕಷ್ಟಕ್ಕೊಳಗಾಗಿರುವ ಕುಟುಂಬಗಳಿಗೆ ಸ್ತೋತ್ರ ಪಠಣ ಮತ್ತು ಕಲಿಕಾ ಕಾರ್ಯಕ್ರಮಗಳ ಮೂಲಕ ಮಾನಸಿಕವಾಗಿ ಸದೃಢರನ್ನಾಗಿ ಮಾಡಲಾಗುತ್ತಿದೆ. ಸನಾತನ ಧರ್ಮ ಮತ್ತು ಭಾರತೀಯ ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ವೈವಿಧ್ಯಮಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಇಂದು ಪವಿತ್ರ ಪಂಪ ಸರೋವರದಲ್ಲಿ ದೇಶ ವಿದೇಶಗಳಿಂದ ಹಾಗೂ ವಿವಿಧ ಭಾಗಗಳಿಂದ ಸಾವಿರಕ್ಕೂ ಹೆಚ್ಚು ಮಹಿಳೆಯರು ಹನುಮಾನ್ ತಾಂಡವ ಸಾಮೂಹಿಕ ಸ್ತೋತ್ರ ಪಠಣ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಕರ್ನಾಟಕದ 150 ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿದೆ ಎಂದರು.

Advertisement

ಸುರ್ಯೋದಯಕ್ಕೂ ಮುನ್ನ ಸಾವಿರಾರು ಮಹಿಳೆಯರು ಶಿಸ್ತಿನಿಂದ ಪಂಪ ಸರೋವರದ ಸುತ್ತಲೂ ದೀಪ ಬೆಳಗುವ ಮೂಲಕ ಹನುಮಾನ್ ತಾಂಡವ ಸ್ತೋತ್ರ ಪಠಣ ಮಾಡಿದ್ದು, ಲೋಕಕಲ್ಯಾಣಕ್ಕೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಜ.22 ರಂದು ಪ್ರಭು ಶ್ರೀ ರಾಮನ ಭವ್ಯ ಮಂದಿರ ಲೋಕಾರ್ಪಣೆ ಇಡೀ ಭರತ ಭೂಮಿಗೆ ಒಳ್ಳೆಯ ಸಂದೇಶ ರವಾನೆಯಾಗುತ್ತಿದೆ. ಅಯೋಧ್ಯೆಯಂತೆ ಕಿಷ್ಕಿಂಧಾ ಅಂಜನಾದ್ರಿ ಪ್ರದೇಶವನ್ನು ಮೂಲಸ್ವರೂಪಕ್ಕೆ ಧಕ್ಕೆಯಾಗದಂತೆ ಯೋಜನೆ ರೂಪಿಸಿ ಅನುಷ್ಠಾನ ಮಾಡಲಾಗುತ್ತದೆ ಎಂದರು.

ಈ ಸಂದರ್ಭದಲ್ಲಿ ಶಾಸಕ ಗಾಲಿ ಜನಾರ್ದನರೆಡ್ಡಿ ಅವರ ಧರ್ಮಪತ್ನಿ ಲಕ್ಷ್ಮಿ ಅರುಣ ರೆಡ್ಡಿ, ಸಂಸ್ಥೆಯ ಸಂಚಾಲಕಿ ಮಾಧುರಿ ಸಾಹಸ್ರಬುದ್ದೆ, ಸಂಸ್ಥೆಯ ಪ್ರತಿನಿಧಿಗಳಾದ ಶೈಲಜಾ ವಿಠ್ಠಲ್, ಅಧ್ಯಕ್ಷೆ ರತ್ನಶ್ರೀ ಶ್ರೀಕೃಷ್ಣದೇವರಾಯ, ಕೇಶವ, ಪ್ರೊ. ಮೀನಾ ಚಂದ್ರವರ್ಕರ್, ಶ್ರೀಪಾದ್ ಪತ್ತಿಕೊಂಡ, ಗಾಯಕ್ವಾಡ್ ಭೀಮರಾವ್ ಪ್ರಶಾಂತ್,  ದಿವ್ಯ ಕಂದಕೂರ್, ಮಹಾದೇವಿ ಬೋಧನಕರ್, ವೈಶಾಲಿ ಜೋಶಿ, ಅವಂತಿ ದೀಕ್ಷಿತ್, ಊರ್ಮಿಳಾ ಜೋಶಿ, ದಿವ್ಯ ಎಸ್, ಅನುಪಮಾ,ಗಾಯತ್ರಿ ಮೊಹೊಲೆ, ವಿನುತಾ ಮಂಜುನಾಥ ಹಾಗೂ ಬಿಜೆಪಿ ಮುಖಂಡ ಕೆಲೋಜಿ ಸಂತೋಷ,ಕೆಆರ್ ಪಿ ಪಕ್ಷದ ಮುಖಂಡರುಗಳಾದ ಡಿ.ಕೆ ಅಗೋಲಿ, ಯಮನೂರ್ ಚೌಡ್ಕಿ, ಚಂದ್ರಶೇಖರ್ ಹಿರೂರು, ರಮೇಶ್ ಹೊಸಮಲಿ, ಆನಂದ ಗೌಡ, ಬೆಟ್ಟಪ್ಪ ಬೆಣಕಲ್, ವಿರೂಪಾಕ್ಷಗೌಡ ಹೇರೂರು, ಅರ್ಜುನ್ ನಾಯಕ್ ಇನ್ನಿತರ ಮುಖಂಡರು ಕಾರ್ಯಕರ್ತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next